Yash: ಹೀರೋ ಒಬ್ಬನಿಂದಲೇ ಸಿನಿಮಾ ಸಾಧ್ಯವಿಲ್ಲ: ಹೀಗೆ ಯಶ್ ಹೇಳಲು ಕಾರಣವೇನು..?

By Infoflick Correspondent

Updated:Saturday, April 30, 2022, 09:51[IST]

Yash: ಹೀರೋ ಒಬ್ಬನಿಂದಲೇ ಸಿನಿಮಾ ಸಾಧ್ಯವಿಲ್ಲ: ಹೀಗೆ ಯಶ್ ಹೇಳಲು ಕಾರಣವೇನು..?

ಜಗತ್ತಿನಾದ್ಯಂತ ತೆರೆಗೆ ಬರುತ್ತಿರುವ ಚಿತ್ರ ಕೆಜಿಎಫ್ 2 ಸಿನಿಮಾ ನೋಡಲು ಕೋಟ್ಯಾಂತರ ಜನ ಕಾಯುತ್ತಿದ್ದಾರೆ. ಜಗತ್ತಿನ 70 ದೇಶಗಳಲ್ಲಿ ಕೆಜಿಎಫ್ 2 ಚಿತ್ರ ರಿಲೀಸ್ ಆಗುತ್ತಿದೆ. ವಿಶ್ವಾದ್ಯಂತ ರಾಕಿ ಭಾಯ್ ಅಬ್ಬರ ಜೋರಾಗಿದೆ. ವಿಶ್ವಾದ್ಯಂತ ಭಾರೀ ಸಂಚಲನ ಮೂಡಿಸಿರುವ ಕೆಜಿಎಫ್ 2 ಚಿತ್ರದ ತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.  ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಕೂಡ ಮಾತನಾಡಿದ್ದಾರೆ. ಯಶ್ ಅವರು ಏನ್ ಹೇಳಿದ್ದಾರೆ ಎಂದು ನೋಡೋಣ ಬನ್ನಿ..

ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಸಿನಿಮಾ ಅಬ್ಬರಿಸಲಿದೆ. ಈಗಾಗಲೇ ಟಿಕೆಟ್ ಗಳು ವಿಶ್ವಾದ್ಯಮತ ಸೋಲ್ಡ್ ಔಟ್ ಆಗಿದೆ. ಇನ್ನೆರಡು ದಿನ ಕಳೆದರೆ ರಾಕಿ ಭಾಯ್ ಸಾಮ್ರಾಜ್ಯ ಅನಾವರಣಗೊಳ್ಳಲಿದೆ. ಕೆಜಿಎಫ್ 2 ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಪ್ರಚಾರ ಕಾರ್ಯ ಜೋರಾಗಿದೆ. ಯಶ್ ಈಗ ಕೇವಲ ಸ್ಯಾಂಡಲ್ ವುಡ್  ಹೀರೋ ಅಲ್ಲ. ಬಾಲಿವುಡ್, ಕಾಲಿವುಡ್, ಟಾಲಿವುಡ್ ಹಾಗೂ ಹಾಲಿವುಡ್ ನಲ್ಲೂ ಫೇಮಸ್ ಆಗಿದ್ದಾರೆ. ಕೆಜಿಎಫ್ ಚಿತ್ರದ ಬಳಿಕ ಯಶ್ ಅವರ ಅಭಿಮಾನಿ ಬಳಗ ಹೆಚ್ಚಾಗಿದೆ.  

ಯಶ್ ಎಂದರೆ ಕಂಪ್ಲೀಟ್ ಪ್ಯಾಕೇಜ್ ಎಂಬ ಮಾತಿಗೆ ಮಾತನಾಡಿದ ಯಶ್, ಒಬ್ಬ ಹೀರೊನಿಂದ ಸಿನಿಮಾವಾಗುತ್ತೆ ಅನ್ನೋದು ಸುಳ್ಳು. ತಂಡದಲ್ಲಿರುವ ಪ್ರತಿಯೊಬ್ಬರ ಪರಿಶ್ರಮದಿಂದಲೇ ಚಿತ್ರ ಆಗುತ್ತದೆ. ನಾನು ನಟನಾಗಿ ನಿಲ್ಲಬೇಕೆಂದರೆ ತಂಡದವರೆಲ್ಲರೂ ಕಾರಣರಾಗಿರುತ್ತಾರೆ. ನನ್ನ ಮೇಕಪ್ಮ್ಯಾನ್ ಗಂಗು, ಅಸಿಸ್ಟೆಂಟ್ ಚೇತನ್, ಹೇರ್ ಸ್ಟೈಲ್ ಮಾಡುವ ಚಂದ್ರು, ಕಾಸ್ಟ್ಯೂಮ್ ಕೊಡುವ ಹುಡುಗ ಅಭಿ, ಸಾನಿಯಾ ಸಾರ್ದಾರಿಯ, ರಾಕೇಶ್ ಹೀಗೆ ಮುಂತಾದವರ ಪಾತ್ರ ದೊಡ್ಡದಿದೆ. ಸಿನಿಮಾ ನಿರ್ದೇಶಕರು, ನಿರ್ಮಾಪಕರು, ಅಸಿಸ್ಟೆಂಟ್ ಡೈರೆಕಟರ್ ಪ್ರತಿಯೊಬ್ಬರ ಪರಿಶ್ರಮವಿರುತ್ತದೆ ಎಂದು ಹೇಳಿದ್ದಾರೆ. ( video credit : news 18 kannada )