ಕೆಜಿಎಫ್‌ ದಾಖಲೆಯನ್ನು ಮುರಿಯುತ್ತೀರಾ ವಿಕ್ರಾಂತ್ ರೋಣ ಎಂದು ಕೇಳಿದ್ದಕ್ಕೆ ಕಿಚ್ಚ ಸುದೀಪ್‌ ಹೇಳಿದ್ದೇನು..?

By Infoflick Correspondent

Updated:Friday, July 1, 2022, 10:14[IST]

ಕೆಜಿಎಫ್‌ ದಾಖಲೆಯನ್ನು ಮುರಿಯುತ್ತೀರಾ ವಿಕ್ರಾಂತ್ ರೋಣ  ಎಂದು ಕೇಳಿದ್ದಕ್ಕೆ ಕಿಚ್ಚ ಸುದೀಪ್‌ ಹೇಳಿದ್ದೇನು..?

ಆರು ತಿಂಗಳಿಗೊಂದು ಸಿನಿಮಾಗಳನ್ನು ನೀಡುತ್ತಿದ್ದ ಬಾದ್ಶಾ ಈ ಕೊರೊನಾ ಕಾರಣದಿಂದ ಪ್ರಾಜೆಕ್ಟ್ ಗಳು ಕಡಿಮೆಯಾಗಿದ್ದವು. ಆದರೆ ಈಗ ಕೊರೊನಾ ಸೈಲೆಂಟ್ ಆಗಿದ್ದು, ಸಿನಿಮಾಗಳ ಕೆಲಸಗಳೂ ಚುರುಕಾಗಿವೆ. ಸಾಲು ಸಾಲು ಚಿತ್ರಗಳು ತೆರೆಮೇಲೆ ಅಪ್ಪಳಿಸಿವೆ. ತ್ರಿಬಲ್ ಆರ್, ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ. ಇನ್ನಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗಲು ಸಜ್ಜಾಗಿವೆ. ಹೀಗಿರುವಾಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಚಿತ್ರದ ರಿಲೀಸ್‌ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.  

ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಚಿತ್ರದ ಕೆಲಸಗಳಲ್ಲಿ ತೊಡಗಿದ್ದು, ಈಗ ಮತ್ತೆ ಅನೂಪ್ ಭಂಡಾರಿ ಜೊತೆಗೆ ಮುಂದಿನ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ. ಅನೂಪ್ ಭಂಡಾರಿ ಕೈಯಲ್ಲಿ ಸದ್ಯ ಎರಡು ಕಥೆಗಳಿದ್ದು, ಸುದೀಪ್ ಯಾವುದನ್ನು ಓಕೆ ಮಾಡಿದ್ದಾರೆ ಎಂದು ಕೇಳೋದಾದರೇ ಎರಡನ್ನೂ ಒಪ್ಪಿದ್ದಾರೆ ಎನ್ನಬಹುದು. ಒಂದು ಚಿತ್ರದ ಹೆಸರು ಅಶ್ವತ್ಥಾಮ. ಮತ್ತೊಂದು ಸಿನಿಮಾ ಬಿಲ್ಲ ರಂಗ ಭಾಷ. ಈ ಎರಡೂ ಚಿತ್ರಕ್ಕೂ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸದ್ಯ ಬಿಲ್ಲ ರಂಗ ಭಾಷ ಸಿನಿಮಾದಲ್ಲಿ ನಟಿಸಲು ಸುದೀಪ್ ಒಪ್ಪಿಗೆ ನೀಡಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಕೆಲಸಗಳು ಮುಗಿದ ಕೂಡಲೇ ಹೊಸ ಚಿತ್ರದ ಶೂಟಿಂಗ್ ನಡೆಯಲಿದೆ.


ಕಿಚ್ಚ ಸುದೀಪ್ ಇದೀಗ ಅನೂಪ್ ಭಂಡಾರಿ ಅವರ ಜೊತೆಗೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಮೋಷನ್ ಕೆಲಸಗಳು ನಡೆಯುತ್ತಿದ್ದು, ಇಡೀ ಚಿತ್ರತಂಡ ಬ್ಯುಸಿಯಾಗಿದೆ. ಅಭಿಮಾನಿಗಳು ವಿಕ್ರಾಂತ್ ರೋಣ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಚಿತ್ರ ಕೆಜಿಎಫ್ 2 ಸಿನಿಮಾದ ದಾಖಲೆಯನ್ನು ಮುರಿಯಲು ಸಜ್ಜಾಗುತ್ತಿದೆ. ಈಗಾಗಲೇ ಭಾಷೆಯ ವಿಚಾರದಲ್ಲಿ ಕೆಜಿಎಫ್ 2 ಚಿತ್ರಕ್ಕಿಂತಲೂ ವಿಕ್ರಾಂತ್ ರೋಣ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ಬರೋಬ್ಬರಿ 7 ಭಾಷೆಗಳಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗುತ್ತಿದೆ.


ಇನ್ನು ಕೆಜಿಎಫ್‌ ಚಿತ್ರ ಸಾವಿರ ಕೋಟಿಗಿಂತಲೂ ಅಧಿಕ ಕಲೆಕ್ಷನ್‌ ಮಾಡಿದೆ. ಹೀಗಿರುವಾಗ ವಿಕ್ರಾಂತ್‌ ರೋಣ ಚಿತ್ರ ಎಷ್ಟು ಕಲೆಕ್ಷನ್‌ ಮಾಡುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಸಾವಿರ ಕೋಟಿ ಕಲೆಕ್ಷನ್‌ ಮಾಡುವುದರಲ್ಲಿ ಖುಷಿಯಾಗುತ್ತೆ ಎನ್ನುವುದಾದರೆ ವಿಕ್ರಾಂತ್‌ ರೋಣ ಎರಡು ಸಾವಿರ ಕೋಟಿ ಕಲೆಕ್ಷನ್‌ ಮಾಡುತ್ತದೆ. ಆದರೆ ಸಕ್ಸಸ್‌ ಮನುಷ್ಯನನ್ನು ಖುಷಿ ಪಡಿಸುತ್ತದೆ ಎಂದರೆ ಅದು ನನ್ನ ಚಿತ್ರ ಸಕ್ಸಸ್‌ ಕಂಡಾಗ ಖುಷಿಯಾಗುತ್ತದೆ. ಈಗಾಗಲೇ ನಮ್ಮ ಚಿತ್ರ ಸಕ್ಸಸ್‌ ಆಗಿದೆ ಎಂದು ಹೇಳುತ್ತಾರೆ.