ಯಶ್ ಮಾಡಿರುವ ಸಾಧನೆ ಅವರ ತಾಯಿಗೆ ಇನ್ನೂ ತೃಪ್ತಿ ತಂದಿಲ್ಲವಂತೆ..! ಇಂಟ್ರೆಸ್ಟಿಂಗ್ ವಿಚಾರ ಬಯಲು

By Infoflick Correspondent

Updated:Sunday, April 10, 2022, 16:00[IST]

ಯಶ್ ಮಾಡಿರುವ ಸಾಧನೆ ಅವರ ತಾಯಿಗೆ ಇನ್ನೂ ತೃಪ್ತಿ ತಂದಿಲ್ಲವಂತೆ..! ಇಂಟ್ರೆಸ್ಟಿಂಗ್ ವಿಚಾರ ಬಯಲು

    

ಜೀವನದಲ್ಲಿ ಯಾರೇ ಆದರೂ ಅವರು ಅಂದುಕೊಂಡಂತೆ ಜೀವನ ಸಾಗಲು ಸಾಧ್ಯವಿಲ್ಲ, ಅವರ ಕನಸು ನನಸಾಗಬೇಕು ಎಂದರೆ ನಿಯಮಿತ ಸಮಯದಲ್ಲಿ ಯಾವ ಕೆಲಸವನ್ನು ಹೇಗೆ ಮಾಡಿದರೆ, ಯಾವ ರೀತಿ ಗುರಿ ಮುಟ್ಟುತ್ತಾರೆ ಎಂದು ನಾವು ಈಗಾಗಲೇ ಸಾಕಷ್ಟು ನಿದರ್ಶನಗಳನ್ನು ಕೇಳಿದ್ದೇವೆ. ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎನ್ನುವ ಮಾತು ಈಗಲೂ ಸತ್ಯ. ಹೌದು ನಟ ಯಶ್ ಅವರು ಇಂದು ವಿಶ್ವಮಟ್ಟದಲ್ಲಿ ಬೆಳೆದಿದ್ದಾರೆ. ಆದರೆ ಯಶ್ ಅವರು ಬಾಲ್ಯ ಜೀವನದಲ್ಲಿ ಹೇಗಿದ್ದರು, ಯಾವ ರೀತಿ ಬೆಳೆದಿದ್ದರು ಎಂದು ಇದೀಗ ಸಂದರ್ಶನದಲ್ಲಿ ಅವರ ತಾಯಿ ಯಶ್ ಅವರ ಬಗ್ಗೆ  ಕೆಲವೊಂದಿಷ್ಟು ಇಂಟರೆಸ್ಟ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಹೌದು ಯಶ್ ಅವರ ಕುಟುಂಬ ಈ ಹಿಂದೆ ತುಂಬಾನೇ ಕಷ್ಟಗಳನ್ನು ಅನುಭವಿಸಿತ್ತು ಎನ್ನಲಾಗಿದೆ.

ಬಡತನದ ಜೀವನದಲ್ಲಿ ಅವರ ನೆಂಟರೆ ಯಶ್ ಅವರ ತಾಯಿಗೆ ಕಟು ಮಾತುಗಳನ್ನು ಆಡಿ ಅವರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದಾರಂತೆ. ಗಂಡ ದುಡಿದ ದುಡ್ಡನ್ನು ಎತ್ತಿಡದೆ ಮಕ್ಕಳಿಗಾಗಿ ಎಲ್ಲ ಖರ್ಚು ಮಾಡುತ್ತಿದ್ದಾರೆ ಇವರು ಎಂದು ಆಡಿಕೊಳ್ಳುತ್ತಿದ್ದರಂತೆ. ಈಗ ಯಶ್ ತಾಯಿ ಪುಷ್ಪ ಅವರು ಈ ಬಗ್ಗೆ ಮಾತನಾಡಿದ್ದು ನನ್ನ ಮಕ್ಕಳು ಏನೇ ಕೇಳಿದರೂ, ಏನೇ ಆಸೆಪಟ್ಟರು ಸಹ ಹೆಚ್ಚು ಕಷ್ಟವಿದ್ದರೂ, ಬಡತನವಿದ್ದರೂ ಎಲ್ಲವನ್ನೂ ಮಾಡಿದ್ದೇನೆ. ಆಗಿನ ಕಾಲದಲ್ಲಿ 90 ರೂಪಾಯಿಯ ಬೇಬಿ ಸೋಪ್ ಸಿಗುತ್ತಿತ್ತು. ಮಕ್ಕಳಿಗೆ ಇಷ್ಟ ಎಂದು ಅದನ್ನೆ ನಾನು ತಂದು ಕೊಡುತ್ತಿದ್ದೆ. ಯಶ್ ಆರನೇ ತರಗತಿಯಲ್ಲಿದ್ದಾಗ ನಾನು ಒಂದು ಜೊತೆ ಬಟ್ಟೆ ತಂದೆ. ಆದರೆ ಅವನಿಗೆ ಆ ಬಟ್ಟೆ ಇಷ್ಟವಾಗಲಿಲ್ಲ. ಅಂದಿನಿಂದ ಇಂದಿನವರೆಗೂ ನಾನು ಅವನ ಇಷ್ಟದಂತೆಯೇ ಬಿಟ್ಟಿದ್ದೇನೆ.

ಒಮ್ಮೆ ಅವನು ಪ್ರೀತಿ ಮಾಡುತ್ತಿರುವ ವಿಚಾರ ನನ್ನ ಬಳಿ ಹೇಳಿದಾಗ, ನೀನು ಮೊದಲು ನಿನ್ನ ಕಾಲಮೇಲೆ ನಿಲ್ಲು, ಆಮೇಲೆ ಮದುವೆ ಆದರಾಯಿತು ಎಂದಿದ್ದೆ. ನಾವು ತರುವ ಬಟ್ಟೆಯನ್ನು ಇಷ್ಟಪಡದ ಮಗ ನಾವು ತರುವ ಸೊಸೆಯನ್ನು ಇಷ್ಟಪಡುತ್ತಾನ ಎಂದು ನಾವು ಸುಮ್ಮನಾಗಿದ್ದೆವು. ಇಂದು ಇಷ್ಟು ದೊಡ್ಡ ವಿಶ್ವಮಟ್ಟಕ್ಕೆ ಬೆಳೆದಿದ್ದಾನೆ. ಇನ್ನೂ ಅವನು ಏನು ಸಾಧನೆ ಮಾಡಿಲ್ಲ. ಸಾಧನೆ ಮಾಡುವುದು ತುಂಬಾನೇ ಇದೆ. ಅವನು ಸಾಧನೆ ಮಾಡಿಯೇ ಮಾಡುತ್ತಾನೆ ಎನ್ನುವ ನಂಬಿಕೆ ನನಗೂ ಇದೆ ಎಂದು ನಟ ಯಶ್ ಅವರ ತಾಯಿ ಪುಷ್ಪ ಅವರು ಮಗನ ಬಗ್ಗೆ ಈ ರೀತಿ ಹೇಳಿಕೆಗಳನ್ನು ಹೇಳಿದ್ದರು.

ಈ ರೀತಿ ಬೆಂಬಲ ನೀಡುವ ತಾಯಿ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಯಶ್ ಉದಾಹರಣೆ ಎಂದು ಹೇಳಬಹುದು. ಇಂತಹ ನೂರು ಜನ ಯಶ್ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಅವರ ತಾಯಿ ರೀತಿ ಸ್ಪೂರ್ತಿದಾಯಕ ಮಾತು ಬೇಕು ಅಲ್ವೇ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ. ಹಾಗೆ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ. ಯಶ್ ಅವರ ಬಗ್ಗೆ ಅವರ ತಾಯಿ ಹೇಳಿದ ಈ ಇಂಟ್ರೆಸ್ಟ್  ವಿಚಾರಗಳ ಬಗ್ಗೆಯೂ ಕೂಡ ನಿಮ್ಮ ಅನಿಸಿಕೆಯನ್ನು ತಿಳಿಸಿ ಧನ್ಯವಾದಗಳು....