Yash : ರಾಖಿ ಹಬ್ಬವನ್ನು ಹೀಗೆ ಆಚರಿಸಿದ ರಾಕಿಭಾಯ್ ! ಹೇಗಿತ್ತು ಯಶ್ ಕುಟುಂಬದಲ್ಲಿನ ಸಂಭ್ರಮ

By Infoflick Correspondent

Updated:Thursday, August 11, 2022, 11:44[IST]

Yash : ರಾಖಿ ಹಬ್ಬವನ್ನು ಹೀಗೆ ಆಚರಿಸಿದ ರಾಕಿಭಾಯ್ ! ಹೇಗಿತ್ತು ಯಶ್ ಕುಟುಂಬದಲ್ಲಿನ ಸಂಭ್ರಮ

ಸ್ಯಾಂಡಲ್ ವುಡ್ ನ ನಟ ನಟಿಯರು ಇನ್ನೂ ಮುಂತಾದ ಕಲಾವಿದರು ಸಹ ರಾಖಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಮನೆಯಲ್ಲಿ ರಾಖಿ ಹಬ್ಬ ಬಲು ಜೋರಾಗಿಯೆ ನಡೆದಿದೆ ಹೌದು ವಿಶೇಷವಾದ ಬಂಧ, ಪ್ರೀತಿಯ ಶುದ್ಧ ರೂಪದೊಂದಿಗೆ ಎಲ್ಲ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು ಎಂದು ಬರೆದುಕೊಂಡು ರಾಖಿ ಹಬ್ಬದ ಫೋಟೊಗಳನ್ನು ಯಶ್ ಹಾಗು ರಾಧಿಕಾ ಶೇರ್ ಮಾಡಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಸಹೋದರಿ ಜೊತೆಯಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ರಕ್ಷಾ ಬಂಧನ ಹಬ್ಬದ ಶುಭಾಶಯ ತಿಳಿಸಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಅವರಿಗೆ  ತಂಗಿ ನಂದಿನಿ ಕೈಗೆ ರಾಖಿಯನ್ನು ಕಟ್ಟಿ ತನ್ನ ಅಣ್ಣನಿಗೆ ಒಳ್ಳೆಯದಾಗಲಿ ಎಂದು ಹರಿಸಿ ರಾಖಿ ಹಬ್ಬವನ್ನು ಆಚರಿಸಿದ್ದಾರೆ.ರಾಖಿ ಹಬ್ಬದ ಸಲುವಾಗಿ ಐರಾ ಯಶ್ ತನ್ನ ತಮ್ಮನಾದ ಯಥರ್ವ್ ಯಶ್ ಗೆ ರಾಖಿಯನ್ನು ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ. ಹೊದ ವರ್ಷ ಒಂದೇ ತರಹದ ಬಟ್ಟೆ ತೊಟ್ಟು ಕಂಗೊಳಿಸಿದ ಅಣ್ಣ ತಮ್ಮ ಈ ಬಾರಿ ಮುದ್ದು ಮುದ್ದಾಗಿ ರಾಖಿ ಕಟ್ಟಿ ಸಿಹಿ ತಿಂದಿದ್ದಾರೆ. 

ರಾಧಿಕಾ ಪಂಡಿತ್ ಅವರು ಕೂಡ ತಮ್ಮ ಆಗಿರುವ ಗೌರಂಗ್ ಪಂಡಿತ್ ಅವರಿಗೆ  ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ. ರಾಧಿಕಾ ಪಂಡಿತ್ ಅವರು ಕೂಡ ಅಮೆರಿಕಾದಲ್ಲಿ ನೆಲೆಸಿರುವ ತಮ್ಮ ಸಹೋದರನಿಗೆ ರಕ್ಷಾಬಂಧನದ ಶುಭಾಶಯ ತಿಳಿಸಿದ್ದಾರೆ. ನನ್ನ ಪ್ರೀತಿ ಮತ್ತು ರಾಖಿಯನ್ನು ಚಿಕಾಗೋಗೆ ಕಳುಹಿಸುತ್ತಿದ್ದೇನೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಐ ಲವ್ ಯೂ, ಅಲ್ಲಿರುವ ಎಲ್ಲ ಸಹೋದರ, ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ.