ಪುನೀತ್ ರಾಜ್ ಕುಮಾರ್ ತುಂಬಾ ಇಷ್ಟಪಟ್ಟಿದ್ದ ಒಂದು ವಸ್ತು ಯಶ್ ಅವರ ಬಳಿ ಇತ್ತು: ಅದನ್ನು ಯಶ್ ಅಪ್ಪುಗೆ ಏಕೆ ಕೊಡಲಿಲ್ಲ ಅಂತ ನೋಡೋಣ ಬನ್ನಿ..

By Infoflick Correspondent

Updated:Saturday, November 27, 2021, 17:21[IST]

ಪುನೀತ್ ರಾಜ್ ಕುಮಾರ್ ತುಂಬಾ ಇಷ್ಟಪಟ್ಟಿದ್ದ ಒಂದು ವಸ್ತು ಯಶ್ ಅವರ ಬಳಿ ಇತ್ತು:  ಅದನ್ನು ಯಶ್ ಅಪ್ಪುಗೆ ಏಕೆ ಕೊಡಲಿಲ್ಲ ಅಂತ ನೋಡೋಣ ಬನ್ನಿ..

ಇನ್ನೆರಡು ದಿನ ಕಳೆದರೆ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ತಿಂಗಳಾಗುತ್ತೆ. ಇನ್ನು ಪುನೀತ್ ರಾಜ್ ಕುಮಾರ್ ನಮ್ಮೊಂದಿಗೆ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ನಿತ್ಯ ಪುನೀತ್ ಅವರ ಬಗ್ಗೆ ಹಲವು ವಿಚಾರಗಳನ್ನು ತಿಳಿದುಕೊಳ್ಳಲು ಜನ ಕಾತುರರಾಗಿದ್ದಾರೆ. ಪುನೀತ್ ಇಲ್ಲ ಎಂಬ ಸತ್ಯ ಗೊತ್ತಿದ್ದರೂ ಇದೊಂದು ಕನಸಾಗಿ ಬಿಡಲಿ. ಅಪ್ಪು ಜೀವಂತವಾಗಿ ವಾಪಸ್ ಬರಲಿ ಅನ್ನೋ ಆಸೆ ಎಲ್ಲರಲ್ಲೂ ಯಾವುದೋ ಒಂದು ಮೂಲೆಯಲ್ಲಿ ಹಾಗೆ ಉಳಿದಿದೆ. ದುರಾದೃಷ್ಟವಶಾತ್ ಪುನೀತ್ ರಾಜ್ ಕುಮಾರ್ ಅವರು ಮತ್ತೆಂದೂ ಮರಳಿ ಬಾರದ ಲೋಕಕ್ಕೆ ಹೋಗಿರುವುದು ಸತ್ಯ.

ಇನ್ನು ಪುನೀತ್ ರಾಜಕುಮಾರ್ ಅವರು ಇದ್ದಾಗ ಅವರು ಮಾಡಿದ ಸೇವೆಗಳು, ಅವರು ಮಾಡಿದ ಸಹಾಯ, ಅವರು ಬದುಕಿದ ರೀತಿ ಪ್ರತಿಯೊಬ್ಬರಲ್ಲೂ ಅಚ್ಚರಿಯನ್ನು ಮೂಡಿಸಿದೆ. ಒಬ್ಬ ಮನುಷ್ಯ ಇಷ್ಟು ಸರಳವಾಗಿ ಬದುಕಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಕಷ್ಟದಲ್ಲಿದ್ದವರಿಗೆ ಕೈಚಾಚುತ್ತಾ, ಅಗತ್ಯವಿದ್ದವರಿಗೆ ಸಹಾಯ ಮಾಡುತ್ತಾ, ಸರಳ ಜೀವನ ನಡೆಸಿದ ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ. ದೊಡ್ಮನೆ ಹುಡುಗ ದೊಡ್ಮನೆ ಅವರಂತೆಯೇ ದೊಡ್ಡ ಮನಸ್ಸಿನಿಂದ ಬದುಕಿದವರು.  

ಅವರು ಇದ್ದಾಗ ಅವರು ಮಾಡುತ್ತಿದ್ದ ಸಹಾಯಗಳು ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದರು. ಆದರೆ ಅವರು ಕೊನೆಯುಸಿರೆಳೆದ ಕ್ಷಣದಿಂದ ಇಂದಿನವರೆಗೂ ಅವರಿಂದ ಸಹಾಯ ಪಡೆದ ಪ್ರತಿಯೊಬ್ಬ ಮನುಷ್ಯನು ಬಂದು ಮಾಧ್ಯಮಗಳ ಮುಂದೆ ನಮಗೆ ಅಷ್ಟು ಸಹಾಯ ಮಾಡಿದರು, ಇಷ್ಟು ಮಾಡಿದ್ದರು. ಇನ್ನು ಮುಂದೆ ಯಾರೂ ನಮಗೆ ಎಂದೆಲ್ಲಾ ಮಾತನಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಕರುನಾಡಿನ ಮಗನಾಗಿದ್ದಾರೆ. ಕರ್ನಾಟಕದ ಪ್ರತಿಯೊಂದು ಮನೆಗಳಲ್ಲೂ ಪುನೀತ್ ರಾಜ್ ಕುಮಾರ್ ಅವರನ್ನು ನೆನೆಯದ ದಿನಗಳಿಲ್ಲ. ಅಂತಹ ವ್ಯಕ್ತಿ ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋದರಲ್ಲ ಎಂಬದು ಎಲ್ಲರನ್ನೂ ಕಾಡುತ್ತಿದೆ.

ಅದೇನೇ ಇರಲಿ ಅಪ್ಪು ಇಂದು ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇದು ನಿಮಗೆಲ್ಲಾ ಗೊತ್ತಾ ಅಪ್ಪು ಹಾಗೂ ಯಶ್ ಇಬ್ಬರೂ ಒಳ್ಳೆಯ ಸ್ನೇಹಿತರು. ಪ್ರತಿಯೊಂದು ಕಾರ್ಯಕ್ರಮದಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಯಶ್ ಮನೆಯಲ್ಲಿ ಯಾವುದೇ ಸಮಾರಂಭ ನಡೆದರೂ ಅಲ್ಲಿ ಪುನೀತ್ ಹಾಜರಿರುತ್ತಿದ್ದರು. ಅದರಂತೆಯೇ ಅಕ್ಟೋಬರ್ 26ರಂದು ನಡೆದ ಭಜರಂಗಿ ಪ್ರಮೋಶನ್ ಕಾರ್ಯಕ್ರಮದಲ್ಲಿ ಶಿವಣ್ಣ, ಅಪ್ಪು, ಯಶ್ ಮೂವರು ಕೂಡ ವೇದಿಕೆ ಮೇಲೆ ಹಾಜರಿದ್ದರು. ಹಿಂದಿನ ದಿನ ಪುನೀತ್ ಒಟ್ಟಿಗೆ ಇದ್ದರು. ಆದರೆ ಮಾರನೆಯ ದಿನ ಪುನೀತ್ ಎಲ್ಲರನ್ನೂ ಬಿಟ್ಟು ಇಹಲೋಕ ತೆಗೆಸಿದ ಸುದ್ದಿ ಕೇಳಿ ಶಾಕ್ ಆಗಿದ್ದರು.

ಇನ್ನು ಪುನೀತ್ ಅವರಿಗೆ ಯಶ್ ಅವರ ಬಳಿಯಿದ್ದ ಒಂದು ವಸ್ತು ತುಂಬಾ ಇಷ್ಟವಾಗಿತ್ತಂತೆ. ಕೊನೆಗೂ ಅವರಿಗೆ ಆ ವಸ್ತು ಧಕ್ಕಲೇ ಇಲ್ಲ. ಅದು ಏನ್ ಗೊತ್ತಾ? ಕೆಜಿಎಫ್ ನಲ್ಲಿ ಬಿಟ್ಟಿದ್ದ ಯಶ್ ಅವರ ಗಡ್ಡ. ಯಶ್ ಅವರ ಗಡ್ಡ ಎಂದರೆ ಪುನೀತ್ ರಾಜಕುಮಾರ್ ಅವರಿಗೆ ಇಷ್ಟವಂತೆ. ಹಾಗೆಂದು ರ್ಯಾಪಿಡ್ ರಶ್ಮಿ ಶೋನಲ್ಲಿ ಪುನೀತ್ ರಾಜ್ ಕುಮಾರ್ ಅವರೇ ಹೇಳಿದ್ದರು. ಯಶ್ ಅವರ ಗಡ್ಡ ನನಗಿಷ್ಟ. ಆದರೆ ಏನು ಮಾಡುವುದು ನಮಗೆ ಆ ಥರ ಗಡ್ಡ ಬರುವುದಿಲ್ಲ ಎಂದಿದ್ದರು.