ಇಂಡಸ್ಟ್ರಿಗೆ ಮತ್ತೆ ಕಮ್ ಬ್ಯಾಕ್ ಮಾಡಲಿದ್ದಾರಾ ನಿಧಿ ಸುಬ್ಬಯ್ಯ..?
Updated:Thursday, May 12, 2022, 07:50[IST]

ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ನಟನೆಯಿಂದ ದೂರ ಉಳಿದು ಸುಮಾರು ವರ್ಷಗಳಾಯ್ತು. ನಿಧಿ ಸುಬ್ಬಯ್ಯ ಅವರು, ಮುಂಬೈ ಮೂಲದ ಉದ್ಯಮಿ ಲವೇಶ್ ಖೈರಜನಿ ಅವರ ಜೊತೆ 2017ರಲ್ಲಿ ಸಪ್ತಪದಿ ತುಳಿದು ಹೊಸ ಬಾಳಿಗೆ ನಾಂದಿ ಹಾಡಿದ್ದರು. ಫೆಬ್ರವರಿ 10, 11 ರಂದು ಕೊಡಗಿನಲ್ಲಿ ಇವರಿಬ್ಬರ ವಿವಾಹ ಮಹೋತ್ಸವ ನೆರವೇರಿದ್ದು, ಎರಡು ಕುಟುಂಬದವರು ಈ ಶುಭ ಘಳಿಗೆಯಲ್ಲಿ ಭಾಗಿಯಾಗಿ ನವ ಜೋಡಿಗಳಿಗೆ ಅರಸಿ ಆರ್ಶೀವಾದಿಸಿದ್ದರು. ವಿರಾಜಪೇಟೆ ತಾಲ್ಲೂಕಿನ ಕಡಂಗ ಸಮೀಪದ ರೆಸಾರ್ಟ್ವೊಂದರಲ್ಲಿ ಲವೇಶ್ ಕುಟುಂಬಸ್ಥರ ಸಂಪ್ರದಾಯದ ಪ್ರಕಾರ ವಿವಾಹ ನಿಧಿ ಸುಬ್ಬಯ್ಯ ಅವರ ಮದುವೆ ನಡೆದಿತ್ತು.
ಸ್ಯಾಂಡಲ್ ವುಡ್ ಚೆಲುವೆ ನಿಧಿ ಸುಬ್ಬಯ್ಯ ತಾವು ಪ್ರೀತಿಸಿದ ಯುವಕನನ್ನ ಬಾಳ ಸಂಗಾತಿಯಾಗಿ ವರಿಸಿದ್ದರು. ಮಡಿಕೇರಿಯಲ್ಲಿ ನಡೆದ ಆರತಕ್ಷತೆ ಮಡಿಕೇರಿಯ ಕ್ರಿಸ್ಟಲ್ ಹಾಲ್ನಲ್ಲಿ ಆಪ್ತರ ಸಮ್ಮುಖದಲ್ಲಿ ನಿಧಿ ಸುಬ್ಬಯ್ಯ ಮತ್ತು ಲವೇಶ್ ಅವರ ಆರತಕ್ಷತೆ ಅದ್ಧೂರಿಯಿಂದ ನೆರವೇರಿತ್ತು. ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ನಿಧಿ ಸುಬ್ಬಯ್ಯ ಅವರು ಪತಿಯಿಂದ ದೂರ ಉಳಿದಿದ್ದಾರೆ. ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಪತಿಯೊಂದಿಗಿನ ಫೋಟೋಗಳು ಡಿಲೀಟ್ ಆಗಿದ್ದವು. ಅತ್ತ ಲವೇಶ್ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ನಿಧಿ ಜೊತೆಗಿನ ಫೋಟೋಗಳು ಮಾಯವಾಗಿವೆ. ಅಲ್ಲದೇ, ಲವೇಶ್ ಅವರು ಬೇರೆ ಹುಡುಗಿಯೊಂಗಿರುವ ಫೋಟೋಗಳು ಅಪ್ ಲೋಡ್ ಆಗಿವೆ.
ಸದ್ಯ ನಿಧಿ ಸುಬ್ಬಯ್ಯ ಅವರು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅಲ್ಲದೇ ಇದೀಗ ನಿಧಿ ಸುಬ್ಬಯ್ಯ ಅವರು 13 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಈ ಮೂಲಕ ನಿಧಿ ಸುಬ್ಬಯ್ಯ ಅವರು ಮತ್ತೆ ಸಿನಿಮಾ ರಂಗಕ್ಕೆ ರಿ ಎಂಟ್ರಿ ಕೊಡಲಿದ್ದಾರೆ ಎಂಬ ಟಾಕ್ ಗಾಂಧಿನಗರದಲ್ಲಿ ಶುರುವಾಗಿದೆ. ಆದರೆ ಈ ಬಗ್ಗೆ ಮಾತನಾಡಿರುವ ನಿಧಿ ಸುಬ್ಬಯ್ಯ ಅವರು, ನಾನು ಸಣ್ಣಗಾಗಿದ್ದೇನೆ. ಇದು ನನಗೋಸ್ಕರವೇ ಹೊರತು ಯಾವುದೇ ಸಿನಿಮಾದಲ್ಲೂ ನಟಿಸಲು ಅಲ್ಲ ಎಂದಿದ್ದಾರೆ. ಆದರೆ, ನಿಧಿ ಸುಬ್ಬಯ್ಯ ಅವರು ಸಣ್ಣಗಾಗಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ.