ಅಮೂಲ್ಯ ಮಕ್ಕಳ ನೋಡೋಕೆ ತಾಯಿ ಬರಲಿಲ್ಲವೆಂದು ಸುಳ್ಳು ವಿಡಿಯೋ ಹರಿಬಿಟ್ಟ ಮಹಿಳೆ..! ನಾಚಿಕೆಗೇಡು

By Infoflick Correspondent

Updated:Saturday, March 5, 2022, 08:47[IST]

ಅಮೂಲ್ಯ ಮಕ್ಕಳ ನೋಡೋಕೆ ತಾಯಿ ಬರಲಿಲ್ಲವೆಂದು   ಸುಳ್ಳು ವಿಡಿಯೋ ಹರಿಬಿಟ್ಟ ಮಹಿಳೆ..!  ನಾಚಿಕೆಗೇಡು

ಇತ್ತೀಚಿಗಷ್ಟೇ ಶಿವರಾತ್ರಿ ಹಬ್ಬದಂದು ನಮ್ಮ ಸ್ಯಾಂಡಲ್ವುಡ್ನ ನಟಿ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಎರಡು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಅಮೂಲ್ಯ ಅವರು ತಾಯಿ ಆಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಅಮೂಲ್ಯ ಅವರ ಅಭಿಮಾನಿಗಳು ಸಂತಸಪಟ್ಟಿದ್ದರು. ಈ ಮುಂಚೆಯೇ ಬಗೆಬಗೆಯ ಸೀಮಂತ ಕಾರ್ಯ ಅಮೂಲ್ಯ (Amulya)  ಅವರಿಗೆ ಮಾಡಲಾಗಿತ್ತು. ಕುಟುಂಬದವರು ಸೇರಿ ಹಾಗೆ ಸ್ನೇಹಿತರು ಸೇರಿ ಜೊತೆಗೆ ಸ್ಯಾಂಡಲ್ವುಡ್ನ ಕಲಾವಿದರು ಸೇರಿ ಬಗೆಬಗೆಯ ರೀತಿಯಲ್ಲಿ ನಟಿ ಅಮೂಲ್ಯ ಅವರಿಗೆ ಸೀಮಂತ ಕಾರ್ಯ ನೆರವೇರಿಸಲಾಗಿತ್ತು. ಮೊನ್ನೆಯಷ್ಟೇ ಶಿವರಾತ್ರಿ ಹಬ್ಬದಂದು ನಟಿ ಅಮೂಲ್ಯ ಅವರು ಟ್ವಿನ್ಸ್ ಬೇಬಿ ಗಳಿಗೆ ಜನ್ಮ ನೀಡಿದ್ದು ಶಿವರಾತ್ರಿ ಹಬ್ಬದ ದಿನವೇ ಡಬಲ್ ಧಮಾಕಾ ತಮ್ಮದಾಗಿಸಿಕೊಂಡರು.

ಹೌದು ಅಮೂಲ್ಯ ಎರಡು ಮಕ್ಕಳಿಗೆ ಜನ್ಮ ನೀಡುತ್ತಿದ್ದಂತೆ ಈ ಖುಷಿ ವಿಷಯವನ್ನು ಅವರ ಪತಿ ಜಗದೀಶ್ ಆವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ನಟಿ ಅಮೂಲ್ಯ   (Amulya) ಅವರ ಅಭಿಮಾನಿಗಳ ಬಳಗದ ಜೊತೆ ಸಂತಸ ವ್ಯಕ್ತಪಡಿಸಿದರು. ಇದೆ ಕುರಿತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಅಮೂಲ್ಯ ಮತ್ತು ಅವರ ಮಕ್ಕಳನ್ನು ಅವರ ತಾಯಿ ನೋಡಲು ಬಂದಿಲ್ಲ ಎನ್ನಲಾಗಿ ಶೀರ್ಷಿಕೆ ನೀಡಿ ತಪ್ಪು ಮಾಹಿತಿಯ ಟೈಟಲ್ ಕೊಟ್ಟು, ಜೊತೆಗೆ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಯೂಟ್ಯೂಬ್ ನ ಮಹಿಳೆ ವಿಡಿಯೋದಲ್ಲಿ ಬಾಯಿಗೆ ಬಂದ ಹಾಗೆ ಮಾಹಿತಿ ರವಾನಿಸಿದ್ದಾರೆ. 

ವಿಡಿಯೋದಲ್ಲಿ ನಟಿ ಅಮೂಲ್ಯ ಅವರಿಗೆ ಸಂಬಂಧಪಟ್ಟ ನಕಲಿ ವಿಷಯವನ್ನು ಹೇಳುತ್ತಾ ಕೊನೆಯಲ್ಲಿ ರವಿಚಂದ್ರನ್ ಅವರ ಮನೆಯ ಕುರಿತು ವಿಷಯವನ್ನು ವಿಡಿಯೋದಲ್ಲಿ ಸೇರಿಸಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಇವರಿಗೆ ಕ್ಯಾಕರಿಸಿ ಇದೀಗ ಉಗಿಯುತ್ತಿದ್ದು, ನೀವು ಕೂಡ ಒಂದು ಬಾರಿ ಈ ವಿಡಿಯೋ ನೋಡಿ. ಇಂತಹ ಚಾನೆಲ್ ವಿರುದ್ಧ ಮತ್ತು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವ ಮಹಿಳೆಯರಿಗೆ ಏನು ಹೇಳುತ್ತೀರ ನೀವೇ ಹೇಳಿ. ಆ ವಿಡಿಯೋ ಲೇಖನದ ಕೊನೆಯಲ್ಲಿದೆ ಒಮ್ಮೆ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ...