ಪ್ರೇಮ್ ಅವರ ಹೊಸ ಸಿನಿಮಾ ದ್ರುವ ಜೊತೆ ಕೆಜಿಫ್ ಅನ್ನು ಮೀರಿಸುತ್ತಾ ? ಅವರ ಮಾತಲ್ಲೇ ಕೇಳಿ
Updated:Tuesday, April 26, 2022, 13:33[IST]

ಎಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ಕನ್ನಡದ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ನಿರ್ದೇಶಕ ಜೋಗಿ ಪ್ರೇಮ್ ಅವರ ಕೆಲ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಕರಿಯಾ, ಜೋಗಿ ಚಿತ್ರಗಳು ಕಮಾಲ್ ಮಾಡಿದ್ದವು. ಇನ್ನು ಪ್ರೇಮ್ ಅವರ ಎಲ್ಲಾ ಚಿತ್ರಗಳಲ್ಲೂ ಹಾಡುಗಳು ಮಾತ್ರ ಸೂಪರ್ ಡೂಪರ್ ಹಿಟ್ ಆಗಿವೆ. ಒಂದಕ್ಕಿಂತ ಒಂದು ಹಾಡು ಚೆನ್ನಾಗಿದ್ದು, ಇತ್ತೀಚೆಗಷ್ಟೇ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರ ರಿಲೀಸ್ ಆಗಿತ್ತು. ಈ ಚಿತ್ರದಲ್ಲೂ ಹಾಡುಗಳು ಸೂಪರ್ ಹಿಟ್ ಆಗಿವೆ.
ಇನ್ನು ಇದೀಗ ಜೋಗಿ ಪ್ರೇಮ್ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಜೊತೆಗೆ ಕೈ ಜೋಡಿಸಿದ್ದಾರೆ. ಧೃವನನ್ನು ಡಿಫರೆಂಟ್ ಲುಕ್ ನಲ್ಲಿ ತೋರಿಸಲು ಜೋಗಿ ಪ್ರೇಮ್ ಅವರು ಮುಂದಾಗಿದ್ದಾರೆ. 1970ರಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು ಕಥೆಯನ್ನು ಬರೆದಿದ್ದಾರೆ. ಭೂಗತಲೋಕದ ಹೊಸ ಚರಿತ್ರೆಯನ್ನು ತೆರೆಮೇಲೆ ತೆರೆದಿಡಲು ಜೋಗಿ ಪ್ರೇಮ್ ಮುಂದಾಗಿದ್ದಾರೆ. ಈ ಸಿನಿಮಾಗಾಗಿ ಜೋಗಿ ಪ್ರೇಮ್ ಅವರು ದುಬಾರಿ ಸೆಟ್ ಅನ್ನು ಹಾಕುತ್ತಿದ್ದಾರೆ. ಸುಂಕದಕಟ್ಟೆಯ ಸೀಗೆಹಳ್ಳಿ ಸಮೀಪ 70ರ ದಶಕದ ಸೆಟ್ ಅನ್ನು ನಿರ್ಮಿಸಲಾಗುತ್ತಿದೆ. ಸೆಟ್ ಸಿದ್ಧವಾದ ಕೂಡಲೇ ಚಿತ್ರೀಕರಣ ಆರಂಭವಾಗಲಿದೆ.
ಇನ್ನು ಈ ಚಿತ್ರದಲ್ಲಿ ಸೆಟ್ ಅಷ್ಟೇ 70 ದಶಕದ್ದಾಗಿರದೇ, ಭಾಷೆ, ಮಾತಿನ ಶೈಲಿ, ನಡೆ ಎಲ್ಲವೂ ಆ ಕಾಲವನ್ನೇ ಹೋಲುವಂತೆ ಮಾಡಲಾಗುತ್ತದೆ ಎಂದು ಜೋಗಿ ಪ್ರೇಮ್ ಹೇಳಿದ್ದಾರೆ. ಇನ್ನು ಈ ಸಿನಿಮಾಗಾಗಿ ಧೃವ ಸರ್ಜಾ ಸಣ್ಣಗಾಗಬೇಕಿದ್ದು, ಇನ್ನೊಂದು ತಿಂಗಳಲ್ಲಿ 6 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರಂತೆ. ಈ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ ಆದರೆ, ಯುದ್ಧದ ಮುನ್ನುಡಿ ಎಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ವೇಳೆ, ಕಿಜಿಎಫ್ ಚಿತ್ರವನ್ನು ನಿಮ್ಮ ಚಿತ್ರ ಮೀರಿಸುತ್ತದಾ ಎಂದು ಕೇಳಿದ್ದಕ್ಕೆ ಜೋಗಿ ಪ್ರೇಮ್ ಅವರು ಒಳ್ಳೆಯ ಕಥೆಯುಳ್ಳ ಸಿನಿಮಾಗಳನ್ನು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರೆ. ಕೆಜಿಎಫ್, ಆರ್ ಆರ್ ಆರ್ ಚಿತ್ರದಂತೆ ಚೆನ್ನಾಗಿರುವ ಸಿನಿಮಾವನ್ನು ಗುರುತಿಸಲಾಗುತ್ತದೆ ಎಂದು ಹೇಳಿದರು.