Yash : ಯಶ್ ಅಭಿಮಾನಿಗಳ ಜೊತೆ ನಡೆದುಕೊಳ್ಳುವ ರೀತಿ ನೋಡಿದ್ದಿರ...? ವಾವ್ ಎನ್ನುತ್ತಿರಿ ವಿಡಿಯೋ ನೋಡಿ

By Infoflick Correspondent

Updated:Thursday, May 19, 2022, 13:11[IST]

Yash : ಯಶ್ ಅಭಿಮಾನಿಗಳ ಜೊತೆ ನಡೆದುಕೊಳ್ಳುವ ರೀತಿ ನೋಡಿದ್ದಿರ...? ವಾವ್ ಎನ್ನುತ್ತಿರಿ ವಿಡಿಯೋ ನೋಡಿ

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಕೆಜಿಎಫ್ ಭಾಗ-2 ಸಿನಿಮಾದಲ್ಲಿ ಅತ್ಯದ್ಭುತ ಅಭಿನಯ ಮಾಡಿ ಎಲ್ಲಾ ಅಭಿಮಾನಿ ಬಳಗದವರನ್ನು ಕೂಡ ಖುಷಿ ಪಡಿಸಿದ್ದಾರೆ. ಅತ್ತ ಬಾಲಿವುಡ್ ಅಂಗಳದಲ್ಲಿಯೂ ಸಹ ಯಶ್ ತುಂಬಾ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆಂದು ಹೇಳಬಹುದು. ಯಶ್ ಅವರು ಇದೀಗ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಇಂಡಿಯಾ ಸೂಪರ್ ಸ್ಟಾರ್, ಜೊತೆಗೆ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ ಎನ್ನಲಾಗಿದೆ. ಕೆಜಿಎಫ್ ಭಾಗ-2 ಸಿನಿಮಾ ಯಾವ ರೀತಿ ಮೂಡಿಬಂದಿದೆ ಎಂದರೆ ಕನ್ನಡಿಗರು ಹೆಮ್ಮೆಪಡುವಂತೆ, ಕನ್ನಡಿಗರು ಕಾಲರ್ ಎತ್ತಿ ನಮ್ಮ ಕನ್ನಡದ ಬಗ್ಗೆ, ಕನ್ನಡ ಚಿತ್ರಗಳ ಬಗ್ಗೆ ಹೆಮ್ಮೆ ಇಟ್ಟುಕೊಂಡೆ ಮಾತನಾಡುವಂತೆ ಸಿನಿಮಾ ಮೂಡಿಬಂದಿದೆ.

ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರ ಅತ್ಯದ್ಭುತ ನಿರ್ದೇಶನ ಕೆಜಿಎಫ್ ಸಿನಿಮಾದಲ್ಲಿ ಎದ್ದು ಕಾಣುತ್ತಿದ್ದು ಇಡೀ ಚಿತ್ರತಂಡ ಇದಕ್ಕಾಗಿ ಹೆಚ್ಚು ಶ್ರಮಿಸಿದೆ ಎಂದು ಹೇಳಬಹುದು. ಹೌದು ನಟ ಯಶ್ ಅವರು ಎಷ್ಟು ಸರಳ ವ್ಯಕ್ತಿತ್ವ ಮತ್ತು ಅಭಿಮಾನಿಗಳು ಎಂದರೆ ಎಷ್ಟು ಪ್ರೀತಿ ನೀಡುತ್ತಾರೆ,   

ಹಾಗೆ ಅಭಿಮಾನಿ ದೇವರುಗಳ ಜೊತೆ ಯಾವ ರೀತಿ ವರ್ತಿಸುತ್ತಾರೆ, ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಕೆಲವೊಂದಿಷ್ಟು ವಿಡಿಯೋಸ್ ಮೂಲಕ ಅವರ ಮೇಲಿನ ಪ್ರೀತಿ ಇನ್ನು ಹೆಚ್ಚುವಂತೆ ಈಗಾಗಲೇ ಕಂಡುಬಂದಿದೆ. ಹೌದು ಯಶ್ ಈಗ ಮತ್ತೊಂದು ಕ್ಯೂಟ್ ವಿಡಿಯೋದಲ್ಲಿ ಕಂಡುಬಂದಿದ್ದಾರೆ. 

ಅಭಿಮಾನಿ ಮಿತ್ರರು ಯಶ್ ಜೊತೆ ನಿಂತು ಫೋಟೋ ತೆಗೆದುಕೊಳ್ಳುವ ವೇಳೆ, ಅವರಿಗೆ ತೋರುವ ಯಶ್ ಅವರ ಪ್ರೀತಿ ನೋಡಿದರೆ ನಿಜಕ್ಕೂ ಕಣ್ಣಂಚಲ್ಲಿ ನೀರು ಬರುತ್ತದೆ. ಅದೆಷ್ಟು ಸರಳತೆ ಪ್ರೀತಿ ನೀಡುತ್ತಾರೆ ಯಶ್ ಎಂದೆನಿಸುತ್ತದೆ. ಹಾಗೆ ಅಪ್ಪು ಅವರ ಅಭಿಮಾನಿಗಳು ಸಹ, ನೀವೂ ಕೂಡ ಅಪ್ಪು ಹಾದಿಯಲ್ಲೇ ನಡೆಯಿರಿ ಎಂದು ಶುಭಕೋರಿದ್ದಾರೆ. ಈ ವಿಡಿಯೋ ನೋಡಿ, ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ. ಹಾಗೆ ಯಶ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..