Yash : ಯಶ್ ಗೆ ಅಭಿಮಾನಿ ಅಂದ್ರೆ ಎಷ್ಟು ಪ್ರೀತಿ..? ಫ್ಯಾನ್ಸ್ ನ ತಳ್ಳಿದ ಬಾಡಿ ಗಾರ್ಡ್ ..! ಯಶ್ ಮಾಡಿದ್ದಿಷ್ಟು

By Infoflick Correspondent

Updated:Monday, May 16, 2022, 09:02[IST]

Yash :  ಯಶ್ ಗೆ ಅಭಿಮಾನಿ ಅಂದ್ರೆ ಎಷ್ಟು ಪ್ರೀತಿ..? ಫ್ಯಾನ್ಸ್ ನ ತಳ್ಳಿದ ಬಾಡಿ  ಗಾರ್ಡ್ ..! ಯಶ್ ಮಾಡಿದ್ದಿಷ್ಟು

ರಾಕಿಂಗ್ ಸ್ಟಾರ್ ಯಶ್ ಈಗ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಇದೀಗ ವಿಶ್ವಮಟ್ಟದಲ್ಲಿ ಯಶ್ ಅವರು ಸದ್ದು ಮಾಡುತ್ತಿದ್ದಾರೆ. ಹೌದು ನಟ ಯಶ್ ಅವರ ಅಭಿನಯಕ್ಕೆ ಫಿದಾ ಆಗದೆ ಉಳಿಯದವರು ಯಾರು ಇಲ್ಲ, ಅಷ್ಟರಮಟ್ಟಿಗೆ ಯಶ್ ಅವರು ಹ್ಯಾಂಡ್ಸಮ್ ಆಗಿ ಕೆಜಿಎಫ್ ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಅದೆಷ್ಟೋ ಸಿನಿಪ್ರಿಯರು ನಟ ಯಶ್ ಅವರ ಅಭಿನಯಕ್ಕೆ ದೊಡ್ಡ ಫ್ಯಾನ್ ಆಗಿ ಇದೇ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಮಾತನಾಡಿರುವ ವಿಡಿಯೋಗಳು ಕಾಣಸಿಗುತ್ತವೆ. ನಟ ಯಶ್ ಅವರು ಎಲ್ಲಾ ಬ್ಯಾಗ್ರೌಂಡ್ ಇಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಬೆಳೆದಿಲ್ಲ. ಬದಲಿಗೆ ಒಬ್ಬ ಕೇವಲ ಬಸ್ ಡ್ರೈವರ್ ಮಗನಾಗಿ ಬಂದಿದ್ದು ತದನಂತರ ಸಿನಿಮಾರಂಗದಲ್ಲಿ ತಮ್ಮನ್ನು ತಾವು ಪ್ರತಿ ಹಂತದಲ್ಲೂ ಕಷ್ಟಪಟ್ಟು ಗುರುತಿಸಿಕೊಂಡವರು. ಹಾಗೆ ಹಂತ ಹಂತವಾಗಿ ಯಶ್ ಅವರು ಮುಳ್ಳಿನ ಹಾಸಿಗೆಯ ಮೇಲೆ ನಡೆದುಕೊಂಡು ಬಂದು ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರು ಎನ್ನಬಹುದು. 

ಯಶ್ ಅವರು ಸಿನಿರಂಗದಲ್ಲಿ ಮಾತ್ರವಲ್ಲದೆ ಈ ನಿಜ ಜೀವನದಲ್ಲಿಯೂ ತುಂಬಾ ಕಷ್ಟದ ದಿನಗಳನ್ನ ನೋಡಿದ್ದಾರೆ ಎನ್ನಲಾಗಿದೆ. ಹಾಗೆ ಯಾರ ಸಹಾಯ ಇಲ್ಲದೆನೆ ಇಂದು ವಿಶ್ವಮಟ್ಟದಲ್ಲಿ ಒಬ್ಬ ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಈಗ ಅಭಿಮಾನಿಗಳ ಸಂಖ್ಯೆ ಕಡಿಮೆ ಏನಿಲ್ಲ ಎಂದು ಹೇಳಬಹುದು. ನಟ ಯಶ್ ಅವರು ಅವರ ಅಭಿಮಾನಿಗಳನ್ನು ಅದೆಷ್ಟು ಪ್ರೀತಿ ಮಾಡುತ್ತಾರೆ ಗೊತ್ತಾ..? ನಿಜಕ್ಕೂ ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಯಶ್ ವ್ಯಕ್ತಿತ್ವ ಏನೆಂದು, ಎಂಥದ್ದು ಎಂದು. ಹೌದು ಪ್ರೀತಿಯಿಂದ ಬಂದವರನ್ನು ಮಾತನಾಡಿಸುವ ಯಶ್ ಅವರು ಒಂದು ಬಾರಿ ಅಭಿಮಾನಿಗಳ ಆಸೆಯ ಸೆಲ್ಫಿ ಅನ್ನು ಪೂರೈಕೆ ಮಾಡುತ್ತಿದ್ದರು. ಆಗ ಯಶ್ ಬಾಡಿಗಾರ್ಡ್ ಒಬ್ಬಾತ ಮಾಡಿದ ಎಡವಟ್ಟಿನಿಂದ ಯಶ್ ಇದ್ದಕ್ಕಿದ್ದಂತೆ ಬಾಡಿಗಾರ್ಡ್ ಮೇಲೆಯೇ ಕೂಗಾಡಿದ್ದರು.

ಅಭಿಮಾನಿಯ ತಳ್ಳಿದ ಬಾಡಿ ಗಾರ್ಡ್  ಮೇಲೆ ಯಶ್ ಹೇಗೆ ಕೋಪ ವ್ಯಕ್ತಪಡಿಸಿದ್ದರು ಗೊತ್ತಾ..? ಬಳಿಕ ಆ ಅಭಿಮಾನಿಗೆ ಯಾವ ರೀತಿ ಆತನ ಆಸೆಯನ್ನು ಪೂರೈಸಿದ್ದರು ಗೊತ್ತಾ. ಇಲ್ಲಿದೆ ನೋಡಿ ಆ ವಿಡಿಯೋ. ವಿಡಿಯೋ ನೋಡಿದ ಬಳಿಕ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಯಶ್ ಅವರು ಇಂತಹದಕ್ಕೆನೆ ಇಷ್ಟ ಆಗುವುದು ಎಂದು ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ನೀವು ಈ ಬಗ್ಗೆ ಕಮೆಂಟ್ ಮಾಡಿ ಇಷ್ಟ ಆದ್ರೆ ಶೇರ್ ಮಾಡಿ. ಮತ್ತು ಮೆಚ್ಚುಗೆ ತಿಳಿಸಿ ಧನ್ಯವಾದಗಳು... (  ವಿಡಿಯೋ ನೋಡಲು ವಾಚ್ ಆನ್ ಯು ಟ್ಯೂಬ್ ಮೇಲೆ ಕ್ಲಿಕ್ ಮಾಡಿ )