Yash : ಕೆಜಿಎಫ್ 2 ಮುಗಿದರೂ ಯಶ್ ಗಡ್ಡ ತೆಗೆಯುತ್ತಿಲ್ಲ.! ಬಂದೆ ಬಿಡ್ತು ಮುಂದಿನ ಚಿತ್ರದ ಬಿಗ್ ಅಪ್ಡೆಟ್ಸ್..!

By Infoflick Correspondent

Updated:Saturday, May 14, 2022, 10:28[IST]

Yash : ಕೆಜಿಎಫ್ 2 ಮುಗಿದರೂ ಯಶ್ ಗಡ್ಡ ತೆಗೆಯುತ್ತಿಲ್ಲ.! ಬಂದೆ ಬಿಡ್ತು ಮುಂದಿನ ಚಿತ್ರದ ಬಿಗ್ ಅಪ್ಡೆಟ್ಸ್..!

ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಯಶ್ ಅವರು ಇದೀಗ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಹೌದು ಕೆಜಿಎಫ್ ಮೂಲಕ ಸ್ಟಾರ್ ನಟರ ಪಟ್ಟಿ ಸೇರಿದ ಕೆಜಿಎಫ್ ನಾಯಕಇದೀಗ ಏನೇ ಮಾಡಿದರೂ ದೊಡ್ಡ ಸುದ್ದಿಯಾಗುತ್ತಿದ್ದಾರೆ. ಎಲ್ಲೇ ಹೋದರು ಕನ್ನಡಕ್ಕೆ ಹಾಗೂ ಯಶ್ ಗೆ ಅಪಾರ ಗೌರವ, ಅಭಿಮಾನ ಪ್ರೀತಿ ಎಲ್ಲವೂ ಕೂಡ ಹೆಚ್ಚಾಗಿ ಸಿಗುತ್ತಿದೆ ಎನ್ನಬಹುದು. ಕೇವಲ ಯಶ್ ಅವರಿಗೆ ಮಾತ್ರವಲ್ಲದೆ ಇಡೀ ಕೆಜಿಎಫ್ ಚಿತ್ರತಂಡ ಈ ಸಂಭ್ರಮಾಚರಣೆಗೆ ಭಾಗಿಯಾಗಿದ್ದಾರೆ. ಹೌದು ನಟ ಯಶ್ ಗಡ್ಡ ಬಿಡುವುದರಲ್ಲಿ ಫೇಮಸ್,ಅದು ಎಲ್ಲರಿಗೂ ಗೊತ್ತೇ ಇದೆ. ಸಿನಿಮಾಗೆ ತಕ್ಕಹಾಗೆ ಗಡ್ಡವನ್ನು ವಿಭಿನ್ನವಾಗಿ ಬಿಡುವ ನಟ ಯಶ್ ಗಡ್ಡದಂತೆ ಸಾಕಷ್ಟು ಜನರು ಗಡ್ಡ ಬಿಡಲು ಮುಂದಾಗಿದ್ದಾರೆ.

ಲಕ್ಕಿ ಮತ್ತು ರಾಜಾಹುಲಿ ಚಿತ್ರ ಬಿಟ್ಟರೆ ಯಶ್ ಅವರು ಎಲ್ಲ ಸಿನಿಮಾಗಳಲ್ಲಿಯೂ ಬೇರೆಬೇರೆ ವಿಭಿನ್ನವಾದ ಗಡ್ಡವನ್ನು ಬಿಟ್ಟು ಯಶಸ್ವಿಯಾಗಿದ್ದಾರೆ. ಹೌದು ಈಗ ಕೆಜಿಎಫ್ ಭಾಗ-2 ವಿಶ್ವಮಟ್ಟದಲ್ಲಿ ದೊಡ್ಡದಾಗಿ ಯಶಸ್ವಿಯಾಗಿದೆ. ಆದ್ರೂ ಸಹ ಯಶ್ ಗಡ್ಡಕ್ಕೆ ಇನ್ನು ಕತ್ತರಿ ಬಿದ್ದಿಲ್ಲ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಮುಂದಿನ ಸಿನಿಮಾದಲ್ಲಿಯೂ ಕೂಡ ನಟ ಯಶ್ ಇದೇ ಗಡ್ಡವ ಮುಂದುವರಿಸುತ್ತಾರ ಎಂದು ಚರ್ಚೆ ನಡೆಸಿದ್ದಾರೆ. ಗಡ್ಡವನ್ನು ಬಿಡುತ್ತಲೇ ಟ್ರೆಂಡನ್ನು ಸೃಷ್ಟಿ ಮಾಡುತ್ತಾರ ಯಶ್ ಕಾದುನೋಡಬೇಕಿದೆ. ಹೌದು ಮಾಹಿತಿ ತಿಳಿದು ಬಂದ ಪ್ರಕಾರ ಕೆಜಿಎಫ್-2 ಕೊನೆಯಲ್ಲಿ ಕೆಜಿಎಫ್ ಭಾಗ-3 ಬರುವ ಸೂಚನೆಯನ್ನು ಚಿತ್ರತಂಡ ನೀಡಿದೆ.

ಇದರ ಬಗ್ಗೆ ಅಧಿಕೃತವಾಗಿ ಯಾರೂ ಮಾಹಿತಿ ನೀಡಿಲ್ಲ. ಆದರೆ ಕೆಜಿಎಫ್ ಭಾಗ-3 ಬಂದರೆ ಯಾರು ವಿಲನ್ ಆಗುತ್ತಾರೆ ಎಂದು ಇದೀಗ ಚರ್ಚೆಯಾಗುತ್ತಿದ್ದು, ರಾಣಾ ದಗ್ಗುಬಾಟಿ ಅವರ ಹೆಸರು ಕೂಡ ಇನ್ನೊಂದು ಕಡೆ ಕೆಜಿಎಫ್ ಭಾಗ ಮೂರರಲ್ಲಿ ವಿಲನ್ ಆಗಿ ಕಾಣುವ ಸಾಧ್ಯತೆ ಇದೆ ಎಂದು ಕೇಳಿ ಬರುತ್ತಿದೆ. ಕಾರಣ ನಟ ಯಶ್ ಮಾಡಿದ ಅದೊಂದು ಟ್ವಿಟ್ ಎನ್ನಬಹುದು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.....