ದಸರಾ ಹಬ್ಬ ಬರುತ್ತಿದೆ! ಮನೆಯಲ್ಲಿ ಬೊಂಬೆಗಳನ್ನು ಕೂರಿಸುವುದು ಯಾಕೆ ಗೊತ್ತಾ!!

By Infoflick Correspondent

Updated:Monday, September 12, 2022, 10:09[IST]

ದಸರಾ ಹಬ್ಬ ಬರುತ್ತಿದೆ! ಮನೆಯಲ್ಲಿ ಬೊಂಬೆಗಳನ್ನು ಕೂರಿಸುವುದು ಯಾಕೆ ಗೊತ್ತಾ!!

ಮೈಸೂರು ದಸರಾ ಎಂದರೆ ಅದು ಬರೀ ಮೈಸೂರಿಗೆ ಸೀಮಿತವಾಗಿಲ್ಲ, ಬದಲಿಗೆ ಕರ್ನಾಟಕದ ನಾಡಹಬ್ಬವಾಗಿದೆ. ಈ ನಾಡಹಬ್ಬದಲ್ಲಿ ಹಲವಾರು ವಿಶೇಷತೆಗಳನ್ನು ಕಾಣಬಹುದು. ಅದರಲ್ಲೊಂದು ಗೊಂಬೆ ಕೂರಿಸುವುದು. ಮೈಸೂರಿನ ಮನೆಗಳಲ್ಲಿ ಗೊಂಬೆಯನ್ನು ಕೂರಿಸಿ ನಾಡಹಬ್ಬವನ್ನು ಆಚರಿಸುತ್ತಾರೆ.

ದಸರಾ ಹಬ್ಬಕ್ಕೆ ಈ ಗೊಂಬೆ ಕೂರಿಸುವ ಪದ್ಧತಿ ಸುಮಾರು 18 ನೇ ಶತಮಾನದಿಂದಲೂ ಜಾರಿಗೆ ಬಂತು ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಆಚರಣೆ ಕಡಿಮೆಯಾಗುತ್ತದೆ. 

ಗೊಂಬೆ ಕೂರಿಸುವುದು ಯಾವಾಗ ಪ್ರಾರಂಭವಾಯಿತು.

ದಸರಾಗೆ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿ ಅಲಂಕರಿಸಿ ಅವುಗಳನ್ನು ಪೂಜಿಸುವ ಪದ್ಧತಿಯು ಮೈಸೂರು ರಾಜರ ಕಾಲದಲ್ಲಿ ಮೊಟ್ಟಮೊದಲು ಆರಂಭವಾಯಿತು ಎನ್ನಲಾಗುತ್ತದೆ. ಜಗತ್ ಪ್ರಸಿದ್ಧಿಯಾಗಿರುವ ಮೈಸೂರು ದಸರಾ ಮೈಸೂರು ಅರಮನೆಯಲ್ಲಿ ನಡೆದರೆ ಮೈಸೂರು ಪ್ರಾಂತ್ಯದ ಪ್ರಜೆಗಳ ಮನೆಗಳಲ್ಲಿ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಪ್ರಾರಂಭವಾಯಿತು. ಹೀಗೆ ಪ್ರಜೆಗಳು ದಸರಾ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರು.

ಈ ಗೊಂಬೆ ಕೂರಿಸುವ ಪದ್ಧತಿ ವಿಜಯನಗರ ಸಾಮ್ರಾಜ್ಯದಲ್ಲಿದ್ದು ಅದೇ ಸಂಪ್ರದಾಯವನ್ನು ಮೈಸೂರು ಒಡೆಯರು ಈ ಪ್ರಾಂತ್ಯದ ಜನರಿಗೆ ಪರಿಚಯಿಸಿದರು ಎಂದು ಹೆಳಲಾಗುತ್ತದೆ. ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ ವಿದೇಶಿಗರು ಈ ಕುರಿತು ಬರದಿರುವ ಉಲ್ಲೇಖಗಳಿವೆ. ಬೊಂಬೆ ಪ್ರದರ್ಶನದ ಪರಂಪರೆ ಮೈಸೂರು ಒಡೆಯರ ಕಾಲದಲ್ಲಿಯೇ ಹುಟ್ಟಿಕೊಂಡಿತು ಎಂಬ ಪ್ರತೀತಿಯೂ ಇದೆ.