Yash : ಬೆಂಗಳೂರಿನಲ್ಲಿ ಲಗೇಜ್ ಇಡುವುದಕ್ಕೆ ಜಾಗ ಇಲ್ಲದ ಯಶ್ ಇಂದು ಕೋಟಿ ಕೋಟಿ ಬಂಗ್ಲೆ ತೆಗದುಕೊಂಡದ್ದು ಹೇಗೆ ನೋಡಿ..!
Updated:Friday, June 24, 2022, 11:23[IST]

ಕೆಜಿಎಫ್ ಸಿನಿಮಾ ನಮ್ಮ ಕನ್ನಡ ಚಿತ್ರರಂಗದ ಗೋಲ್ಡನ್ ಚಿತ್ರವಾಗಿದೆ. ಹೌದು ಈ ಮುಂಚೆ ತೊಂಬತ್ತರ ದಶಕದ ವೇಳೆ ಕೂಡ ಕನ್ನಡ ಚಿತ್ರರಂಗ ದೊಡ್ಡದಾಗಿ ಸದ್ದು ಮಾಡಿತ್ತು. ಹಾಗೆ ಡಾಕ್ಟರ್ ವಿಷ್ಣುವರ್ಧನ್, ಡಾಕ್ಟರ್ ರಾಜಕುಮಾರ್ ಅವರ ಕಾಲದಿಂದಲೂ ಹೆಚ್ಚು ಹೆಸರು ಮಾಡಿದೆ. ನಟ ಶಂಕರ್ ನಾಗ್, ಅಂಬರೀಶ್, ಸುನಿಲ್, ಇನ್ನು ದೊಡ್ಡ ದೊಡ್ಡ ಸ್ಟಾರ್ ನಟರು ಅಭಿನಯ ಮಾಡುತ್ತಾ ಇರುವಾಗಲೇ ನಮ್ಮ ಕನ್ನಡ ಚಿತ್ರರಂಗ ದೊಡ್ಡದಾಗಿ ಬೆಳೆದಿತ್ತು. ಆದ್ರೆ ಅದು ಬೇರೆ ರಾಜ್ಯದ ಜನತೆಗೆ, ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಹಾಗೆ ಕನ್ನಡ ಚಿತ್ರಗಳು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿ ಹೆಸರುಮಾಡಿವೆ. ಇತ್ತೀಚಿನ ಕೆಜಿಎಫ್ ಸಿನಿಮಾ ನಮ್ಮ ಕನ್ನಡ ಚಿತ್ರವನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡಿದ್ದು ಮತ್ತೊಂದು ಮೈಲುಗಲ್ಲು ಎನ್ನಬಹುದು.
ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಸಿನಿಮಾದ ನಾಯಕ ನಟ ಯಶ್ ಅವರು ಕೂಡ ಪ್ರಪಂಚದ ಅಭಿಮಾನಿಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಟ ಯಶ್ ಅವರು ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹಾಗೆ ಕೆಜಿಎಫ್ ಮೂಲಕ ಸ್ಟಾರ್ ನಿರ್ದೇಶಕ ಆಗಿರುವ ಪ್ರಶಾಂತ್ ನೀಲ್ ಅವರು ಕೂಡ ದೊಡ್ಡದಾಗಿಯೇ ಭಾರತ ದೇಶಕ್ಕೆ ಪರಿಚಯ ಆಗಿದ್ದಾರೆ ಎನ್ನಬಹುದು. ಹೌದು ಯಶ್ ಅವರು ಅಂದು ಆರಂಭದದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬೆಳೆಯಲು ತುಂಬಾನೇ ಹರಸಾಹಸ ಪಟ್ಟಿದ್ದು ಎಲ್ಲರಿಗೂ ಗೊತ್ತು.
ಒಂದು ದಿವಸ ಬೆಂಗಳೂರಿಗೆ ಬಂದಾಗ ಅವರ ಲಗೇಜು ಇಡಲು ಕೂಡ ಅವರಿಗೆ ಬೆಂಗಳೂರಿನಲ್ಲಿ ಜಾಗ ಇರಲಿಲ್ಲ. ಇಂದೂ ಕೋಟಿ ಹಣ ಕೊಟ್ಟು ಬಂಗಲೆಗಳನ್ನು ಕೊಂಡುಕೊಂಡಿದ್ದಾರೆ.
ಸ್ಟಾರ್ ನಟಿ ರಾಧಿಕಾ ಪಂಡಿತ್ ಅವರನ್ನು ಮದುವೆಯಾಗಿ ಇದೀಗ ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇವೆ. ಅಸಲಿಗೆ ಯಶ್ ಅವರು ಅಂದು ಬೆಂಗಳೂರಿನಲ್ಲಿ ಯಾವ ರೀತಿ ಕಷ್ಟ ಎದುರಿಸಿ, ಕಷ್ಟಗಳನ್ನು ಮೆಟ್ಟಿ ನಿಂತು ಅಂದು ಕೊಂಡ ಕನಸನ್ನು ಹೇಗೆ ನನಸು ಮಾಡಿಕೊಂಡರು ಗೊತ್ತಾ..? ಹಾಗೇ ಇಂದು ಕೋಟಿ ಕೋಟಿ ಕೊಟ್ಟು ಬಂಗಲೆ ತೆಗೆದುಕೊಂಡಿರುವ ಯಶ್ ಅವರು ಏನೆಲ್ಲಾ ಕಷ್ಟಪಟ್ಟು ಹೇಗೆ ಇದನ್ನೆಲ್ಲಾ ಸಾಧನೆ ಮಾಡಿದರು ಎಂಬುದಾಗಿ ಈ ವಿಡಿಯೋ ನೋಡಿ ತಿಳಿದುಕೊಳ್ಳಿ. ಈ ವಿಡಿಯೋ ಇಷ್ಟವಾದ ಮೇಲೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು..