ನಾಮಿನೇಟ್ ಎಲಿಮಿನೇಶ್ ಇಲ್ಲದೆ ಮನೆಯಿಂದ ಹೊರನಡೆದ ಬಿಗ್ ಬಾಸ್ ಸ್ಪರ್ಧಿ! ಏಕೆ ಏನಾಗಿದೆ ?

By Infoflick Correspondent

Updated:Saturday, August 20, 2022, 22:32[IST]

ನಾಮಿನೇಟ್ ಎಲಿಮಿನೇಶ್ ಇಲ್ಲದೆ ಮನೆಯಿಂದ ಹೊರನಡೆದ ಬಿಗ್ ಬಾಸ್ ಸ್ಪರ್ಧಿ! ಏಕೆ ಏನಾಗಿದೆ ?

ಮನೆಯಲ್ಲಿ ಹೈಲೇಟ್ ಆಗಿದ್ದು ಅರ್ಜುನ್ ರಮೇಶ್. ಆದ್ರೆ ಇದೀಗ ನಡೆದ ಘಟನೆ ಎಲ್ಲರಿಗೂ ದೊಡ್ಡ ಶಾಕ್. ಎಲಿಮಿನೇಟ್ ಆಗದೇ ನೇರವಾಗಿ ಮನೆಯಿಂದ ಹೊರನಡೆದಿದ್ದಾರೆ ಅರ್ಜುನ್. ಲೋಕೇಶ್ ಅವರು ಗಾಯಕ್ಕೆ ತುತ್ತಾಗಿ ಮನೆಯಿಂದ ಹೊರ ಬಿದ್ದಿದ್ದರು. ಈಗ ಅರ್ಜುನ್ ಇದ್ದಕ್ಕಿಂತೇ ಹೊರ ನಡೆದಿದ್ದಾರೆ ಏಕೆ ಗೊತ್ತೆ. 

ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅರ್ಜುನ್ ಹಾಗೂ ಮೊದಲಾದವರು ರೇಸ್​ನಲ್ಲಿದ್ದರು. ಅರ್ಜುನ್ ಕ್ಯಾಪ್ಟನ್ ಆದರು ಆದರೆ ಈ ವೇಳೆ ಅರ್ಜುನ್ ಅವರ ಭುಜಕ್ಕೆ ತೀವ್ರ ಏಟಾಗಿತ್ತು. ಅವರು ಹ್ಯಾಂಗಿಂಗ್ಸ್ ಹಾಕಿಕೊಂಡೇ ಒಂದು ವಾರ ಕಳೆದಿದ್ದಾರೆ. ಆದಾಗ್ಯೂ ಅವರಿಗೆ ನೋವು ಕಡಿಮೆ ಆಗಿಲ್ಲ. ಈ ಕಾರಣಕ್ಕೆ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಅರ್ಜುನ್ ಅವರು ಟಾಸ್ಕ್​ಗಳನ್ನು ಆಡಲೇಬೇಕಿದೆ. ಆದರೆ, ಗಾಯದ ಸಮಸ್ಯೆ ಇಟ್ಟುಕೊಂಡು ಸ್ಪರ್ಧೆಗೆ ಇಳಿಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ಅರ್ಜುನ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ.  

ನಟ ಅರ್ಜುನ್ ರಮೇಶ್ ಬಿಗ್ ಬಾಸ್ ಮನೆಯಲ್ಲಿ ಒಂದು ಮಟ್ಟಿಗೆ ಉತ್ತಮ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದರು. ಸ್ಪರ್ಧೆಗಳಲ್ಲೂ ಮುನ್ನುಗಿ ಆಟ ಆಡುತ್ತಿದ್ದರು. ಜೊತೆಗೆ ಮನೆಯಲ್ಲಿ ಇರುವ ಬಹುತೇಕರ ಮನಸನ್ನು ಗೆದ್ದಿದ್ದರು. ಮನೆಯಲ್ಲಿ ಇವ್ರನ್ನ ಬಹುತೇಕರು ಅರ್ಜುನ್ ಅಣ್ಣ ಅಂತಲೇ ಕರೆಯುತ್ತಿದ್ದರು. ಆದರೆ ಅನಿವಾರ್ಯವಾಗಿ ಅರ್ಜುನ್ ರಮೇಶ್ ಬಿಗ್ ಬಾಸ್ ಇಂದ ಹೊರ ಬಂದಿದ್ದಾರೆ.

ಅರ್ಜುನ್ ರಮೇಶ್ ಬಿಗ್ ಬಾಸ್ ಮನೆಯಲ್ಲಿ ದಿನಗಳು ಉಳಿಯುವ ಸ್ಪರ್ಧಿ ಎನ್ನುವ ಭರವಸೆ ಮೂಡಿಸಿದ್ದರು. ಆದರೆ ನಾಮಿನೇಷನ್ ಇಲ್ಲದೆ, ಎಲಿಮಿನೇಷನ್ ಇಲ್ಲದೇ ಮನೆಯಿಂದ ಅರ್ಜುನ್ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯ ಮೊದಲ ಕ್ಯಾಪಗ್ಟನ್ ಆಗಿದ್ದ ಅರ್ಜುನ್ ರಮೇಶ್ ಮನೆಯಿಂದ ಹೊರ ನಡೆದಿದ್ದು, ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದೆ. ಹೀಗೆ ಹೊರ ಬಂದಿರೋದು ಸ್ಪರ್ಧಗಳಲ್ಲಿ ಬೇಸರ ತಂದಿದೆ.