Yash : ನಟ ಯಶ್ ಫ್ಯಾಮಿಲಿಯಲ್ಲಿ ಮತ್ತೆ ಸಂತಸ..! ಹೊಸ ಅತಿಥಿ ಆಗಮನವಂತೆ ನೋಡಿ

By Infoflick Correspondent

Updated:Sunday, May 29, 2022, 08:14[IST]

Yash : ನಟ ಯಶ್ ಫ್ಯಾಮಿಲಿಯಲ್ಲಿ ಮತ್ತೆ ಸಂತಸ..! ಹೊಸ ಅತಿಥಿ ಆಗಮನವಂತೆ ನೋಡಿ

ಕನ್ನಡದ ರಾಕಿಂಗ್ ಜೋಡಿ ಎಂದೇ ಪ್ರಸಿದ್ಧಿ ಪಡೆದಿರುವ ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಅವರ ಮಕ್ಕಳೊಂದಿಗೆನೇ ಸಮಯ ಕಳೆಯುತ್ತಿದ್ದಾರೆ. ಕೆಜಿಎಫ್ ಸಿನಿಮಾ ಬಂದ ಬಳಿಕ ತುಂಬಾ ಬಿಜಿಯಾಗಿರುವ ಯಶ್ ಅವರು ಸಿನಿಮಾ ಪ್ರಚಾರದ ವೇಳೆ ಮಾತ್ರ ಹೆಚ್ಚು ಕಾಣಿಸಿಕೊಂಡಿದ್ದರು. ಅದಾದನಂತರ ಪತ್ನಿ ಮತ್ತು ಮಕ್ಕಳ ಜೊತೆ ಗೋವಾಗೆ ತೆರಳಿದ ಯಶ್ ಅವರು ಸಿನಿಮಾ ಸಕ್ಸಸ್ ಪಾರ್ಟಿಯನ್ನು ಕೂಡ ಅಲ್ಲಿಯೇ ಕೆಜಿಎಫ್ ಸಿನಿಮಾ ತಂಡದ ಜೊತೆ ಗೋವಾದಲ್ಲಿ ಆಚರಿಸಿದರು. ಹಾಗೆ ಇದು ಇನ್ನು ಮೊದಲ ಹೆಜ್ಜೆ ಎನ್ನುವ ಶೀರ್ಷಿಕೆ ನೀಡಿ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿದರು. ಹೌದು ಹೀಗೆ ಒಂದಲ್ಲ ಒಂದು ವಿಚಾರಕ್ಕೆ ನಟ ಯಶ್  ತುಂಬಾ ಸುದ್ದಿಯಾಗುತ್ತಿದ್ದಾರೆ. 

ಕೆಜಿಎಫ್ ಭಾಗ-2 ಯಶಸ್ವಿ ಆದಾಗಿನಿಂದ ಯಶ್ ಅವರ ಬ್ರಾಂಡೇ ಬದಲಾಗಿದೆ ಎನ್ನಬಹುದು. ನಟ ಯಶ್ ಇದೀಗ ವಿಶ್ವಮಟ್ಟಕ್ಕೆ ಪರಿಚಿತವಾಗಿರುವ ನಟ. ಹೌದು ನಟ ಯಶ್ ದಂಪತಿಗೆ ಈಗಾಗಲೇ ಎರಡು ಮುದ್ದು ಮಕ್ಕಳು ಆಗಿದ್ದು,  ಸುಖ ಸಂಸಾರದ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಇನ್ನೊಂದು ಸಿಹಿ ಸುದ್ದಿ ಈಗ ತಿಳಿದುಬಂದಿದೆ. ನಟ ಯಶ್ ದಂಪತಿ ಅವರ ಮತ್ತೊಂದು ಮಗುವಿಗೆ ಮತ್ತೆ ತಂದೆ-ತಾಯಿ ಆಗುತ್ತಿದ್ದಾರೆ ಎಂದು ಅಭಿಮಾನಿಗಳು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಜೊತೆಗೆ ಇವರಿಗೆ ಮೂರನೇ ಮಗು ಏನಾದರೂ ಆಗಮನ ಆಗುತ್ತಿದೆಯೇ ಎನ್ನುವ ಸೂಚನೆ ಹೊರಬಂದಿತ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಹೌದು ಯಶ್ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ ಅದು ನಿಜ. 

ಆದರೆ ಯಶ್ ಮತ್ತು ರಾಧಿಕಾ ಮಗು ಅಲ್ಲ. ಬದಲಿಗೆ ಯಶ್ ಅವರ ತಂಗಿ ನಂದಿನಿಯವರ ಮಗು ಎನ್ನಲಾಗಿದೆ. ಜನಿಸಿದ ಮಗುವಿನ ಮುದ್ದಾದ ಕಾಲುಗಳ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ನಂದಿನಿಯವರು ಮಗುವಿನ ಆಗಮನ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಇತ್ತ ಯಶ್ ಅವರು ಮಾವ ಆಗಿದ್ದು ಸಂತಸದಲ್ಲಿದ್ದಾರೆ ಎನ್ನಲಾಗುತ್ತಿದೆ. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...