ರಾಕಿ ಬಾಯ್ ಈಗ ಯಶ್ ಬಾಸ್ ಟ್ವಿಟರ್ ನಲ್ಲಿ ಟ್ರೆಂಡ್ : ಡಿ ಬಾಸ್ ಫ್ಯಾನ್ಸ್ ಫುಲ್ ಗರಂ

By Infoflick Correspondent

Updated:Friday, April 15, 2022, 13:54[IST]

ರಾಕಿ ಬಾಯ್ ಈಗ ಯಶ್ ಬಾಸ್ ಟ್ವಿಟರ್ ನಲ್ಲಿ  ಟ್ರೆಂಡ್ : ಡಿ ಬಾಸ್ ಫ್ಯಾನ್ಸ್ ಫುಲ್ ಗರಂ

ವಿಶ್ವಾದ್ಯಂತ ಕೆಜಿಎಫ್ 2 ಹವಾ ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಕೆಜಿಎಫ್ 2 ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕನ್ನಡ, ತೆಲುಗು, ತಮಿಳು, ಮಳಯಾಳಂ ಹಾಗೂ ಹಿಂದಿಯಲ್ಲೂ ಮುಗಿಬಿದ್ದು ಜನ ಚಿತ್ರವನ್ನು ನೋಡುತ್ತಿದ್ದಾರೆ. ಸಿನಿಮಾದ ಎಫೆಕ್ಟ್ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಯಶ್ಗೆ ಅಭಿಮಾನಿಗಳು ಹೊಸ ಬಿರುದನ್ನು ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರನ್ನು ಯಶ್ ಬಾಸ್ ಎಂದು ಕರೆಯಲು ಶುರು ಮಾಡಿದ್ದಾರೆ. The Official Trends Page For @TheNameIsYash ROCKING STAR YASH || #YashBOSS

ಟ್ವಿಟರ್ನಲ್ಲಿ ಈಗಾಗಲೇ ಯಶ್ ಆಸ್ ಎಂದು ಟ್ರೆಂಡ್ ಆಗುತ್ತಿದೆ. #YashBoss ಹ್ಯಾಷ್ ಟ್ಯಾಗ್ ಬಳಸಿ ಅಭಿಮಾನಿಗಳು ಟ್ವಿಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳು ಯಶ್ ಬಾಸ್ ಎಂದು ಕಮೆಂಟ್ ಮಾಡುತ್ತಿದ್ದರೆ, ಕೆಲವರು ಬಾಸ್ ಪಟ್ಟ ಕೇವಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಬ್ಬರೇ. ಡಿ ಬಾಸ್ ಅಂದರೆ ಡಿ ಬಾಸ್. ಗೂಗಲ್ ನಲ್ಲೂ ಬಾಸ್ ಎಂದರೆ ಡಿ ಬಾಸ್ ಅವರ ಫೋಟೋ ಬರುತ್ತೆ ಎಂದು ಹೇಳುತ್ತಿದ್ದಾರೆ. ಇದರ ನಡುವೆ ಮತ್ತಷ್ಟು ಮಂದಿ ಬಾಸ್ ಅಂದರೆ ಒಬ್ಬರೇ ಅದು ಪುನೀತ್ ರಾಜ್ ಕುಮಾರ್. ಇಡೀ ಕರ್ನಾಟಕಕ್ಕೆ ಅಪ್ಪು ಮಾತ್ರವೇ ಬಾಸ್ ಎಂದು ವಾದ ಮಂಡಿಸುತ್ತಿದ್ದಾರೆ.    

ಹೀಗೆ ಪುನೀತ್ ರಾಜ್ ಕುಮಾರ್, ದರ್ಶನ್ ಹಾಗೂ ಯಶ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯ ನಟರನ್ನು ಬಾಸ್ ಎಂದು ಕರೆಯುತ್ತಾ ಸಣ್ಣದಾಗಿ ಕಿತ್ತಾಡುತ್ತಿದ್ದಾರೆ. ಇದರ ಜೊತೆಗೆ ಸುದೀಪ್ ಅಭಿಮಾನಿಗಳು ಕೂಡ ನಾವೇನು ಕಮ್ಮಿಯಿಲ್ಲ. ಸುದೀಪ್ ಸರ್ ನಮ್ ಬಾಸ್ ಅಂದ ವಾದ ಮಾಡುತ್ತಿದ್ದಾರೆ. ಇದರ ಜೊತೆಗೆ ಕೆಜಿಎಫ್ 3 ಬೇಕೇ ಬೇಕು ಎಂದು ಕೂಡ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ.ಇದಕ್ಕೆ ನಿಮ್ಮ ಅನಿಸಿಕೆ ಏನು ಎಂದು ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ