Yash : ರಾಕಿಂಗ್ ಸ್ಟಾರ್ ಯಶ್ ಗಡ್ಡಕ್ಕೆ ಹೆಚ್ಚಿದ ಅಭಿಮಾನಿಗಳ ಬಳಗ: ಮಿಸ್ ಮಾಡದೇ ಈ ವೀಡಿಯೋ ನೋಡಿ

By Infoflick Correspondent

Updated:Wednesday, June 1, 2022, 19:38[IST]

Yash :  ರಾಕಿಂಗ್ ಸ್ಟಾರ್ ಯಶ್ ಗಡ್ಡಕ್ಕೆ ಹೆಚ್ಚಿದ ಅಭಿಮಾನಿಗಳ ಬಳಗ: ಮಿಸ್ ಮಾಡದೇ ಈ ವೀಡಿಯೋ ನೋಡಿ

ಕೆಜಿಎಫ್ ಚಿತ್ರ ಬಂದೇ ಬಂತು ಎಲ್ಲೆಲ್ಲೂ ಕೆಜಿಎಫ್ ಸುದ್ದಿಯೇ. ಒಂದಾ ಚಿತ್ರದ ಸುದ್ದಿ, ಇಲ್ಲವೇ ರಾಕಿಭಾಯ್ ಸುದ್ದಿ. ಇವರು ಸುದ್ದಿ ಇರದ ದಿನವೇ ಇಲ್ಲ. ಇನ್ನು ಕೆಜಿಎಫ್ ಚಿತ್ರಕ್ಕಾಗಿ ರಾಕಿಂಗ್  : ಸ್ಟಾರ್ ಯಶ್ ಅದ್ಯಾವ ಗಳಿಗೆಯಲ್ಲಿ ಗಡ್ಡ ಬಿಟ್ಟರೋ ಗೊತ್ತಿಲ್ಲ . ಬಟ್,  ಅಂದಿನಿಂದ  ಇವರ ಅಭಿಮಾನಿಗಳ ಬಳಗ ಹೆಚ್ಚಾಗಿದ್ದಂತೂ ನಿಜವೇ. ಯಶ್ ಅವರಂತೆಯೇ ಅನೇಕರು ಗಡ್ಡ ಬಿಟ್ಟಿದ್ದಾರೆ. ಅಲ್ಲದೇ, ಯಶ್ ಅವರು ಯಾವ ಬ್ರಾಂಡ್ ನ ಆಯಿಲ್ ಯೂಸ್ ಮಾಡುತ್ತಾರೆ. ಅವರ ಗಡ್ಡ ಹಾಗೂ ತಲೆಕೂದಲನ್ನು ಹೇಗೆ ಮೇಂಟೈನ್ ಮಾಡುತ್ತಾರೆ ಎಂಬೆಲ್ಲಾ ವಿಚಾರದಲ್ಲೂ ಹಲವರಿಗೆ ಕುತೂಹಲವಿದ್ದೇ ಇರುತ್ತದೆ.    

ಕೆಜಿಎಫ್  ಸಿನಿಮಾ ನೋಡಿದ ಅದೆಷ್ಟೋ ಜನ ತಾವೂ ಗಡ್ಡ ಬಿಡುವುದನ್ನು ಒಂದು ರೀತಿಯ ಟ್ರೆಂಡ್ ಮಾಡಿಕೊಂಡಿದ್ದಾರೆ. ಎಲ್ಲರೂ ರಾಕಿಭಾಯ್ ನಂತೆಯೇ ಗಡ್ಡ ಬಿಡುತ್ತಿದ್ದಾರೆ. ಉದ್ದನೆಯ ಗಡ್ಡ ಬಿಟ್ಟಿರುವ ನಮ್ಮ ರಾಕಿ ಭಾಯ್ ಈಗಾಗಲೇ ಒಂದು ಗಡ್ಡದ ಎಣ್ಣೆಯ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇದು ಹೊಸ ಸುದ್ದಿಯೇನಲ್ಲ ಹಳೆಯ ವಿಚಾರವೇ. ಆದರೆ, ಇದೀಗ ಇದರ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯಶ್ ಅವರ ಗಡ್ಡ, ಸ್ಟೈಲ್, ಡ್ರೆಸ್ ಎಲ್ಲವೂ ಸೂಪರ್ ಆಗಿದೆ. 

ಯಶ್ ಈಗ ಕನ್ನಡ ಚಿತ್ರರಂಗದ ಸ್ಟೈಲ್ ಐಕಾನ್ ಆಗಿದ್ದಾರೆ. . ಕೆಜಿಎಫ್‌ ಚಿತ್ರದ ಮೂಲಕ ಈಗ ಯಶ್ ಗಡ್ಡದಾರಿಗಳಿಗೆ ರೋಲ್ ಮಾಡೆಲ್ ಕೂಡ ಆಗಿದ್ದಾರೆ. ಗಡ್ಡ ಬಿಟ್ಟರೆ ಯಶ್ ರಂತೆ ಬಿಡಬೇಕು ಎನ್ನುತ್ತಾರೆ. ಯಶ್ ಅವರ ಗಡ್ಡವನ್ನು ನೋಡಿ ಹಲವು ಕಂಪನಿಗಳು  ಮಾಡಲ್ ಆಗುವಂತೆ ಸಂಪರ್ಕಿಸಿದ್ದಾರೆ. ಕೆಲ ದಿನಗಳ ಹಿಂದೆ ಯಶ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಗಡ್ಡ  ಹಾಗೂ ಕೂದಲ ಆರೈಕೆ ಮಾಡುವ ಬ್ರ್ಯಾಂಡ್ ನ ಜಾಹೀರಾತಿನ ವಿಡಿಯೋವನ್ನು ಶೇರ್ ಮಾಡಿದ್ದರು.