ರಿಯಲ್ ಆಗಿ ಪತ್ನಿ ರಾಧಿಕಾಗೆ ಕಿಸ್ ಕೊಟ್ಟ ಯಶ್..! ಫೋಟೋಸ್ ನೋಡಿ ಫ್ಯಾನ್ಸ್ ಫಿದಾ

By Infoflick Correspondent

Updated:Tuesday, April 26, 2022, 20:22[IST]

ರಿಯಲ್ ಆಗಿ ಪತ್ನಿ ರಾಧಿಕಾಗೆ ಕಿಸ್ ಕೊಟ್ಟ ಯಶ್..! ಫೋಟೋಸ್ ನೋಡಿ ಫ್ಯಾನ್ಸ್ ಫಿದಾ

ಕನ್ನಡ ಚಿತ್ರರಂಗದ ಚಂದನವನದ ಬೆಡಗಿ ನಟಿ ರಾಧಿಕಾ ಪಂಡಿತ್ ಅವರು ಇದೀಗ ತುಂಬಾ ಸಂತಸದಲ್ಲಿದ್ದಾರೆ ಎಂದು ಹೇಳಬಹುದು. ಹೌದು ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದ ಮೇಲೆ ಕನ್ನಡ ಚಿತ್ರರಂಗದಿಂದ ಸ್ವಲ್ಪ ಅಂತರ ಕಾಪಾಡಿಕೊಂಡಿದ್ದ ರಾಧಿಕಾ ಕುಟುಂಬ ಮಕ್ಕಳಿಗಾಗಿ ಸಮಯ ಮೀಸಲಿಟ್ಟಿದ್ದರು. ನಟಿ ರಾಧಿಕಾ ಪಂಡಿತ್ ಯಶ್ ಅವರ ಯಶಸ್ಸಿನ ಹಾದಿಯಲ್ಲಿ ತುಂಬಾ ಪಾತ್ರವಹಿಸಿದ್ದಾರೆ. ಹೌದು ನಟಿ ರಾಧಿಕಾ ಪಂಡಿತ್ ಅವರ ಜೊತೆಗೆ ಕೆಜಿಎಫ್ ನ ನಟ ಯಶ್ ಅವರು ಈಗ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಕುಟುಂಬದ ಜೊತೆ ಗೋವಾದಲ್ಲಿ ಬೀಡುಬಿಟ್ಟಿರುವ ಯಶ್ ಅವರು ಹೆಂಡತಿಗೆ ಪ್ರೀತಿಯಿಂದ ಆಫ್ ಸ್ಕ್ರೀನ್ ನಲ್ಲೆ ಕೆನ್ನೆಗೆ ಮುತ್ತಿಟ್ಟಿರುವ ಈ  ಫೋಟೋ ಈಗ ವೈರಲ್ ಆಗುತ್ತಿವೆ.

ಹೌದು ನಟ ಯಶ್ ಮತ್ತು ರಾಧಿಕಾ ಪಂಡಿತ್ ಒಟ್ಟಿಗೆ ಸಿನಿಮಾ ಜರ್ನಿಯನ್ನು ಆರಂಭಿಸಿದ್ದು ನಂತರ ದಿನಗಳಲ್ಲಿ ಈ ಜೋಡಿ ಬಂಪರ್ ಹಿಟ್ ಸಿನಿಮಾಗಳನ್ನು ನೀಡಿತ್ತು. ಮೊಗ್ಗಿನ ಮನಸ್ಸು, ರಾಮಾಚಾರಿ ಸಿನಿಮಾದಲ್ಲೂ ಕೂಡ ಈ ಜೋಡಿ ಸಕ್ಸಸ್ ಕಂಡಿತ್ತು. ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಆಗುವ ಮುನ್ನ ಪ್ರಮೋಶನ್ ಗಾಗಿ ಹೆಚ್ಚು ಓಡಾಟ ನಡೆಸಿದ್ದ ಯಶ್ ಇದೀಗ ಕುಟುಂಬಕ್ಕೆ ಸಮಯ ನೀಡಿದ್ದಾರೆ. ಸಿನಿಮಾ ವಿಶ್ವದಾದ್ಯಂತ ಭರ್ಜರಿಯಾಗಿ ಓಡುತ್ತಿದೆ. ಸಾವಿರ ಕೋಟಿ ಕಲೆಕ್ಷನ್ ಗೂ ಸಹ ಹತ್ತಿರವಾಗುತ್ತಿದೆ. ಇಡೀ ಚಿತ್ರತಂಡ ಈಗ ಸಂಭ್ರಮದಲ್ಲಿ ತೇಲಾಡುತ್ತಿದೆ ಎಂದು ಹೇಳಬಹುದು. ಇದರ ನಡುವೆ ರಾಧಿಕಾ ಪಂಡಿತ್ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಟ್ಟು ಮೂರು ಫೋಟೋಗಳ ಶೇರ್ ಮಾಡಿಕೊಂಡಿದ್ದಾರೆ. ಕೊನೆಯ ಫೋಟೋ ಒಂದರಲಿ ಯಶ್ ರಾಧಿಕಾ ಪಂಡಿತ್ ಅವರ ಕೆನ್ನೆಗೆ ಮುತ್ತು ನೀಡಿದ್ದಾರೆ.

ಹಾಗೆ ಕ್ಯಾಪ್ಷನ್ ನಲ್ಲಿ ರಾಧಿಕಾ ಪಂಡಿತ್ ಪಿಕ್ ಕ್ರೆಡಿಟ್ಸ್ ಭುವನ್ ಗೌಡ ಎಂದು ಬರೆದುಕೊಂಡಿದ್ದು, ಸನ್ ಗ್ಲಾಸ್ನಲ್ಲಿ ನೋಡುತ್ತಿದ್ದೇನೆ ಎಂದು ಖುಷಿಯಿಂದ ಫೋಟೋಗಳನ್ನು ಶೇರ್ ಮಾಡಿ ಬರೆದುಕೊಂಡಿದ್ದಾರೆ. ನೀವು ಕೂಡ ಈ ಫೋಟೋಸ್ ನೋಡಿ. ಹಾಗೆ ಕೆಜಿಎಫ್ ಸಿನಿಮಾದ ಬಳಿಕ ಯಶ್ ಎಂತಹ ಸಿನಿಮಾ ಮಾಡುತ್ತಾರೆ ಎಂದು ಕಾಮೆಂಟ್ ಮಾಡಿ. ಜೊತೆಗೆ ಮತ್ತೆ ಸಿನಿಮಾರಂಗಕ್ಕೆ ನಟಿ ರಾಧಿಕಾ ಪಂಡಿತ್ ಅವರು ಎಂಟ್ರಿ ಕೊಡುತ್ತಾರ ಕಾಮೆಂಟ್ ಮಾಡಿ ಧನ್ಯವಾದಗಳು...