ಯಶ್ ಹೇಳಿದ ಅದೊಂದು ಡೈಲಾಗ್ ಗೆ 100 ಕೋಟಿ ತಮಿಳುನಾಡಿನಲ್ಲಿ ಕಲೆಕ್ಷನ್ ಆಯ್ತ..?

By Infoflick Correspondent

Updated:Sunday, May 15, 2022, 09:18[IST]

ಯಶ್ ಹೇಳಿದ ಅದೊಂದು ಡೈಲಾಗ್ ಗೆ 100 ಕೋಟಿ ತಮಿಳುನಾಡಿನಲ್ಲಿ ಕಲೆಕ್ಷನ್ ಆಯ್ತ..?

ಕನ್ನಡ ಚಿತ್ರರಂಗದಲ್ಲಿ ಇದೀಗ ಹೆಮ್ಮೆಪಡುವ ವಿಷಯ ಏನೆಂದರೆ ಅದು ಕೆಜಿಎಫ್ ಭಾಗ-2 ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು. ಹೌದು ಪ್ರಶಾಂತ್ ನಿರ್ದೇಶನದಲ್ಲಿ ಮೂಡಿಬಂದ ಕೆಜಿಎಫ್ ಭಾಗ-1 ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಎಲ್ಲರನ್ನೂ ಹೆಚ್ಚು ನಿರೀಕ್ಷೆಗೆ ಒಳಗಾಗುವಂತೆ ಮಾಡಿದ ಸಿನಿಮಾ ಇದಾಗಿತ್ತು. ಹೌದು ಕೆಜಿಎಫ್ ಭಾಗ-2 ಬರುವುದು ಕಾಯಂ ಆಗಿದ್ದು ಇದರ ಸಿಕ್ವೆನ್ಸ್ ಹೇಗಿರಲಿದೆ ಎಂದು ಜನರು ಕಾತರದಿಂದ ಇಷ್ಟು ದಿವಸ ಕಾದಿದ್ದರು. ಅದಕ್ಕೆ ತಕ್ಕಂತೆ ಈಗ ಕೆಜಿಎಫ್ 2 ವಿಶ್ವಮಟ್ಟದಲ್ಲಿ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನವ ಕಂಡಿದ್ದು ಈಗಾಗಲೇ ಹನ್ನೆರಡು ನೂರು ಕೋಟಿ ಕಲೆಕ್ಷನ್ ಮಾಡಿ ಇನ್ನೂ ಕೂಡ ಕಲೆಕ್ಷನ್ ವಿಚಾರದಲ್ಲಿ ಕೆಲವು ದಾಖಲೆಗಳನ್ನು ಮುರಿಯುತ್ತಾ ಮುನ್ನುಗ್ಗುತ್ತಿದೆ.  

ಹೌದು ಕೆಜಿಎಫ್ ಭಾಗ-2 ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಹಾಗೆನೆ ಕನ್ನಡ ಸಿನಿರಂಗದವರು ಎದೆತಟ್ಟಿ ಹೇಳುವಂತಹ ಸಿನಿಮಾ ಗೋಲ್ಡನ್ ಚಿತ್ರವಾಗಿ ಹೊರಹೊಮ್ಮಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ನೀವು ಕೂಡ ಈಗಾಗಲೇ ಸಿನಿಮಾ ನೋಡಿದ್ದೀರಿ, ಈ ಸಿನಿಮಾ ಎಲ್ಲರೂ ಮೆಚ್ಚುವಂತೆ, ಹಾಗೆ ಮತ್ತೊಮ್ಮೆ ಹೋಗಿ ನೋಡಿ ಸಿನಿಮಾ ಎನ್ನುವಂತೆ ಸಿನಿಮಾ ಮೂಡಿಬಂದಿದೆ. ಸಿನಿಮಾದ ಡೈರೆಕ್ಷನ್, ಎಲಿವೇಶನ್, ಸಿನಿಮಾಟೋಗ್ರಾಫಿ, ಮ್ಯೂಸಿಕ್ ಯಾವುದರಲ್ಲಿಯೂ ಕೂಡ ಕೆಜಿಎಫ್ ಕಡಿಮೆಯಾಗಿಲ್ಲ. ಹೌದು ಯಶ್ ಅವರ ಕೆಜಿಎಫ್ ಭಾಗ-2 ಸಿನಿಮಾ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ, ಅತ್ತ ತೆಲುಗು, ತಮಿಳು, ಬಾಲಿವುಡ್ ಅಂಗಳದಲ್ಲಿಯೂ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ.

ತಮಿಳುನಾಡಿನಲ್ಲಿ 100 ಕೋಟಿ ಗಳಿಸಿದ ಕನ್ನಡ ಚಿತ್ರ ಇದಾಗಿದ್ದು 100 ಕೋಟಿ ಹಣವನ್ನ ಗಳಿಸುವುದಕ್ಕೆ ಯಶ್ ಅಂದು ಹೇಳಿದ ಅದೊಂದು ಮಾತು ನಿಜ ಆಯ್ತ ಈಗ ಎಂದೆನಿಸುತ್ತದೆ. ಅದಕ್ಕಾಗಿಯೇ ಇಷ್ಟು ಹಣ ಗಳಿಸಿದ್ದಾರೆ ಎಂದು ಪ್ರಶ್ನೆ ಎದ್ದಿದೆ. ಅಸಲಿಗೆ ಆ ವಿಡಿಯೋದಲ್ಲಿ ಅಂದು ಯಶ್ ಅವರು ಹೇಳಿದ್ದೇನು ಗೊತ್ತಾ..? ಈ ವಿಡಿಯೋ ನೋಡಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು...

 

 
 
 
 
 
 
 
 
 
 
 
 
 
 
 

A post shared by ASAR (@asar.deen.editz)