KGF 2: ಅಂದು ಹೇಳಿದ ಮಾತನ್ನು ನಿಜ ಮಾಡಿ ತೋರಿಸಿದ ಕನ್ನಡದ ಏಕೈಕ ನಟ..! ಯಾರು ಗೊತ್ತಾ..?

By Infoflick Correspondent

Updated:Sunday, May 8, 2022, 18:25[IST]

KGF 2: ಅಂದು ಹೇಳಿದ ಮಾತನ್ನು ನಿಜ ಮಾಡಿ ತೋರಿಸಿದ ಕನ್ನಡದ ಏಕೈಕ ನಟ..! ಯಾರು ಗೊತ್ತಾ..?

ಕನ್ನಡದ ಗೋಲ್ಡನ್ ಚಿತ್ರ ಕೆಜಿಎಫ್ ಚಾಪ್ಟರ್ 2 ಇದೀಗ ಇಡೀ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೆಜಿಎಫ್ ಭಾಗ-2 ಸಾವಿರ ಕೋಟಿ ಕಲೆಕ್ಷನ್ ಮಾಡಿ ಇನ್ನು ಕೂಡ ಯಶಸ್ವಿ ಓಟ ನಡೆಸಿದೆ. ಕೆಜಿಎಫ್ ಸಿನಿಮಾ ಮೂಲಕ ಯಶ್ ಅವರು ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಭಾರತೀಯ ಚಲನಚಿತ್ರರಂಗದಲ್ಲಿ ದೊಡ್ಡ ಧೂಳಿಪಟ ಎಬ್ಬಿಸಿದ್ದಾರೆ. ಬೇರೆ ದೇಶದಲ್ಲಿಯ ಅಭಿಮಾನಿಗಳನ್ನು ಕೂಡ ಗಿಟ್ಟಿಸಿಕೊಂಡಿರುವ ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ತುಂಬಾನೇ ಯಶಸ್ವಿ ನಟ ಎಂದು ಹೇಳಬಹುದು. ಕನ್ನಡ ಚಿತ್ರರಂಗದಲ್ಲಿ ಆರಂಭದ ದಿನಗಳಿಂದಲೇ ಯಶ್ ಅವರು ತಮ್ಮನ್ನು ತಾವು ಗುರುತಿಸಿಕೊಂಡು ಬೆಳೆದವರು. ಮಾಡಿದ ಪ್ರತಿಯೊಂದು ಸಿನಿಮಾಗಳು ತುಂಬಾನೇ ಹಿಟ್ ಆಗಿದ್ದವು.

ಕೆಜಿಎಫ್ ಚಿತ್ರದಿಂದ ಕನ್ನಡ ಇಂಡಸ್ಟ್ರಿ ಭಾರತ ಮೀರಿ ಬೇರೆ ದೇಶಗಳಲ್ಲಿ ಸೈ ಎನಿಸಿಕೊಂಡಿದೆ. ಕೆಜಿಎಫ್ ಸಿನಿಮಾ ಭಾಗ-1 ಬರುವಾಗ ನಟ ಯಶ್ ಅವರು ಬೇರೆ ಸಿನಿಮಾ ಇಂಡಸ್ಟ್ರಿಗೆ ಸಿನಿಮಾ ಪ್ರಮೋಶನ್ ಗೆ ಹೋಗಿದ್ದೇವು.ಹಾಗೇ ಈ ರೀತಿ ಕೆಜಿಎಫ್ ಎಂಬ ಒಂದು ಪ್ಯಾನ್ ಇಂಡಿಯಾ ಚಿತ್ರ ಮಾಡಿದ್ದೇವೆ ಎಂದು ಹೇಳಿದಾಗ ಬೇರೆ ಸಿನೆಮಾರಂಗದ ಕಲಾವಿದರು ಅಲ್ಲಿಯ ಮಾಧ್ಯಮ ಮಿತ್ರರು ಅಭಿಮಾನಿಗಳು ಕನ್ನಡ ಸಿನಿಮಾ ತುಂಬಾ ಕಡಿಮೆ ಬಜೆಟ್ ಇರುವ ಸಿನಿಮಾ ಗಳಾಗಿರುತ್ತವೆ, ಸಿನಿಮಾ ಚೆನ್ನಾಗಿರುವುದಿಲ್ಲ ಎಂಬ ಅನಿಸಿಕೆ ಮೂಲಕ ಯಾರು ಕೂಡ ನಮ್ಮನ್ನು ಕೇಳುವವರೇ ಇದ್ದಿಲ್ಲ ಎಂದು ಯಶ್ ಹೇಳಿದ್ದಾರೆ.     

ಬಳಿಕ ಇದಕ್ಕೆ ಉತ್ತರವ ಹೇಗೆ ನೀಡಬೇಕು ಎಂದು ಎಲ್ಲರೂ ಕೂಡ ಆಲೋಚಿಸಿ, ಬೇರೆ ಸಿನಿಮಾ ಇಂಡಸ್ಟ್ರಿಯವರ ಆ ಅಭಿಪ್ರಾಯ ಸುಳ್ಳು ಮಾಡಬೇಕು ಎಂದು ಎಲ್ಲರಿಗೂ ತೊಡೆತಟ್ಟಿ ನಿಂತ ಕೆಜಿಎಫ್ ಚಿತ್ರತಂಡ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಇದೀಗ ವಿಶ್ವಮಟ್ಟದಲ್ಲಿ ಗೆದ್ದಿದೆ. ರಾಕಿಂಗ್ ಸ್ಟಾರ್ ಯಶ್ ಹೇಳುವ ಹಾಗೆ, ಅಂದು ಇವರನ್ನು ಯಾರು ಸಹ ಕೇಳುವವರೇ ಇದ್ದಿಲ್ಲವಂತೆ. ಒಂದು ಫ್ಯಾನ್ ಇಂಡಿಯಾ ಸಿನಿಮಾ ಎಂದಾಗ ಸೇಲ್ಸ್ ಮ್ಯಾನ್ ಬರುವ ರೀತಿ ಬೇಡ ಬೇಡ ಎಂದಿದ್ದರಂತೆ. ಇದೀಗ ಅವರೇ ನಮ್ಮನ್ನ ಒಪ್ಪಿ  ಕರೆಯುತ್ತಿದ್ದಾರೆ ಎಂದು ಯಶ್ ಒಂದು ಸಂದರ್ಭದಲ್ಲಿ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಅಂದು ಹೇಳಿದ ಹಾಗೆ ಮಾಡಿ ತೋರಿಸಿದ ಏಕೈಕ ನಟ ಯಶ್ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.