ನೆಟ್ಟಿಗರ ಆಸೆಯನ್ನು ನೆರವೇರಿಸಲಿದ್ಯಾ ಬಿಗ್ ಬಾಸ್..?ಸೋನು ಗೌಡ ಎಲಿಮಿನೇಟ್ ಆದ್ರಾ..?

By Infoflick Correspondent

Updated:Friday, August 12, 2022, 13:16[IST]

ನೆಟ್ಟಿಗರ ಆಸೆಯನ್ನು ನೆರವೇರಿಸಲಿದ್ಯಾ ಬಿಗ್ ಬಾಸ್..?ಸೋನು ಗೌಡ ಎಲಿಮಿನೇಟ್ ಆದ್ರಾ..?

ಬಿಗ್ ಬಾಸ್ ಕನ್ನಡ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಶುರುವಾದ ಮೊದಲ ವಾರವ ಏ ಎಲಿಮಿನೇಶನ್ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. ಒಟ್ಟು 16 ಕಂಟೆಸ್ಟೆಂಟ್ಗಳು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟವರಲ್ಲಿ ಹೆಚ್ಚು ಸುದ್ದಿಯಲ್ಲಿರುವುದು ಸೋಶಿಯಲ್ ಮೀಡಿಯಾ ಬೆಡಗಿ ಸೋನು ಶ್ರೀನಿವಾಸ್ ಗೌಡ. ನೆಟ್ಟಿಗರು ಸೋನು ಗೌಡ ವಿರುದ್ಧ ಕಿಡಿಕಾರುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ಇರುವುದು ಬೇಡ ಎಂದು ಹೇಳುತ್ತಿದ್ದಾರೆ.


42 ದಿನಗಳ ಕಾಲ ಪ್ರಸಾರವಾಗುವ ಒಟಿಟಿ ಬಿಗ್ ಬಾಸ್ ಶೋನಲ್ಲಿ ನಾಮಿನೇಶನ್ ಪ್ರಕ್ರಿಯೆ ನಡೆದಿದೆ. . ಬರೋಬ್ಬರಿ 8 ಮಂದಿ ನಾಮಿನೇಟ್ ಆಗಿದ್ದಾರೆ. ಅವರಲ್ಲಿ, ಸೋನು ಶ್ರೀನಿವಾಸ್ ಗೌಡ, ಸ್ಪೂರ್ತಿ ಗೌಡ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ನಂದಿನಿ ಜಶ್ವಂತ್, ಕಿರಣ್ ಯೋಗೇಶ್ವರ್ ಹಾಗೂ ಅಕ್ಷತಾ ಕುಕಿ ನಾಮಿನೇಟ್ ಆಗಿದ್ದಾರೆ.  ಇವರೆಲ್ಲಿ ಈ ವಾರದ ಕೊನೆಯಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ. ಆದರೆ, ಸೋನು ಗೌಡ ಮೊದಲು ಮನೆಯಿಂದ ಹೊರ ಬರಲಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.


ಬಿಗ್ ಬಾಸ್ ಮನೆಯಲ್ಲಿ ನಗು, ಖುಷಿ, ಅಳು, ದುಃಖ, ಆಟ, ಮನರಂಜನೆ, ಕಿತ್ತಾಟ ಎಲ್ಲವೂ ಇರುತ್ತದೆ. ಮನೆಯಲ್ಲಿ ಈಗಾಗಲೇ ಜಗಳ, ಮನಸ್ತಾಪಗಳು ಶುರುವಾಗಿದ್ದು, ಗುಸು ಗುಸು-ಪಿಸು ಪಿಸು ನಡೆಯುತ್ತಿದೆ. ಇನ್ನು ಲಿಪ್ ಲಾಂಕಿಂಗ್ ವೀಡಿಯೋದಿಂದಲೇ ಫೇಮಸ್ ಆಗಿರುವ ಸೋನು ಶ್ರೀನಿವಾಸ್ ಗೌಡ ನಾಮಿನೇಟ್ ಆಗಿದ್ದು, ಪ್ರೇಕ್ಷಕರಿಗೂ ಸೋನು ಬಿಗ್ ಬಾಸ್ ಮನೆಯಲ್ಲಿ ಇರುವುದು ಇಷ್ಟವಿಲ್ಲ. ಈಗ ನಾಮಿನೇಟ್ ಆಗಿರುವುದಕ್ಕೆ ಖುಷಿ ಪಟ್ಟಿದ್ದು, ಬಹುಷಃ ಈ ವಾರದ ಕೊನೆಯಲ್ಲಿ ಸೋನು ಮನೆಯಿಂದ ಹೊರ ಬರಬಹುದು,