Yash : ಅಂದು ಆಟೋದಲ್ಲಿ ಕಳ್ಳರ ಸಂತೆ ಸಿನೆಮಾಗೆ ಪ್ರೊಮೋಷನ್ ಮಾಡಿದ್ದ ಯಶ್..! ಇಂದು ಇಡೀ ಇಂಡಿಯಾ ಕಾದ ಸಿನಿಮಾ ಕೆಜಿಎಫ್

By Infoflick Correspondent

Updated:Wednesday, May 11, 2022, 11:18[IST]

Yash :   ಅಂದು ಆಟೋದಲ್ಲಿ  ಕಳ್ಳರ ಸಂತೆ ಸಿನೆಮಾಗೆ  ಪ್ರೊಮೋಷನ್ ಮಾಡಿದ್ದ ಯಶ್..! ಇಂದು ಇಡೀ ಇಂಡಿಯಾ ಕಾದ ಸಿನಿಮಾ ಕೆಜಿಎಫ್

ಕನ್ನಡದ ಬಹುನಿರೀಕ್ಷಿತ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ ಭಾಗ-2 ಇದೀಗ ಆಲ್ಮೋಸ್ಟ್ ಇಂಡಿಯಾ ಅಷ್ಟೇ ಅಲ್ಲದೆ ಬೇರೆ ಬೇರೆ ದೇಶದಲ್ಲೂ ಕೂಡ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಸಾವಿರ ಕೋಟಿ ಕಲೆಕ್ಷನ್ ಮಾಡಿ ಇನ್ನೂ ನಾಗಾಲೋಟ ಮುಂದುವರಿಸಿದೆ. ಹೌದು ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗ ದೊಡ್ಡದಾಗಿಯೇ ಈಗ ಸಾಧನೆ ಮಾಡಿದೆ ಎಂದು ಹೇಳಬಹುದು. ಕನ್ನಡಿಗರು ಹೆಮ್ಮೆಯಿಂದ ನಮ್ಮ ಸಿನಿಮಾ ಕೆಜಿಎಫ್ ಎಂದು ಹೇಳುತ್ತಾ, ಬೇರೆ ಸಿನಿಮಾರಂಗದವರು ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವುದನ್ನು ನೋಡಿದ್ರೆ ಖುಷಿಯಾಗುತ್ತಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಅವರು ತುಂಬಾನೇ ಕಷ್ಟ ಪಟ್ಟು ಮೇಲೆ ಬಂದವರು.

ಸಿನಿಮಾರಂಗದಲ್ಲಿ ಹಂತಹಂತವಾಗಿ ಬೆಳೆದು ಇಂದು ರಾಕಿ ಯಶಸ್ವಿಯಾಗಿ ದೊಡ್ಡ ಸಾಧನೆ ಮಾಡಿದ್ದಾರೆ. ನಟನೆಯ ಮೂಲಕ ಮನಸ್ಸು ಇದ್ದರೆ ಎಷ್ಟು ದೊಡ್ಡ ಮಟ್ಟಕ್ಕಾದರೂ ಬೆಳೆಯಬಹುದು ಎಂದು ತೋರಿಸಿ. ಮಾಡುವ ಕೆಲಸವೂ ಕರೆಕ್ಟಾಗಿ ಇರಬೇಕು ಎಂದು ನಿರೂಪಿಸಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಅವರು ಇದೀಗ ಕೇವಲ ಭಾರತದ ನೆಚ್ಚಿನ ನಟ ಮಾತ್ರವಲ್ಲದೆ ವಿದೇಶದಲ್ಲೂ ಕೂಡ ಯಶ್ ಅವರ ಅಭಿಮಾನಿಗಳು ಕೆಜಿಎಫ್ ಮೂಲಕ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬೆಳೆಯುವ ಸಂದರ್ಭಕ್ಕೆ ಒಂದೊಂದು ಅವರ ಸಿನಿಮಾಗೂ ತುಂಬಾ ಕಷ್ಟಪಟ್ಟವರು ಯಶ್. ಜನರಿಗೆ ಅವರ ಸಿನಿಮಾ ತಲುಪಲಿ ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾ ನೋಡಲಿ ಎಂದು, ರಸ್ತೆ ರಸ್ತೆಯಲ್ಲಿ ಪ್ರಮೋಷನ್ ಮಾಡಿದ್ದಾರೆ ಯಶ್.    

ಅದರ ವಿಡಿಯೋ-1 ಇದೀಗ ದೊರಕಿದೆ. ಒಂದು ಕಳ್ಳರ ಸಂತೆ ಎಂಬ ಸಿನಿಮಾದಲ್ಲಿ ನಟಿಸಿದ್ದ ಯಶ್, ಅವರದೇ ಆದ ಕಳ್ಳರ ಸಂತೆ ಸಿನಿಮಾ ಪ್ರಮೋಷನ್ ಗಾಗಿ ಮೆಜೆಸ್ಟಿಕ್ ನಲ್ಲಿ ಒಂದು ಆಟೋವನ್ನ ಸ್ವತಹ ಅವರೇ ಓಡಿಸಿ ಪ್ರಮೋಷನ್ ಮಾಡಿಕೊಂಡಿದ್ದರು. ಅಂದು ತಮ್ಮ ಕಳ್ಳರ ಸಂತೆ ಚಿತ್ರಕ್ಕಾಗಿ ಆಟೋದಲ್ಲಿ ಪ್ರಮೋಶನ್ ಮಾಡಿದ್ದ ಯಶ್, ಇಂದು ಅವರ ನೆಕ್ಸ್ಟ್ ಫಿಲಂಗೆ ಇಡೀ ಇಂಡಿಯಾ ಕಾಯುತ್ತಿದೆ ಎಂದರೆ ಯಶ್ ಅವರು ದೊಡ್ಡ ಮಟ್ಟದಲ್ಲಿ ಇದೀಗ ಬೆಳೆದಿದ್ದಾರೆ ಎಂದು ಹೇಳಬಹುದು. ಹೌದು ಸತತ ಪ್ರಯತ್ನ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಯಶ್ ಅವರ ಸಿನಿ ಜೀವನದ ದಾರಿ ನೋಡಿದರೆ ತಿಳಿಯುತ್ತದೆ. ಅಂದಿನ ಯಶ್ ಅವರ ಹಳೆಯ ಆಟೋ ವಿಡಿಯೋ ನೋಡಿ. ಹಾಗೆ ಇಂದು ನಟ ಯಶ್ ಹವಾ ಹೇಗಿದೆ ಎಂಬುದಾಗಿಯೂ ಸಹ ನೋಡಿ. ವಿಡಿಯೋ ಇಷ್ಟವಾದಲ್ಲಿ ತಪ್ಪದೇನೆ ಶೇರ್ ಮಾಡಿ ಧನ್ಯವಾದಗಳು.. ( video credit : tv9 kannada )