ಯಶ್ ಅವರ ಸರಳತೆ ಹೊಗಳಿದ ಪಾನಿ ಪುರಿ ಕಿಟ್ಟಿ ಏನು ಹೇಳಿದ್ದಾರೆ ನೋಡಿ

By Infoflick Correspondent

Updated:Sunday, April 17, 2022, 09:47[IST]

ಯಶ್ ಅವರ ಸರಳತೆ ಹೊಗಳಿದ ಪಾನಿ ಪುರಿ ಕಿಟ್ಟಿ ಏನು ಹೇಳಿದ್ದಾರೆ ನೋಡಿ

ರಾಕಿಂಗ್ ಸ್ಟಾರ್ ಯಶ್ ಅವರು ಎಲ್ಲಿ ಜಿಮ್ ಮಾಡುತ್ತಾರೆ ಎಂಬುದು ಸಾಕಷ್ಟು ಜನರಿಗೆ ಗೊತ್ತಿದೆ. ಯಾರ ಹತ್ತಿರ ಯಶ್ ಟ್ರೈನಿಂಗ್ ಪಡೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೌದು ಯಶ್ ಅವರು ಜಿಮ್ ಮಾಡುತ್ತಿರುವುದು ಪಾನಿಪುರಿ ಕಿಟ್ಟಿ ಅವರ ಜಿಮ್ ಸೆಂಟರ್ನಲ್ಲಿ, ಹಾಗೆ ಯಶ್ ಅವರಿಗೆ ಒಳ್ಳೆಯ ಗೆಳೆಯ ಪಾನಿಪುರಿ ಕಿಟ್ಟಿ ಅವರು ಎಂದು ಹೇಳಬಹುದು. ಯಶ್ ಹಾಗೂ ಪಾನಿಪುರಿ ಕಿಟ್ಟಿ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ಸಾಕಷ್ಟು ಬಾರಿ ಜೊತೆಗೆನೇ ಇಬ್ಬರು ಕಾಣಿಸಿದ್ದಾರೆ. ಯಶ್ ಅಭಿಮಾನಿಗಳಿಗೂ ಕೂಡ ಎಲ್ಲೋ ಒಂದು ಕಡೆ ನಾನು ಕೂಡ ನಟ ಯಶ್ ಹೋಗುವ ಜಿಮ್ಮಿನಲ್ಲಿ ಸೇರಿಕೊಳ್ಳಬೇಕು, ದೇಹವನ್ನ ಸದೃಢಗೊಳಿಸಲು ಇವರ ಜಿಮ್ ಅನ್ನೇ ಆಯ್ಕೆಮಾಡಿಕೊಳ್ಳುತ್ತಾರೆ.

ಪಾನಿಪುರಿ ಕಿಟ್ಟಿ ಅವರು ಮಾಧ್ಯಮದಲ್ಲಿ ಕುಳಿತುಕೊಂಡು ಈಗ ಒಂದು ಸಂದರ್ಶನ ನೀಡಿದ್ದಾರೆ. ನಟ ಯಶ್ ಅವರ ಜೊತೆಗಿನ ಗೆಳೆತನ ಒಡನಾಟ ಹೇಗಿದೆ ಎಂದು ಹೇಳಿದ್ದಾರೆ. ಹಾಗೆ ಯಶ್ ಎಷ್ಟು ಸಿಂಪಲ್ ಎಂಬುದಾಗಿಯೂ ಕೂಡ ಕಿಟ್ಟಿ ಹೇಳಿದ್ದಾರೆ. ಹೌದು ಯಶ್ ಅವರು ತುಂಬಾನೇ ಡೌನ್ ಟು ಅರ್ಥ್ ಎನ್ನಬಹುದು, ಬಾಲಿವುಡ್ ನವರು ಬಾಲಿವುಡ್ ನಲ್ಲಿ ನಿಮ್ಮ ಸಿನಿಮಾಗಾಗಿ ತುಂಬಾ ಕಾಯುತ್ತಿದ್ದೇವೆ, ನಾವು ನಿಮ್ಮ ದೊಡ್ಡ ಫ್ಯಾನ್ ಎಂದು ಹೇಳಿದಾಗ, ಅಂತಹವರ ಜೊತೆ ನಾವು ಕೂಡ ಕೆಲಸ ಮಾಡುತ್ತಿದ್ದೇವೆ ಅಲ್ವಾ ಎಂದು ನೆನೆದುಕೊಂಡರೆ, ಜೀವನ ಸಾರ್ಥಕ ಆಯ್ತು ಎಂದೆನಿಸುತ್ತದೆ ಎಂದು ಇದೀಗ ಪಾನಿಪುರಿ ಕಿಟ್ಟಿ ಅವರು ಯಶ್ ಅವರ ಜೊತೆಗಿನ ಒಡನಾಟ ಬಿಚ್ಚಿಟ್ಟಿದ್ದಾರೆ.  

ಹಾಗೆ ಅವರಿಗೆ ಯಾವ ರೀತಿ ಟ್ರೈನ್ ಮಾಡುತ್ತಾರೆ, ಇವರ ಜಿಮ್ ನಲ್ಲಿ ಯಾವ ರೀತಿಯ ಸೌಲಭ್ಯಗಳು, ಯಾವ ರೀತಿ ವರ್ಕೌಟ್ ನಡೆಸಲಾಗುತ್ತದೆ ಎಂಬುದಾಗಿ ತೋರಿಸಿದ್ದಾರೆ. ಪಾನಿಪುರಿ ಕಿಟ್ಟಿ ಅವರ ಜಿಮ್ ದುಬಾರಿಯ ಎನ್ನುವ ಪ್ರಶ್ನೆಗೆ ಕಿಟ್ಟಿ ಅವರು ಇಲ್ಲ ಎಲ್ಲರಿಗೂ ಒಂದೇ ರೀತಿ. ನಾನು ಒಬ್ಬರಿಗೆ ಮಾತ್ರ ಪರ್ಸನಲ್ ಆಗಿರುವುದಿಲ್ಲ. ಹುಡುಗರು ಇರುತ್ತಾರೆ ಟ್ರೈನ್ ಮಾಡುತ್ತಾರೆ. ಜೊತೆಗೆ ಎಲ್ಲಾ ಜಿಮ್ ಗಿಂತಲೂ ನಮ್ಮ ಜಿಮ್ ಫೀಸ್ ಕೂಡ ತುಂಬಾನೇ ಕಡಿಮೆ ಇದೆ. ನಾವು ಎಂದಿಗೂ ದುಬಾರಿ ಇರುವುದಿಲ್ಲ. ಎಲ್ಲರ ಜೊತೆ ಇರುತ್ತೇವೆ ಎಂದಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.. ( video credit : news first live )