Yash : ಯಶ್ ಹೇಳಿದ ಅಂದಿನ ಕಥೆಯ ವಿಡಿಯೋ ಈಗ ಬಾರಿ ವೈರಲ್..! ಇಷ್ಟು ಸಾಧನೆಗೆ ಅದು ಕಾರಣ
Updated:Friday, June 17, 2022, 08:54[IST]

ನಟ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಸಿನಿರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಕೆಜಿಎಫ್ ಮೂಲಕ ಇಡೀ ಪ್ರಪಂಚಕ್ಕೆ ನಟ ಯಶ್ ಅವರು ಚಿರಪರಿಚಿತರಾಗಿದ್ದಾರೆ. ಅವರದೇ ಆದ ಅಭಿಮಾನಿ ಬಳಗವನ್ನು ಅವರ ಅಭಿನಯದಿಂದಲೇ ಇಡೀ ದೇಶದ ತುಂಬಾ ಯಶ್ ಅವರು ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಬಹುದು. ನಟ ಯಶ್ ಆರಂಭದ ದಿನಗಳಲ್ಲಿ ತುಂಬಾ ಕಷ್ಟ ಪಟ್ಟು ಮೇಲೆ ಬಂದ ನಟ. ಸೀರಿಯಲ್ ಗಳಲ್ಲಿ ಹಂತಹಂತವಾಗಿ ನಟಿಸಿ ಹೆಚ್ಚು ಗುರುತಿಸಿಕೊಂಡ ನಟ. ಹೌದು ನಟ ಯಶ್ ಕಲೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದು ಹಂತಹಂತವಾಗಿ ಎಲ್ಲಾ ಕಲಿಯುತ್ತಾ ಬಂದರು. ಸಿನಿಮಾ ಹಿಟ್ ಮೇಲೆ ಹಿಟ್ ನೀಡಿ ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ದಾಪುಗಾಲಿಟ್ಟರು ಯಶ್.
ನಂತರ ಕೆಜಿಎಫ್ ಸಿನಿಮಾ ಬಂದೇ ಬಂದಿದ್ದು ನಟ ಯಶ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಾಗಿದೆ. ಈ ಕೆಜಿಎಫ್ 2 ಮೂಲಕ ಅಂದುಕೊಂಡಂತೆ ಯಶ್ ಅವರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಹೌದು ನಮ್ಮ ಕನ್ನಡ ಚಿತ್ರರಂಗ ಎಂದ ತಕ್ಷಣ ಬೇರೆಯವರು ನೋಡುತ್ತಿದ್ದ ರೀತಿ, ಹಾಗೂ ಅವರು ಮಾತನಾಡಿಕೊಳ್ಳುತ್ತಿದ್ದ ಪರಿಗೆ ಬೇಸತ್ತಿದ್ದ ನಟ ಯಶ್ ಹಾಗೂ ಪ್ರಶಾಂತ್ ನೀಲ್ ಅವರು ಕೆಜಿಎಫ್ ಸಿನಿಮಾ ಮೂಲಕ, ಇಡೀ ವಿಶ್ವಕ್ಕೆ ನಮ್ಮ ಕನ್ನಡ ಚಿತ್ರರಂಗದ ಶಕ್ತಿ ಏನು ಎಂಬುದಾಗಿ ತೋರಿಸಿದ್ದಾರೆ. ಇಷ್ಟು ಸಾಧನೆ ಮಾಡಲು ನಟ ಯಶ್ ಅವರು ಅತೀವವಾಗಿ ನಂಬಿರುವ ಅವರ ಒಂದಿಷ್ಟು ವಿಚಾರಗಳು ಹಾಗೆ ಅವುಗಳ ಮೇಲೆ ನಂಬಿಕೆಯಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದರೆ, ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವ ಯಶ್ ಅವರ ಮಾತುಗಳು ಸತ್ಯ ಎನಿಸುತ್ತವೆ. ಹಾಗೆ ನಿಜಕ್ಕೂ ಅದ್ಬುತ.
ಅಸಲಿಗೆ ಯಶ್ ಇಷ್ಟು ದೊಡ್ಡ ಮಟ್ಟಕ್ಕೆ ಸಾಧನೆ ಮಾಡಿ ಯಶಸ್ವಿನ ಓಟ ನಡೆಸಿ ಸಕ್ಸಸ್ ಆಗಲು ಕಾರಣ ಅವರ ಇಂತಹ ಮಾತುಗಳೇ ಎಂದು ಹೇಳಬಹುದು. ಇಲ್ಲಿದೆ ನೋಡಿ ಅಂದು ನಟ ಯಶ್ ಮಾತನಾಡಿದ ಮತ್ತೊಂದು ವಿಡಿಯೋ ತುಣುಕು. ಒಂದು ಚೈನಾ ಮರದ ಬಗ್ಗೆ ಬಿಚ್ಚಿಟ್ಟ ಕಥೆಯ ಒಳ ಅರ್ಥ ತಿಳಿದುಕೊಳ್ಳಿ. ಹೌದು 'ಎಲ್ಲರಿಗೂ ಬೇಕಾಗುವ ಹಣ್ಣು ಕೈ ಸೇರುತ್ತದೆ, ಯಾರಿಗೂ ಬೇಡವಾದ ಆ ಒಂದು ಬೀಜ ಭೂಮಿ ಸೇರುತ್ತದೆ, ನಂತರ ಆ ಬೇಡವಾದ ಬೀಜದೊಳಗೆ ಸಾವಿರಾರು ಹಣ್ಣುಗಳು ಬಿಡುವ ಕಾಲ ಬಂದೆ ಬರುತ್ತದೆ. ತಿರಸ್ಕರಿಸಿದವರು ಪುರಸ್ಕರಿಸುವಂತ ಕಾಲವೇ ಸಾಧನೆಯ ಬದುಕು'. ಈ ಅದ್ಭುತವಾದ ಸಾಲನ್ನ ನಾವು ಈಗ ನೆನಪು ಮಾಡಿಕೊಳ್ಳಲೇಬೇಕು. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯ ಶೇರ್ ಮಾಡಿ ಧನ್ಯವಾದಗಳು. ( video credit :filmy kannadiga )