Yash : ಬಸ್ ಡ್ರೈವರ್ ಮಗನಿಂದ ನ್ಯಾಷನಲ್ ಸ್ಟಾರ್ ಆದ ಯಶ್ ಜೀವನ ಕಥೆ ರೋಮಾಂಚಕ ! ಅವರ ಬಾಯಲ್ಲೇ ಕೇಳಿ..!

By Infoflick Correspondent

Updated:Tuesday, May 24, 2022, 07:51[IST]

Yash :  ಬಸ್ ಡ್ರೈವರ್ ಮಗನಿಂದ ನ್ಯಾಷನಲ್ ಸ್ಟಾರ್ ಆದ ಯಶ್ ಜೀವನ ಕಥೆ  ರೋಮಾಂಚಕ ! ಅವರ ಬಾಯಲ್ಲೇ ಕೇಳಿ..!

ಹೌದು ಸಿನಿಮಾರಂಗ ಅಂದ್ರೆ ಹಾಗೇನೇ ಯಾವಾಗ ಯಾರ ಕೈಯಲ್ಲಿ ಏನು ಮಾಡಲಾಗುವುದಿಲ್ಲ ಎಂದೆನಿಸುತ್ತದೆಯೋ ಅವರು ಯಾವ ಸಾಧನೆ ಮಾಡುವುದೇ ಇಲ್ಲ. ಹಾಗೆ ಸತತ ಪ್ರಯತ್ನ ಪಡುತ್ತಲೇ ದೊಡ್ಡ ಸ್ಟಾರ್ ನಟ ಆಗಿರುವ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಈ ಸಿನಿಮಾರಂಗದಲ್ಲಿ ಬೆಳೆಯಬೇಕು ಎನ್ನುವ ಕನಸು ಹೊತ್ತು ಬರುವ ಅದೆಷ್ಟೋ ಹೊಸ ಪ್ರತಿಭೆಗಳಿಗೆ ಸಿನಿಮಾರಂಗದಲ್ಲಿ ಅಂದುಕೊಂಡಷ್ಟು ಸುಲಭವಾಗಿ ದಾರಿ ಸಿಗುವುದಿಲ್ಲ ಎನ್ನಬಹುದು. ದಿನೇ ದಿನೇ ಸಾಕಷ್ಟು ಏಳುಬೀಳುಗಳನ್ನು ನೋಡಿ, ಸಮಯ ಅವರಿಗೆ ಸಾಥ್ ಕೊಡದೆ ಇದ್ದಾಗ ಇನ್ನೊಂದು ಕಡೆ ಜೀವನದಲ್ಲಿ ಹೆಚ್ಚು ಜವಾಬ್ದಾರಿಗಳು ಇದ್ದಾಗ ಏನು ಮಾಡುತ್ತಿದ್ದೇವೆ ಎನ್ನುವ ಅರಿವೇ ಇಲ್ಲದೆನೆ, ಕಷ್ಟದ ದಾರಿ ನೋಡಬೇಕಾಗುತ್ತದೆ.   

ನಾವು ಮಾಡುವ ಕೆಲಸಗಳಲ್ಲಿ ಸ್ವಲ್ಪ ಏರುಪೇರಾದರೂ ಕೂಡ ಸೋಲು ನಮ್ಮನ್ನು ಹಾಗೆ ಕೆಳಗಡೆ ತುಳಿಯುತ್ತಲೇ ಹೋಗುತ್ತದೆ. ಜೀವನದಲ್ಲಿ ಸೋಲು ಬೇಡ ನಮಗೆ ಎಂದು ಹೇಳವವರಿಗೆ ಎಂದಿಗೂ ಯಶಸ್ಸು ಕೂಡ ಸಿಗುವುದೇ ಇಲ್ಲ ಎನ್ನುವ ಮಾತು ನಿಜವಾಗಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಈಗ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಇಡೀ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟ. ರಾಕಿಂಗ್ ಸ್ಟಾರ್ ಯಶ್ ಅವರು ಮಿಡಲ್ ಕ್ಲಾಸ್ ಫ್ಯಾಮಿಲಿಯ ಹುಡುಗ. ಚಿಕ್ಕಂದಿನಿಂದಲೇ ಸಿನಿಮಾ ಆಕ್ಟರ್ ಆಗಬೇಕು ಎಂದು ತುಂಬಾ ಕಷ್ಟಪಟ್ಟರು. ಅವರ ತಂದೆ ಬಿಎಂಟಿಸಿ ಬಸ್ ಡ್ರೈವರ್ ತಾಯಿ ಮನೆಯಲ್ಲಿ ಕೆಲಸ ಮಾಡುವವರು. ಹೀಗೆ ಸಿನಿಮಾಗಳ ಕನಸನ್ನು ಹೊತ್ತು ಬೆಂಗಳೂರು ಕಡೆ ಮುಖ ಮಾಡಿದ ನಟ ಯಶ್ ಅವರು ಆರಂಭದ ದಿನಗಳಲ್ಲಿ ಯಾವ ರೀತಿ ದಾರಿ ಹುಡುಕಿಕೊಂಡ್ರು ಗೊತ್ತಾ..?

ಹಾಗೆ ಬೆಂಗಳೂರಿನಲ್ಲಿ ಒಂದೊಂದನ್ನೇ ಕಲಿತು ನಂತರ ಯಾವ ರೀತಿ ಸೀರಿಯಲ್ ಅವಕಾಶ ಗಿಟ್ಟಿಸಿಕೊಂಡರು ಗೊತ್ತಾ.? ಸಿನಿಮಾ ಮಾಡುತ್ತಾ ಒಂದರಮೇಲೊಂದರಂತೆ ಹಿಟ್ ಸಿನಿಮಾ ನೀಡುತ್ತಾ ಇದೀಗ ಕೆಜಿಎಫ್ ಹಂತಕ್ಕೆ ಬಂದು ನಿಂತಿರುವ ನಟ ಯಶ್ ಅವರು ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಈ ಜೀವನದಲ್ಲಿ ಅವರು ಏನೆಲ್ಲಾ ಮಾಡಿದರೂ, ಯಾವ ರೀತಿಯ ಕುಟುಂಬದಿಂದ ಬಂದರೂ, ಇದೀಗ ಹೇಗೆ ಯಶಸ್ವಿ ಆದರೂ ಎಂಬುದಾಗಿ ಅವರೇ ಒಂದೊಂದೇ ಮಾಹಿತಿಯನ್ನು ಹೇಳಿಕೊಂಡಿದ್ದಾರೆ. ಅಸಲಿಗೆ ನಟ ಯಶ್ ಅವರು ಹೇಗೆ ಮಾತನಾಡಿದ್ದಾರೆ ಎಂದು ಈ ವಿಡಿಯೋದಲ್ಲಿ ನೀವೇ ನೋಡಿ. ಅವರ ಬಾಯಿಯಲ್ಲಿ ಅವರ ಸಕ್ಸಸ್ ಯಶೋಗಾಥೆಯನ್ನು ಕೇಳಿ. ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ ಧನ್ಯವಾದಗಳು...

( video credit : SA E SPEECH )