Yash : ಯಶ್ ಫಾರ್ಮ್ ಹೌಸ್ ಚಿತ್ರಣ ನೋಡಿದ್ದೀರಾ..? ತಂದೆ ತಾಯಿಗೆ ಕೊಟ್ಟ ಲಕ್ಸುರಿ ಕಾರ್ ನೋಡಿ

By Infoflick Correspondent

Updated:Wednesday, May 25, 2022, 10:18[IST]

Yash :  ಯಶ್ ಫಾರ್ಮ್ ಹೌಸ್ ಚಿತ್ರಣ ನೋಡಿದ್ದೀರಾ..? ತಂದೆ ತಾಯಿಗೆ ಕೊಟ್ಟ ಲಕ್ಸುರಿ ಕಾರ್ ನೋಡಿ


ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಕೆಜಿಎಫ್ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ-2 ಕಲೆಕ್ಷನ್ ವಿಚಾರದಲ್ಲಿ ದಾಖಲೆ ಮಾಡಿರುವುದು ಎಲ್ಲರಿಗೂ ಗೊತ್ತು. ಇದು ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಷಯ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕನ್ನಡದ ಶಕ್ತಿಯನ್ನು ಇಡಿ ದೇಶಕ್ಕೆ ಮತ್ತು, ಹೊರದೇಶಕ್ಕೂ ಕೂಡ ಈ ಕೆಜಿಎಫ್ ಸಿನಿಮಾ ಮೂಲಕ ತೋರಿಸಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಹೆಚ್ಚು ಕುಟುಂಬದ ಜೊತೆ ಈಗ ಕಾಣಿಸಿಕೊಳ್ಳುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರ ಕುರಿತಾಗಿ ಇನ್ನೊಂದು ವಿಚಾರ ಹೊರಗಡೆ ಬೀಳುತ್ತಿದೆ. 

ಯಶ್ ಅವರ ಮುಂದಿನ ಸಿನಿಮಾ ಯಾವುದು.? ಯಾರು ನಿರ್ದೇಶಕರು ಎನ್ನುವ ವಿಚಾರ ಇಷ್ಟರಲ್ಲೆ ತಿಳಿಯುತ್ತಿದ್ದು, ಯಶ್ ಅವರ 19ನೇ ಚಿತ್ರ ಸೆಟ್ಟೇರಲಿದೆಯಂತೆ. ಮುಹೂರ್ತ ಕೂಡ ಫಿಕ್ಸ್ ಆಗುತ್ತಿದೆ ಎಂದು ಕೇಳಿಬರುತ್ತಿದೆ. ಕೆಜಿಎಫ್ ಸಿನಿಮಾ 50 ದಿನ ಪೂರೈಸಿದ ದಿನವೇ ಈ ಮಾಹಿತಿ ಹೊರ ಬೀಳುತ್ತಿದೆ ಎಂದು ಕೇಳಿ ಬಂದಿದೆ. ಹೌದು ಯಶ್ ಅವರು ಅವರ ತಂದೆ ತಾಯಿಗೆ ಈಗಾಗಲೇ ಸಾಕಷ್ಟು ಮಾಡಿದ್ದಾರೆ. ಒಂದು ಫಾರ್ಮ್ ಹೌಸ್ ಕೊಂಡುಕೊಂಡ ಯಶ್, ತೋಟಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಕೂಡ ನೀಡಿದ್ದಾರೆ. ತಂದೆ ತಾಯಿಗೆ ಹಾಗೂ ತಂಗಿಗೂ ಸಹ ದುಬಾರಿ ಗಿಫ್ಟ್ ನೀಡಿದ್ದಾರೆ. ಹಾಗೆ ತಂದೆ-ತಾಯಿಗೆ ಓಡಾಡಲು ಟಾಟಾ ವೆಲ್ಫೇರ್ ದುಬಾರಿ ಕಾರನ್ನು ಕೂಡ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.   

ಅಸಲಿಗೆ ಅದು ಆ ಕಾರ್ ಹೇಗಿದೆ, ಗೃಹಪ್ರವೇಶದ ದಿನ ಅವರ ತಂದೆಗೆ ಗಿಫ್ಟ್ ಮಾಡಿರುವ ತಾರ್ ಹೇಗಿದೆ, ಯಶ್ ಅವರ ಫಾರ್ಮ್ ಹೌಸ್ ನಲ್ಲಿ ಏನೇನೆಲ್ಲ ಇದೆ ಎಂಬುದಾಗಿ ಒಂದು ಬಾರಿ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿ ನೋಡೋಣ ಬನ್ನಿ. ಇಂದು ದೊಡ್ಡ ಮಟ್ಟಕ್ಕೆ ಬೆಳೆದಿರುವ ನಟ ಯಶ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಹಾಗೆ ಕಷ್ಟಪಟ್ಟರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಯಶ್ ಸ್ಪೂರ್ತಿದಾಯಕ ಎಂದು ಹೇಳಬಹುದು. ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ ಧನ್ಯವಾದಗಳು.. ( video credit : B Ganapati )