Yash : ಯಶ್ ಕುಟುಂಬದಲ್ಲಿ ಯಾವ ಸೆಂಟಿಮೆಂಟ್ ಇರೋಲ್ಲ ಅಂತೆ..? ಕಾರಣ ಬಿಚ್ಚಿಟ್ಟ ಯಶ್ ಅವರ ತಾಯಿ..!

By Infoflick Correspondent

Updated:Wednesday, May 11, 2022, 10:13[IST]

Yash : ಯಶ್ ಕುಟುಂಬದಲ್ಲಿ ಯಾವ ಸೆಂಟಿಮೆಂಟ್ ಇರೋಲ್ಲ ಅಂತೆ..? ಕಾರಣ ಬಿಚ್ಚಿಟ್ಟ ಯಶ್ ಅವರ ತಾಯಿ..!

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಭಾಗ-2 ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿ 25 ದಿನಗಳ ಪೂರೈಕೆ ಮಾಡಿರುವ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ-2 ಸುಮಾರು ಹನ್ನೊಂದು ನೂರು ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ದು ದಾಖಲೆ ಮೂಲಕ ಇನ್ನೂ ಕೂಡ ಮುನ್ನುಗ್ಗುತ್ತಿದೆ. ಇದು ಕನ್ನಡದ ಹೆಮ್ಮೆಯ ಸಿನಿಮಾ.

ನಿಜಕ್ಕೂ ಕೆಜಿಎಫ್ ಒಂದು ಕನ್ನಡದ ಶಕ್ತಿಯನ್ನು ಎತ್ತಿತೋರಿಸುವ ಸಿನಿಮಾ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಇಂತಹ ಒಂದು ಸಿನಿಮಾ ಬರುತ್ತದೆ, ಎಲ್ಲಾ ಸಿನಿಮಾರಂಗದ ರೆಕಾರ್ಡ್ ಮುರಿಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ, ಇದೀಗ ಕೆಜಿಎಫ್ 2 ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದೆ. ಬೇರೆ ಸಿನಿಮಾ ರಂಗದವರು ನಮ್ಮ ಕನ್ನಡ ಸಿನಿಮಾಗೆ ಕಾಯುವಂತೆ ಇದು ಅಡಿಪಾಯ ಹಾಕಿದೆ ಎಂದು ಹೇಳಿದರೆ ತಪ್ಪಾಗಲಾರದು. 

ಕೆಜಿಎಫ್ ನಲ್ಲಿ ಕೇವಲ ರಾಕಿಬಾಯ್ ಒಬ್ಬರೇ ಇದಕ್ಕೆಲ್ಲ ಕಾರಣ ಎಂದು ಹೇಳಲಿಕ್ಕಾಗದು. ಕಾರಣ ಇಡೀ ಕೆಜಿಎಫ್ ಚಿತ್ರತಂಡ ಸಿನಿಮಾಗೆ ತುಂಬಾನೇ ಶ್ರಮಿಸಿದೆ. ಕೆಜಿಎಫ್ ಚಿತ್ರದ ನಟ ಯಶ್ ಅವರ ತಾಯಿ ಇದೀಗ ಸಂದರ್ಶನದಲ್ಲಿ ಅವರ ವೈಯಕ್ತಿಕ ಕೆಲ ವಿಚಾರ ಹಂಚಿಕೊಂಡಿದ್ದು, ನಟ ಯಶ್ ಅವರು ನಿಮ್ಮ ಕೈಗೆ ಇತ್ತೀಚಿಗೆ ಸಿಗುತ್ತಿಲ್ಲವಲ್ಲ ಅವರ ಜೊತೆ ಓಡಾಟ ನಡೆಸಬೇಕು, ಅವರ ಜೊತೆ ಬೇರೆ ಕಡೆ ಹೋಗಬೇಕು, ಮಗ ಯಶ್ ಜೊತೆ ಒಟ್ಟಿಗೆ ಸಮಯವನ್ನು ಕಳೆಯಬೇಕು ಎಂದೆನಿಸುತ್ತದೆಯ ಅಮ್ಮಾ ಎನ್ನಲಾಗಿ ಪ್ರಶ್ನೆ ಮಾಡಲಾಗಿತ್ತು. ಆಗ ಅವರು ನಮ್ಮ ಕುಟುಂಬದಲ್ಲಿ ಯಾವ ಸೆಂಟಿಮೆಂಟ್ ಇರೋಲ್ಲ. ಕಾರಣ ನಾವು ಬೆಳೆದುಕೊಂಡು ಬಂದ ರೀತಿಯ ಹಾಗಿದೆ. 

ನಾನು ರಾಧಿಕಾಗೆ ಆಗಾಗ ಹೇಳುತ್ತೇನೆ, ನಾವು ಜೀವನದಲ್ಲಿ ಹೀಗೆ ನಡೆದುಕೊಂಡು ಬಂದಿದ್ದೇವೆ, ಸೆಂಟಿಮೆಂಟ್ ನಮ್ಮಲ್ಲಿ ಇಲ್ಲ ಅಡ್ಜಸ್ಟ್ ಮಾಡಿಕೊ ಎಂದು. ಯಾಕಂದರೆ ಅವರ ತಂದೆ 12 ಗಂಟೆಗೆ ಕೆಲಸ ಮುಗಿಸಿಕೊಂಡು ಬರುತ್ತಿದ್ದರು. ಮಕ್ಕಳು ಆಗಲೇ ಊಟ ಮಾಡಿಕೊಂಡು ಮಲಗಿಬಿಡುತ್ತಿದ್ದರು. ಬೆಳಗ್ಗೆ 5 ಗಂಟೆಗೆ ಹೋಗುತ್ತಿದ್ದರು. ಯಶ್ ಅವನು ಬೆಳಿಗ್ಗೆ ಬೇಗನೆ ಶೂಟಿಂಗ್ ಗೆ ಹೋಗುತ್ತಿದ್ದ. ಹೀಗೆ ಎಲ್ಲರಿಗೂ ಕುಟುಂಬದ ಜೊತೆ ಒಟ್ಟಿಗೆ ಕುಳಿತು ಊಟ ಮಾಡಬೇಕು, ಒಟ್ಟಿಗೆ ಕುಳಿತು ಮಾತನಾಡಬೇಕು, ಸಮಯ ಕಳೆಯಬೇಕು ಎನಿಸುತ್ತದೆ. ಹಾಗೆ ಹೆಚ್ಚು ಜನರು ಅಂದುಕೊಳ್ಳುತ್ತಾರೆ ಕೂಡ. ಆದರೆ ನಮ್ಮ ಕುಟುಂಬದಲ್ಲಿ ಹಾಗೆಲ್ಲ ಇಲ್ಲ. ಆ ರೀತಿ ಸೆಂಟಿಮೆಂಟ್ ಇಟ್ಟುಕೊಂಡು ನಾವು ಮಾಡುವ ಕರ್ತವ್ಯಕ್ಕೆ ಹೊಡೆತ ಬೀಳಲು ಬಿಡುವುದೇ ಇಲ್ಲ ಎಂದಿದ್ದಾರೆ ಯಶ್ ತಾಯಿ ಪುಷ್ಪ ಅವರು..

ಹೌದು ಸೆಂಟಿಮೆಂಟ್ ಇದ್ದರೆ ಕರ್ತವ್ಯಕ್ಕೆ ತೊಂದರೆ ಆಗುತ್ತದೆ ಎಂದು ಹೇಳಿರುವ ಪುಷ್ಪ ಅವರ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ದನ್ಯವಾದಗಳು...