ಪುನೀತ್'ಗೆ ದೇವರು ಎಲ್ಲಾ ಕೊಟ್ಟ, ಅದೊಂದು ಕಡಿಮೆ ಮಾಡ್ಬಿಟ್ಟ ಎಂದ ಯಶ್ ತಾಯಿ..! ಹೇಳಿದ್ದೆ ಬೇರೆ

By Infoflick Correspondent

Updated:Sunday, April 17, 2022, 14:53[IST]

ಪುನೀತ್'ಗೆ ದೇವರು ಎಲ್ಲಾ ಕೊಟ್ಟ, ಅದೊಂದು ಕಡಿಮೆ ಮಾಡ್ಬಿಟ್ಟ ಎಂದ ಯಶ್ ತಾಯಿ..! ಹೇಳಿದ್ದೆ ಬೇರೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮ ಕನ್ನಡದ ಹೆಮ್ಮೆಯ ಪುತ್ರ ಎಂದು ಹೇಳಬಹುದು, ಮೇಲಾಗಿ ಡಾಕ್ಟರ್ ರಾಜ್ಕುಮಾರ್ ಅವರ ಕಿರಿಯ ಪುತ್ರ. ಹೌದು ಅಪ್ಪು ಅವರು ಸಮಾಜಸೇವೆಯಲ್ಲಿ ಹೆಚ್ಚು ಮುಂದಿರುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ವಿಶ್ವಮಟ್ಟಕ್ಕೆ ಪುನೀತ್ ಯಾರು ಎಂಬುದು ಎಲ್ಲರಿಗೂ ಗೊತ್ತಿತ್ತು. ಅಪ್ಪು ಅವರು ಸಾಕಷ್ಟು ವೃದ್ಧಾಶ್ರಮ, ಅನಾಥಾಶ್ರಮ , ಶಾಲೆಗಳು ಗೋಶಾಲೆಗಳು, ಮಕ್ಕಳ ವಿದ್ಯಾಭ್ಯಾಸ,, ಕಷ್ಟ ಎಂದವರಿಗೆ ತಕ್ಷಣ ಮುಂದೆ ಬರುತ್ತಿದ್ದ ಅವರ ಸಹಾಯ ಮಾಡುವ ಮನಸ್ಥಿತಿಗೆ ಎಲ್ಲವನ್ನೂ ಕೂಡ ನೆನೆದರೆ ನಿಜಕ್ಕೂ ದೇವರು ಇದ್ದಾನ, ದೇವರಂತಹ ನಮ್ಮ ಪ್ರೀತಿಯ ಅಪ್ಪುವನ್ನು ಕಿತ್ತುಕೊಳ್ಳಲು ಮನಸ್ಸಾದರೂ ಹೇಗೆ ಮಾಡಿದನೋ ಎಂದು ಎನ್ನಿಸುತ್ತದೆ.

ಪುನೀತ್ ಅವರು ಇದೀಗ ದೇವರಾಗಿದ್ದಾರೆ ಎನ್ನಬಹುದು. ಪುನೀತ್ ಅವರನ್ನ ಕಳೆದುಕೊಂಡ ಅವರ ಅಭಿಮಾನಿಗಳು, ಇಡೀ ಕರ್ನಾಟಕ ಜನತೆ ಅಪ್ಪು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ನಮ್ಮ ಅಪ್ಪು ಬಾಸ್ ಸಿನಿಮಾ ಯಾವುದು ಬರುವುದಿಲ್ಲವಲ್ಲ ಎಂದು ನೆನೆದರೆನೆ ತುಂಬಾನೇ ಕಣ್ಣೀರು ತರುವಂತೆ ಅವರ ನೆನಪು ಕಾಡುತ್ತಿದೆ. ಹೌದು ಪುನೀತ್ ಅವರ ಬಗ್ಗೆ ಇತ್ತೀಚಿಗಷ್ಟೇ ಯಶ್ ಅವರ ತಾಯಿ ಮತ್ತು ತಂದೆ ಕೆಲವು ವಿಚಾರ ಹಂಚಿಕೊಂಡಿದ್ದಾರೆ. ಪುನೀತ್ ಹಾಗೂ ಯಶ್ ಯಾವ ರೀತಿ ಇರುತ್ತಿದ್ದರು, ಅವರ ತಂದೆಯನ್ನು ನಾವು ನೋಡಿಕೊಂಡು ಬಂದಿದ್ದೇವೆ, ಎಂತಹ ಸರಳ ವ್ಯಕ್ತಿತ್ವ, ಅವರ ತಂದೆಯನ್ನು ಅಪ್ಪು ಅವರು ಕೂಡ ಪಾಲಿಸಿದ್ದರು. ಜೊತೆಗೆ ಈ ಸಾವಿನಲ್ಲೂ ಕೂಡ ಅವರನ್ನು ಹಿಂಬಾಲಿಸಿದರಾ? ದೇವರು ತುಂಬಾ ಮೋಸ ಮಾಡಿಬಿಟ್ಟ  ಇಷ್ಟು ಕಷ್ಟ ಕೊಡಲು ಅವನಿಗೆ ಮನಸ್ಸಾದರೂ ಹೇಗೆ ಬಂದಿತು ಪಾಪ ಎನ್ನಿಸುತ್ತದೆ ಎಂದರು ನಟ ಯಶ್ ಅವರ ತಾಯಿ ಪುಷ್ಪ ಅವರು. 

ಹೌದು ದೇವರು ಎಲ್ಲವನ್ನೂ ಪುನೀತ್ ಅವರಿಗೆ ಕೊಟ್ಟ, ಆದರೆ ಆಯಸ್ಸನ್ನು ಕೊಡಲಿಲ್ಲ. ಪುನೀತ್ ಸಾವಿನಲ್ಲೂ ಹೀರೋ ಆದರೂ ಎಂದಿದ್ದಾರೆ ಪುಷ್ಪ. ಹೌದು ಅಪ್ಪು ದೇವರು ಆಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದ..  (video credit : public tv )