ರವಿಚಂದ್ರನ್ ಏಕೆ ಕಪ್ಪು ಬಣ್ಣದ ಉಡುಪನ್ನೇ ಧರಿಸುತ್ತಾರೆ ಎಂಬ ಗುಟ್ಟನ್ನು ರಟ್ಟು ಮಾಡಿದ ಬಾದಷಾ

By Infoflick Correspondent

Updated:Tuesday, March 8, 2022, 11:06[IST]

ರವಿಚಂದ್ರನ್ ಏಕೆ ಕಪ್ಪು ಬಣ್ಣದ ಉಡುಪನ್ನೇ ಧರಿಸುತ್ತಾರೆ ಎಂಬ ಗುಟ್ಟನ್ನು ರಟ್ಟು ಮಾಡಿದ ಬಾದಷಾ

ಬಣ್ಣದ ಲೋಕದಲ್ಲಿ ಕನಸಿನ ರಾಜ, ಪ್ರಣಯದ ಸಾಹುಕಾರ, ಪ್ರೇಮ ಲೋಕದ ಒಡೆಯ ಎಂದೇ ಹೆಸರು ಮಾಡಿರುವ ರವಿಚಂದ್ರನ್ ಸದಾ ಕಪ್ಪು ಬಣ್ಣದ ಬಟ್ಟೇಯನ್ನೇ ಧರಿಸುತಗತ್ತಾರೆ ಏಕೆ ಗೊತ್ತೆ ? ಬಣ್ಣದ ಲೋಕದಲ್ಲಿದ್ದು, ಸಿನಿಪ್ರಿಯರಲ್ಲಿ ಕಾಮನಬಿಲ್ಲಿನಂತಹ ಕನಸು ತುಂಬಿದ ನಾಯಕ ಸದಾ ಕಪ್ಪು ಬಣ್ಣ ಧರಿಸಲು ಇದೆ ಒಂದು ಕಾರಣ!  ಕಾರಣದ ಗುಟ್ಟನ್ನು ರಟ್ಟು ಮಾಡಿದ್ದು  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ. 

ರವಿಚಂದ್ರನ್ ಮತ್ತು ಸುದೀಪ ಅವರದ್ದು ಬಹಳ ಅನ್ಯೋನ್ಯದ ಸಂಬಂಧ ಪ್ರತಿಬಾರಿ ರವಿಚಂದ್ರನ್ ಸುದೀಪ್ ನನ್ನ ಮಗ ಎಂದು ಹೇಳಿಕೊಳ್ಳುತ್ತಾರೆ, ಕಿಚ್ಚನಿಗೂ ರವಿ ಸರ್ ಎಂದರೆ ಅಚ್ಚು ಮೆಚ್ಚು. ತಂದೆ ಸ್ಥಾನದಲ್ಲಿರುವ ರವಿಚಂದ್ರನ್ ಉಡುಪಿನ ಸಿಕ್ರೆಟನ್ ರಿವಿಲ್ ಮಾಡಿದ್ದಾರೆ ಬಾದಷಾ.   

ಇತ್ತೀಚಿಗೆ ನಡೆದ ಒಂದು ಕಾರ್ಯಕ್ರಮದಲ್ಲಿ ನಟ ಸುದೀಪ್ ರವಿಚಂದ್ರನ್ ಅವರ ಉಡುಪಿನ ಗುಟ್ಟನ್ನು ರಟ್ಟು ಮಾಡಿದ್ದು ಹೀಗೆ; “ನಾನು ಚಿಕ್ಕ ವಯಸ್ಸಿನಿಂದ ರವಿಚಂದ್ರನ್ ಅವರ ಸಿನಿಮಾ ನೋಡಿಕೊಂಡೆ ಬೆಳೆದಿದ್ದು, ನಾನು ಅವರ ಹಾಗೆ ಆಗಬೇಕು ಎಂದು ಕಪ್ಪು ಬಟ್ಟೆಯನ್ನೇ ಧರಿಸುತ್ತಿದ್ದೆ.

ಒಂದು‌ ದಿನ ನೀವು ಯಾಕೆ ಯವಾಗಲು ಕಪ್ಪು ಬಟ್ಟೆ ಹಾಕುತ್ತಿರಾ ಎಂದು ರವಿ ಸರ್ ರನ್ನೇ ಕೇಳಿದೆ. ಆಗ ಅವರು ಎರಡು ಕಾರಣ ಹೇಳಿದರು! ಒಂದು; ಕಪ್ಪು ಬಟ್ಟೆ ಧರಿಸುವುದರಿಂದ  ನಾವು ಸದಾ ಬೆಳ್ಳಗೆ ಕಾಣಿಸುತ್ತೀವಿ. ಮತ್ತೊಂದು ತೆಳ್ಳಗೆ ಕಾಣಿಸುತ್ತೀವಿ. ಎಂದರು..” ಎಂದು ರವಿಚಂದ್ರನ್ ಯಾಕೆ ಕಪ್ಪು ಬಟ್ಟೆಯನ್ನೇ ಹೆಚ್ಚಾಗಿ ಧರಿಸುತ್ತಾರೆ ಎಂಬ ರಹಸ್ಯದ ವಿಚಾರವನ್ನು ತಿಳಿಸಿದ್ದಾರೆ ನಟ ಸುದೀಪ್.