ಪೊಲೀಸ್ ಠಾಣೆ ಮೆಟ್ಟಿಲೇರಿದ ಕಿರುತೆರೆ ನಟ ಕಿರಣ್ ರಾಜ್: ಅವರಿಗಾದ ಅನ್ಯಾಯ ಏನೆಂದು ತಿಳಿಯಿರಿ..

Updated: Friday, June 11, 2021, 15:17 [IST]

ಕಿನ್ನರಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ನಟನೆ ಆರಂಭಿಸಿರುವ ಕಿರಣ್ ರಾಜ್ ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಸಂಕಷ್ಟದ ಬಗ್ಗೆ ಮನವಿ ಪತ್ರ ಬರೆದಿದ್ದರು. ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ಕಿರಣ್ ರಾಜ್ ಅವರು ಮುಂಬೈಲ್ಲಿ ಯಾಸ್ಮಿನ್ ಪಠಾಣ್ ಎಂಬಾಕೆಯೊಂದಿಗೆ ಸತತ ಐದು ವರ್ಷಗಳ ಕಾಲ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿ ಇದ್ದರು.  ಆದರೆ ಇದ್ದಕ್ಕಿದ್ದಂತೆ ಇವರಿಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಆಶ್ಚರ್ಕರವಾಗಿದೆ. ಇದಕ್ಕೆ ಏನು ಕಾರಣ ಎಂದು ತಿಳಿಯೋಣ ಬನ್ನಿ.. 

ಯಾಸ್ಮಿನ್ ಮತ್ತು ಕಿರಣ್ ನಡುವೆ ಇದ್ದಕ್ಕಿದ್ದಂತೆ ಬಿರುಕು ಮೂಡಿದ್ದು ಇಬ್ಬರು ಬೇರಾಗಿದ್ದಾರೆ. ಮಾರ್ಚ್ 31 2018ರಂದು ರಾತ್ರಿ ಕಿರಣ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಯಾಸ್ಮನ್ ಮುಂಬೈ ಪೊಲೀಸ್ ಠಾಣೆಯಲ್ಲ ದೂರು ದಾಖಲಿಸಿದ್ದಾಳೆ. ಇತ್ತ ಬೆಂಗಳೂರಿನ ಆರ್.ಆರ್ ನಗರ ಪೊಲೀಸ್ಠಾಣೆಯಲ್ಲಿ ಯಾಸ್ಮಿನ್ ನನ್ನ ಕಾರಿನ ಗಾಜನ್ನು ಪುಡಿ ಪುಡಿ ಮಾಡಿ, ನನ್ನ ಹಾಗೂ ನನ್ನ ತಂದೆ-ತಾಯಿ ಮೇಲೆ ಹಲ್ಲೆ ನಡೆಸಿದ್ದಾಳೆ. ನನಗೆ ಮೋಸ ಮಾಡಿದ್ದಾಳೆ. ಹನಿಟ್ರ್ಯಾಪ್ ಮಾಡಿದ್ದಾಳೆ. ಇವಳು ನನಗಷ್ಟೇ ಅಲ್ಲದೇ, ಹಲವರಿಗೆ ಮೋಸ ಮಾಡಿದ್ದು, ಅವರೂ ಈಕೆ ಮೇಲೆ ದೂರು ದಾಖಲಿಸಿದ್ದಾರೆ ಎಂದೆಲ್ಲಾ ಆರೋಪಿಸಿದ್ದಾರೆ.   

ಮಧ್ಯಪ್ರದೇಶದಲ್ಲಿ ಜನಿಸಿ ಎಳೆದ ಕಿರಣ್ ರಾಜ್ ಇದೀಗ ಕನ್ನಡ ಕಿರುತೆರೆಯಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ಅಲ್ಲದೇ, ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ, ಯಾಸ್ಮಿನ್ ಹಾಗೂ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.