Yash : ಯಶ್ ರಾಧಿಕಾನ ಮದುವೆ ಆಗುತ್ತೀನಿ ಎಂದಾಗ ಅವರ ತಾಯಿ ಕೊಟ್ಟ ಸಲಹೆ ಏನು ಗೊತ್ತಾ?
Updated:Friday, May 20, 2022, 20:34[IST]

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಎಂದು ಬಿರುದು ಪಡೆದಿರುವ ನಟ ಯಶ್ ಅವರು ಇದೀಗ ಉನ್ನತ ಸ್ಥಾನದಲ್ಲಿದ್ದಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಕೆಜಿಎಫ್ ಸಿನಿಮಾ ಮೂಲಕವೇ ಹೆಚ್ಚು ಎಲ್ಲರಿಗೂ ಚಿರಪರಿಚಿತ ಆಗಿದ್ದಾರೆ. ನಟ ಯಶ್ ಅವರು ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಕಷ್ಟದ ಹಾದಿ ಮರೆಯುವಂತೆ ಯಶ್ ಅವರ ಸಿನಿಮಾ ಜೀವನ ತುಂಬಾ ಚೆನ್ನಾಗಿ ಇದೀಗ ಸಾಗುತ್ತಿದೆ ಎನ್ನಬಹುದು. ಕೆಜಿಎಫ್ ಚಿತ್ರದ ಮೂಲಕ ಇಡೀ ಪ್ಯಾನ್ ಇಂಡಿಯಾ ಅಭಿಮಾನಿಗಳ ಮನಸ್ಸನ್ನು ಕದ್ದಿರುವ ಯಶ್ ಕನ್ನಡದ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರನ್ನು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಅದು ಎಲ್ಲರಿಗೂ ಗೊತ್ತು.
ಇದೀಗ ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ನಟ ಯಶ್ ಅವರು ಪತ್ನಿ ಮತ್ತು ಮಕ್ಕಳೊಡನೆ ತುಂಬಾ ಅನ್ಯೋನ್ಯತೆ ಜೀವನ ಸಾಗಿಸುತ್ತಿದ್ದು, ಯಶ್ ಅವರ ವೈಯಕ್ತಿಕ ಕೆಲವೊಂದಿಷ್ಟು ವಿಚಾರಗಳನ್ನು ಅವರ ತಾಯಿ ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿ ಕೊಟ್ಟಿದ್ದಾರೆ ಎನ್ನಲಾಗಿದೆ. ಹೌದು ಯಶ್ ಅವರ ತಾಯಿ ಹೇಳುವ ಹಾಗೆ ಮದುವೆ ವಿಚಾರದಲ್ಲಿ ನಟ ಯಶ್ ಗೆ ಹೆಚ್ಚಿಗೆ ಸಲಹೆ ಕೊಟ್ಟಿದ್ದರಂತೆ. ನಮ್ಮ ಮನೆಗೆ ಬರುವ ಸೊಸೆಯ ಹೇಗೆ ನೋಡಿಕೊಳ್ಳಬೇಕು ಎಂಬುದಾಗಿ ನಾವು ಹೇಳಿ ಕೊಟ್ಟೆವು. ಹಾಗೆ ಯಶ್ ಮತ್ತು ರಾಧಿಕಾ ಮದುವೆಗೆ ಮುನ್ನ ಓಡಾಡುತ್ತಿರುವ ವಿಷಯ ನನಗೆ ಗೊತ್ತಿತ್ತು. ಅವರ ತಂದೆಗೂ ಕೂಡ ಗೊತ್ತಿತ್ತು. ಆದ್ರೆ ಮದುವೆ ಹತ್ತಿರ ಬಂದಾಗ ಯಶ್ ಪ್ರೀತಿ ಮಾಡುತ್ತಿದ್ದ ಹುಡುಗಿಯ ವಿಚಾರವನ್ನು ಯಶ್ ಅವರ ತಂದೆ ಎದುರಿಗೆ ತಿಳಿಸಿದೆವು.
ಅವಳು ಸಹ ನಮ್ಮ ಮನೆಯ ಹುಡುಗಿ ಇದ್ದಂತೆ, ಯಶ್ ಗೆ ಹುಡುಗಾಟದಲ್ಲಿ ಏನು ಮಾಡಬೇಡ ಎಂದಿದ್ದೆ, ಏನು ಚಿಂತೆ ಮಾಡಬೇಡಮ್ಮ ನಾನು ಏನು ಮಾಡುವುದಿಲ್ಲ ಎನ್ನುವ ಭರವಸೆ ನೀಡಿದ್ದ ಯಶ್. ಅದೇ ರೀತಿ ಮದುವೆಯಾಗಿ ಇಬ್ಬರು ಖುಷಿಯಾಗಿದ್ದಾರೆ. ಜೀವನ ಚೆನ್ನಾಗಿ ನಡೆಯುತ್ತಿದೆ ಎಂದರು ಯಶ್ ಅವರ ತಾಯಿ ಪುಷ್ಪ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...