ಕೆಜಿಎಫ್ 2 ಸಿನಿಮಾವನ್ನ ಬಿಡುಗಡೆ ಆಗಲು ಬಿಡಲ್ಲ ಎಂದ ಸವಿತಾ..! ಅಸಲಿ ಕಾರಣ ಇಲ್ಲಿದೆ..!

By Infoflick Correspondent

Updated:Friday, April 8, 2022, 19:37[IST]

ಕೆಜಿಎಫ್ 2 ಸಿನಿಮಾವನ್ನ ಬಿಡುಗಡೆ ಆಗಲು ಬಿಡಲ್ಲ ಎಂದ ಸವಿತಾ..! ಅಸಲಿ ಕಾರಣ ಇಲ್ಲಿದೆ..!

  

ಕನ್ನಡ ಚಿತ್ರರಂಗದ ಸಿನಿಮಾ ಕೆಜಿಎಫ್ ಚಾಪ್ಟರ್ ಒಂದು ಈಗಾಗಲೇ ದೊಡ್ಡ ಮಟ್ಟದಲ್ಲೇ ಯಶಸ್ವಿಯಾಗಿದೆ. ಹಾಗೆ ಕೆಜಿಎಫ್ ಚಾಪ್ಟರ್ ಟು ಕೂಡ ಇದೇ ತಿಂಗಳು 14ಕ್ಕೆ ಇಡೀ ಭಾರತದಾದ್ಯಂತ ಸೇರಿ ಬೇರೆ ಬೇರೆ ದೇಶಗಳಲ್ಲಿಯೂ ಕೂಡ ಬಿಡುಗಡೆಯಾಗುತ್ತಿದೆ. ಕನ್ನಡದ ಮೊಟ್ಟಮೊದಲ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಖುಷಿಯ ವಿಚಾರ. ಹಾಗೆ ಕೆಜಿಎಫ್ ಚಿತ್ರದ ಮೂಲಕ ಇಡೀ ವಿಶ್ವವನ್ನೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಹಾಗೂ ನಟ ಯಶ್ ಅವರಿಗೆ ಕನ್ನಡಿಗರು ಹೃದಯಪೂರ್ವಕ ಧನ್ಯವಾದವನ್ನು ಎಲ್ಲರೂ ತಿಳಿಸುಸುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ ಟು ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿ, ಭರ್ಜರಿ ಯಶಸ್ವಿಯಾಗಿವೆ.

ಹಾಗೆ ಟೀಸರ್ ಈಗಾಗಲೇ ದೊಡ್ಡ ಮಟ್ಟದಲ್ಲಿ ದಾಖಲೆ ಬರೆದಿದ್ದು, ಟ್ರೈಲರ್ ಕೂಡ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು 170ಕ್ಕೂ ಮಿಲಿಯನ್ ವಿವ್ಸ್ ಕಂಡಿದೆ. ಈಗಲೂ ಕೂಡ ಟ್ರೈಲರ್ ಓಡುತ್ತಿದೆ. ಹೀಗಿರುವಾಗ ಎಲ್ಲಾ ಯಶ್ ಅವರ ಅಭಿಮಾನಿಗಳು ಹಾಗೆಯೇ ಕೆಜಿಎಫ್ ಚಿತ್ರದ ಪ್ರೇಕ್ಷಕರು ಏಪ್ರಿಲ್ 14 ಯಾವಾಗ ಆಗುತ್ತದೆಯೋ ಎಂದು ಸಿನಿಮಾ ವೀಕ್ಷಣೆಗಾಗಿ ಹೆಚ್ಚು ಕಾತುರದಿಂದ ಕಾಯುತ್ತಿದ್ದರೆ, ಇಲ್ಲೊಬ್ಬ ಮಹಿಳೆ ಕನ್ನಡದವರೇ ಆದ ಒಬ್ಬ ಸವಿತಾ ಎನ್ನುವ ಮಹಿಳೆ ಕೆಜಿಎಫ್ ಚಿತ್ರದ ವಿರುದ್ಧ ಈಗ ಮಾತನಾಡಿದ್ದಾರೆ. ಸಿನಿಮಾವನ್ನು ಬಿಡುಗಡೆ ಮಾಡಲು ಬಿಡಲ್ಲವೆಂದು ಒಂದು ವಿಡಿಯೋ ಮೂಲಕ ಮಾತನಾಡಿದ್ದಾರೆ. ಟ್ರೈಲರ್ ನಲ್ಲಿ ತುಂಬಾ ಕ್ರೌರ್ಯ ತುಂಬಿದೆ, ನೀವು ಅದ್ಹೇಗೆ ಈ ಸಿನಿಮಾಗೆ ಯುಎ ಸರ್ಟಿಫಿಕೇಟ್ ಕೊಟ್ಟಿದ್ದಿರೆಂದು ಸೆನ್ಸಾರ್ ಮಂಡಳಿಗೆ ಪ್ರಶ್ನೆ ಮಾಡಿದ್ದಾರೆ.

ಅಸಲಿಗೆ ಈಕೆ ಯಾಕೆ ಕೆಜಿಎಫ್ ಚಾಪ್ಟರ್ ಟು ಬಿಡುಗಡೆ ಆಗಬಾರದು ಎಂಬುದಾಗಿ ವಿವರಣೆ ನೀಡಿದ್ದಾರೆ ಗೊತ್ತಾ..? ನೀವೇ ಒಂದು ಬಾರಿ ಈ ವಿಡಿಯೋ ನೋಡಿ. ಹಾಗೆ ಈ ಬಗ್ಗೆ ನಿಮ್ಮ ಅಭಿಪ್ರಾಯಗಳ ಕಾಮೆಂಟ್ ಮಾಡಿ ಧನ್ಯವಾದಗಳು.

(video credit : rx studio kannada )