Darshan : ಯಶ್ ಹಾಗೂ ದರ್ಶನ್ ಇಬ್ಬರಿಗೂ ಆಗೋದಿಲ್ಲ ಎಂಬುವವರು ಈ ಸುದ್ದಿಯನ್ನು ತಪ್ಪದೇ ನೋಡಿ..

By Infoflick Correspondent

Updated:Wednesday, September 21, 2022, 12:29[IST]

Darshan : ಯಶ್ ಹಾಗೂ ದರ್ಶನ್ ಇಬ್ಬರಿಗೂ ಆಗೋದಿಲ್ಲ ಎಂಬುವವರು ಈ  ಸುದ್ದಿಯನ್ನು  ತಪ್ಪದೇ ನೋಡಿ..

ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರೂ ತುಂಬಾ ಕಷ್ಟಪಟ್ಟು, ಮೇಲೆ ಬಂದವರು. ಸಿನಿಮಾ ಇಂಡಸ್ಟ್ರಿಯಲ್ಲಿ ಮಣ್ಣು ಹೊತ್ತು ಇಂದು ಕರ್ನಾಟಕವನ್ನೂ ಮೀರಿಸಿ ಎಲ್ಲೆಡೆ ಮಿಂಚುತ್ತಿರುವ ಸ್ಟಾರ್ ಗಳು. ಇವರಿಬ್ಬರಿಗೂ ಅವರವರದ್ದೇ ಆದ ಅಭಿಮಅನಿಗಳ ಗುಂಪುಗಳಿವೆ. ಸಿನಿಮಾ ಇಂಡಸ್ಟ್ರಿ, ಸೆಲಬ್ರಿಟಿ ಎಂದ ಮೇಲೆ ಅಭಿಮಾನಿಗಳು ಇರುವುದು ಸಹಜವೇ. ಕೆಲ ಅಭಿಮಾನಿಗಳು ತಮ್ಮ ಹೀರೋ, ಹೀರೋಯಿನ್ ಗಳ ಬಗ್ಗೆ ವಿಶೇಷ ಕಾಳಜಿ, ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ಸ್ವಲ್ಪ ಪೊಸೆಸಿವ್ ಆಗಿಯೂ ಇರುತ್ತಾರೆ.    
 
ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್ ಅಭಿಮಾನಿಗಳು ಡಿ ಬಾಸ್ ಹೆಚ್ಚು ಎಂದರೆ, ಯಶ್ ಅಭಿಮಾನಿಗಳು ನಮ್ಮ ರಾಕಿಭಾಯ್ ಹೆಚ್ಚು ಎನ್ನುತ್ತಾರೆ. ಹೀಗೆ ಬೇರೆ ಬೇರೆ ಹೀರೋಗಳ ಅಭಿಮಾನಿಗಳು ತಮ್ಮ ಸ್ಟಾರ್ ಹೆಚ್ಚು ಎಂದು ಹೇಳುತ್ತಿರುತ್ತಾರೆ. ಹೀಗಿರುವಾಗ ಇತ್ತೀಚೆಗೆ ಯಶ್ ಹಾಗೂ ದರ್ಶನ್ ಇಬ್ಬರ ನಡುವಿನ ಸಂಬಂಧ ಸರಿಯಿಲ್ಲ. ಇಬ್ಬರೂ ಕಿತ್ತಾಡಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂದೆಲ್ಲಾ ಹೇಳಲಾಗಿತ್ತು. ಆದರೆ ಇದನ್ನು ನಂಬುವುದು ತುಂಬಾನೇ ಕಷ್ಟವೂ ಹೌದು. 

ಯಶ್ ಹಾಗೂ ದರ್ಶನ್ ಇಬ್ಬರೂ ಸುಮಲತಾ ಅಂಬರೀಷ್ ಅವರ ಮುದ್ದಿನ ಮಕ್ಕಳಂತೆ. ಇಬ್ಬರನ್ನೂ ಸುಮಲತಾ ಅವರು ಇಷ್ಟಪಟ್ಟಂತೆಯೇ ಯಶ್ ಹಾಗೂ ದರ್ಶನ್ ಕೂಡ ಪ್ರೀತಿಸುತ್ತಾರೆ. ಸದಾ ಸುಮಲತಾ ಅವರ ಬೆನ್ನಿಗೆ ನಿಲ್ಲುತ್ತಾರೆ. ಕೆಲ ದಿನಗಳ ಹಿಂದೆ ಸುಮಲತಾ ಅವರ ಬರ್ತಡೇ ಪಾರ್ಟಿಯನ್ನು ಮಾಡಲಾಯ್ತು. ಈ ವೇಳೆ ಯಶ್ ಹಾಗೂ ದರ್ಶನ್ ಇಬ್ಬರೂ ಆಗಮಿಸಿದ್ದರು. ಇಬ್ಬರು ಬಂದ ಕೂಡಲೇ ಒಬ್ಬರನ್ನೊಬ್ಬರು ನೋಡಿ ಹಾಯ್ ಹೇಳಿ ತಬ್ಬಿಕೊಂಡರು. ಈ ವೀಡಿಯೋ ನೋಡಿದರೆ, ಯಶ್ ಹಾಗೂ ದರ್ಶನ್ ವಿರೋಧಿಗಳು ಎಂದವರಿಗೆ ಬುದ್ಧಿ ಇಲ್ಲ ಅಷ್ಟೇ.