Yash : YASH 19: ಯಶ್‌ 19ನೇ ಚಿತ್ರದ ಮಹತ್ವದ ಸುದ್ದಿ ಇಲ್ಲಿದೆ ನೋಡಿ..

By Infoflick Correspondent

Updated:Tuesday, July 12, 2022, 19:51[IST]

Yash :  YASH 19: ಯಶ್‌ 19ನೇ ಚಿತ್ರದ ಮಹತ್ವದ ಸುದ್ದಿ ಇಲ್ಲಿದೆ ನೋಡಿ..

ರಾಕಿಂಗ್‌ ಸ್ಟಾರ್‌ ಯಶ್‌ ಅವರ ಕೆಜಿಎಫ್‌ ಚಿತ್ರ ರಿಲೀಸ್‌ ಆಗಿ ಸಕ್ಸಸ್‌ ಅನ್ನು ಕಂಡಾಯ್ತು. ಮುಂದೆ ಯಾವ ಚಿತ್ರವನ್ನು ರಾಕಿ ಭಾಯ್‌ ಮಾಡುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಯಶ್‌ ಅವರ 19ನೇ ಚಿತ್ರದ ಬಗ್ಗೆ ಯಾವಾಗ ಅನೌನ್ಸ್‌ ಮಾಡಲಾಗುತ್ತೆ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಈ ನಡುವೆಯೇ ಯಶ್‌ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಸಕತ್‌ ವರ್ಕೌಟ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅಭಿಮಾನಿಗಳ ಕುತೂಹಲವನ್ನು ಡಬಲ್‌ ಮಾಡಿದೆ. 

ಕಳೆದ ಕೆಲ ದಿನಗಳಿಂದ ನಟ ಯಶ್‌ ಅವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಅದು ತಮ್ಮ ಮುಂದಿನ ಚಿತ್ರಕ್ಕಾಗಿ ಎಂಬ ವಿಚಾರವನ್ನು ಅವರ ಫಿಟ್‌ ನೆಸ್ ಟ್ರೈನರ್‌ ಹೇಳಿದ್ದಾರೆ. 

ಈ ಹೇಳಿಕೆ ಇದೀಗ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಯಾವ ಸಿನಿಮಾದಲ್ಲಿ ಯಶ್‌ ನಟಿಸುತ್ತಿದ್‌ದಾರೆ.? ಅವರ ಮುಂದಿನ ಚಿತ್ರದ ಹೆಸರೇನು.? ನಿರ್ದೇಶಕರು ಯಾರು.? ಯಶ್‌ ಗೆ ಜೋಡಿಯಾಗುತ್ತಿರುವ ನಟಿಯಾರು.? ಹೀಗೆ ಹತ್ತು ಹಲವು ಪ್ರಶ್ನೆಗಳು ಎಲ್ಲರ ಮನದಲ್ಲೂ ಸುಳಿದಾಡುತ್ತಿವೆ. 

 ಕೆಜಿಎಫ್‌ ಚಿತ್ರದ ಬಳಿಕ ಯಶ್‌ ಅವರ ಮಾರ್ಕೆಟ್‌ ವಿಸ್ತಾರಗೊಂಡಿದ್ದು, ಅವರ ಸಿನಿಮಾಗಾಗಿ ಇಡೀ ಭಾರತವೇ ಕಾಯುತ್ತಿದೆ. ಇನ್ನು ನಿರ್ಮಾಪಕ ದಿಲ್ ರಾಜು ಅವರು ಯಶ್‌ ಅವರ ಮುಂದಿನ ಚಿತ್ರಕ್ಕೆ ಹಣ ಹೂಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರೊಂದಿಗೆ ಯಶ್‌ ಅವರು ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಚಿತ್ರದಲ್ಲಿ ನಟಿಸಲಿದ್ದಾರೆ. ಅತಿಥಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಸದ್ಯ ಟ್ವಿಟ್ಟರ್‌ನಲ್ಲಿ YASH19 ಎಂಬ ಹ್ಯಾಷ್​ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.