ಕನ್ನಡದ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರ ಸ್ಟಾರ್ ನಟನ ತಾಯಿ..? ಯಾರ್ ಗೊತ್ತೇ ವಿಡಿಯೋ ನೋಡಿ

Updated: Wednesday, January 13, 2021, 15:34 [IST]

ಹೌದು ಈ ವರ್ಷದ ಆರಂಭದಲ್ಲಿ ಅಂದುಕೊಂಡಂತೆ ಆಗಿದ್ದೇ ಆದರೆ, ಮುಂದಿನ ತಿಂಗಳು ಫೆಬ್ರವರಿಯಲ್ಲಿ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆಂದು ವರದಿಯಾಗಿದೆ. ಮತ್ತು ಈ ಬಾರಿಯ ಬಿಗ್ ಬಾಸ್ ಸೀಸನ್ ಎಂಟರ ಕಾರ್ಯಕ್ರಮವು ಪ್ರತಿವರ್ಷದಂತೆ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದು, ಸೌತ್ ಖ್ಯಾತ ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ. ಹಾಗೆ ಈ ವರ್ಷ ಕೂಡ ಇಪ್ಪತ್ತು ಸ್ಪರ್ದಿಗಳು ಬಿಗ್ ಬಾಸ್ ಮನೆಗೆ ಕಳುಹಿಸಲು, ಬಿಗ್ ಬಾಸ್ ಆಯೋಜಕರು ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡು, ಬಿಗ್ ಬಾಸ್ ಮನೆಯ ಕೆಲಸಗಳನ್ನು ಆರಂಭಿಸಿಕೊಂಡಿದ್ದಾರೆ. 

ಹೌದು ಸಿನಿಮಾ, ಕಿರುತೆರೆ, ಮತ್ತು ರಾಜಕೀಯ, ಮೂರು ಕ್ಷೇತ್ರಗಳಿಂದ ಆರು ಜನರನ್ನು ಆಯ್ದುಕೊಂಡು, ಒಟ್ಟು 18 ಜನರನ್ನು ಬಿಗ್ ಬಾಸ್ ಮನೆಗೆ ಕಳಿಸಲಾಗುತ್ತದೆ. ಇನ್ನೆರಡು ಸ್ಪರ್ಧಿಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವವರನ್ನ ಕಳುಹಿಸಲು ನಿರ್ಧಾರ ಮಾಡಿದಂತೆ. ಆದರೆ ಇದೆಲ್ಲದರ ಜೊತೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ, ನ್ಯಾಷನಲ್ ಸ್ಟಾರ್ ಎಂದೇ ಖ್ಯಾತಿ ಪಡೆದುಕೊಂಡಿರುವ ರಾಕಿಂಗ್ ಸ್ಟಾರ್ ಯಶ್, ತಾಯಿ ಪುಷ್ಪಾರವರು ಈ ಬಾರಿಯ ಬಿಗ್ ಬಾಸ್ ಮನೆಯೊಳಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.  

ಕಾರಣ ಇತ್ತೀಚಿಗಷ್ಟೇ ಯಶ್ ಅವರ ತಾಯಿ ಸಿಹಿಕಹಿ ಚಂದ್ರು ಅವರ ಅಡುಗೆ ಕಾರ್ಯಕ್ರಮಕ್ಕೆ ಹೋಗಿದ್ದು, ಕಾರ್ಯಕ್ರಮ ತುಂಬಾ ಜನಪ್ರಿಯಗೊಂಡಿತ್ತು. ಹಾಗೆ ಆಕರ್ಷಕವಾಗಿತ್ತು. ಅದೇ ನಿಟ್ಟಿನಲ್ಲಿ ಸ್ಟಾರ್ ನಟನ ತಾಯಿಯನ್ನು ಬಿಗ್ ಬಾಸ್ ಮನೆಗೆ ಕರೆಸಿದ್ರೆ ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಕನ್ನಡ ರಿಯಾಲಿಟಿ ಶೋ ಇನ್ನು ಹೆಚ್ಚು ಜನಪ್ರಿಯವಾಗುತ್ತದೆ ಎಂದು ಬಿಗ್ಬಾಸ್ ಆಯೋಜಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ಯಶ್ ಅವರಾಗಲಿ, ಪುಷ್ಪಾರವರು ಆಗಲಿ, ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಬದಲಿಗೆ ಯಾವ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸುತ್ತಾರೆ ಎಂದು ಕಾದು ನೋಡಬೇಕಿದೆ...