Yash : ಯಶ್ ಹುಲಿ ಘರ್ಜನೆ ಕೇಳಿ ಹೆದರಿ ಓಡಿ ಹೋದ ರಾಕಿಭಾಯ್ ಮಗ !
Updated:Thursday, May 12, 2022, 08:35[IST]

ನಿರಂತರ ಶ್ರಮದಿಂದ ಕೆಜಿಎಫ್2 ಮುಗಿಸಿದ ಯಶ್ ಸದ್ಯ ಹಾಲಿಡೇ ಮುಡ್ ನಲ್ಲಿದ್ದಾರೆ. ಕೆಜಿಎಫ್ ಶೂಟಿಂಗ್ ಪ್ರಚಾರ ಎಂದು ನಿರಂತರ ಕೆಲಸದಲ್ಲಿದ್ದ ರಾಕಿ ಭಾಯ್ ಈಗ ಬಿಡುವಾಗಿ ಮಕ್ಕಳೊಂದಿಗೆ ಸಂತಸದಿಂದ ಕಾಲಕಳೆಯುತ್ತಿದ್ದಾರೆ. ಯಶ್ಗೆ ಆಯ್ರಾ ಹಾಗೂ ಯಥರ್ವ್ ಎಂದರೆ ಅಚ್ಚುಮೆಚ್ಚು. ಮಕ್ಕಳು ಮಾಡುವ ತುಂಟಾಟದ ವಿಡಿಯೋಗಳನ್ನು ಯಶ್ ಪತ್ನಿ ರಾಧಿಕಾ ಪಂಡಿತ್ ಹಂಚಿಕೊಳ್ಳುತ್ತಿರುತ್ತಾರೆ. ಮಕ್ಕಳೊಡನೆ ಯಶ್ ಮಾಡುಚ ಮೊಜು ಮಸ್ತಿ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ಐರಾ ಮತ್ತು ಯಥರ್ವ ಜೊತೆ ಸಂತಸದಿಂದ ಸಮಯ ಕಳೆಯುವ ಯಶ್ ಹೊಸ ಹಾಗು ವಿಶೇಷ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ಫೇಮಸ್ ಆಗಿದೆ. ಯಶ್ ಮಾಡಿದ ಈ ಕೆಲಸಕ್ಕೆ ಹೆದರಿ ಮಗ ಓಡಿ ಹೋದ ವಿಡಿಯೋ ನೋಡುಗರಿಗೆ ಮಜವಾಗಿದೆ. ಈಗ ಯಥರ್ವ್ನನ್ನು ಯಶ್ ಹಾಗೂ ಆಯ್ರಾ ಇಬ್ಬರೂ ಭಯ ಬೀಳಿಸಿದ್ದಾರೆ. ಇದು ಮುದ್ದು ಎನಿಸುತ್ತದೆ. ಇದೀಗ ಮಕ್ಕಳ ಜೊತೆ ಟೈಗರ್ ಆಕ್ಟಿಂಗ್ ಮಾಡಿದ್ದಾರೆ. ಅಪ್ಪನ ಅಭಿನಯ ಕಂಡು ಮಗ ಯಥರ್ವ ಓಡಿ ಹೋಗಿದ್ದಾನೆ. ಮಗ ಓಡಿದನ್ನು ನೋಡಿ ಯಶ್ ಮತ್ತು ಮಗಳು ಐರಾ ಇಬ್ಬರೂ ಜೋರಾಗಿ ನಕ್ಕಿದ್ದಾರೆ.
ಯಶ್ ತಮ್ಮ ಮನೆಯ ರೂಂ ನಲ್ಲಿ ಮಕ್ಕಳಾದ ಐರಾ ಮತ್ತು ಯಥರ್ವ ಜೊತೆ ಆಟವಾಡುತ್ತಿದ್ದಾಗ, ಮಗ ಯಥರ್ವ ತಾನು ದೊಡ್ಡ ತೋಳ, ಡೈನೋಸರ್ ಎಂದು ಘರ್ಜಿಸುತ್ತಾನೆ. ಇದಕ್ಕೆ ಹೆದರುವಂತೆ ನಟಿಸುವ ಯಶ್. ನಂತರ ಪಪ್ಪಾ ದೊಡ್ಡ ಟೈಗರ್ ಎಂದು ಘರ್ಜಿಸಿದಂತೆ ಮಾಡಿದಕ್ಕೆ ಅಪ್ಪನ ಅಭಿನಯ ಕಂಡು ಮಗ ಯಥರ್ವ ಓಡಿ ಹೋಗಿದ್ದಾನೆ. ಮಗ ಓಡಿದನ್ನು ನೋಡಿ ಯಶ್ ಮತ್ತು ಮಗಳು ಐರಾ ಇಬ್ಬರೂ ಜೋರಾಗಿ ನಕ್ಕಿದ್ದಾರೆ. ಅಲ್ಲದೇ 'A 'Wild' start to our Wednesday' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದ್ದು, ಮಕ್ಕಳ ಕ್ಯೂಟ್ ಆಗಿರುವ ವಿಡಿಯೋಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಯಥರ್ವ್ 'ನಾನು ಡೈನೋಸಾರ್' ಎಂದು ಕೂಗಿದ್ದಾನೆ. ಇದಕ್ಕೆ ಯಶ್, 'ನನಗೆ ಹಾಗೂ ಆಯ್ರಾಗೆ ಭಯವಾಗುತ್ತಿದೆ' ಎಂದು ಹೇಳಿದ್ದಾರೆ. ಮುಂದುವರಿದು 'ನಾನು ಹುಲಿ ಆಗುತ್ತಿದ್ದೇನೆ' ಎಂದು ಹೇಳುತ್ತಾ, ಹುಲಿಯಂತೆ ಘರ್ಜಿಸಿದ್ದಾರೆ ಯಶ್. ಇದನ್ನು ನೋಡಿ ಯಥರ್ವ್ ಅಲ್ಲಿಂದ ಓಡಿ ಹೋಗಿದ್ದಾನೆ. ವಿಡಿಯೋ ಹಂಚಿಕೊಂಡ ಒಂದು ಗಂಟೆಯಲ್ಲಿ 8 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.