Yash : ಕೆಜಿಎಫ್ ಆಯ್ತು, ಯಶ್ ಮುಂದಿನ ನಡೆ ಇಟ್ಟಾಯ್ತು..! ಮುಂದಿನ ಸಿನಿಮಾ ಮಹೂರ್ತ ಇಷ್ಟರಲ್ಲೇ ಅಂತೆ..! ಯಾರ ಜೊತೆ ಗೊತ್ತಾ ?
Updated:Monday, May 23, 2022, 16:55[IST]

ಕನ್ನಡ ಚಿತ್ರರಂಗದ ಬಂಗಾರದ ಸಿನಿಮಾ ಕೆಜಿಎಫ್ ಭಾಗ-2 ಇದೀಗ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಐದು ವರ್ಷಗಳ ಹಿಂದೆ ನಟ ರಾಕಿಂಗ್ ಸ್ಟಾರ್ ಯಶ್ ಕನ್ನಡ ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿದ್ದಂತವರು. ಆದರೆ ಯಾವಾಗ ಕನ್ನಡ ಕೆಜಿಎಫ್ ಭಾಗ ಒಂದು ಬಂತೋ, ಡಿಸೆಂಬರ್ 21ನೇ ತಾರೀಕು ಬಿಡುಗಡೆಯಾಯಿತೊ ಮತ್ತು ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ವಿ ಆಯಿತೊ ಆಗಲೇ ನಟ ಯಶ್ ಅವರು ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದರು. ಮತ್ತೆ ಇಷ್ಟು ವರ್ಷ ಗ್ಯಾಪ್ ತೆಗೆದುಕೊಂಡ ಯಶ್ ಅದಾದ ಬಳಿಕ ಕೆಜಿಎಫ್ ಭಾಗ-2 ಸಿನಿಮಾ ಮೂಲಕ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅಪಾರ ಅಭಿಮಾನಿಗಳ ಬಳಗ ಬಂದಿರುವ ನಟ ಯಶ್ ಅವರು, ಅವರ ಮುಂದಿನ ನಡೆ ಏನು ಎಂಬುದಾಗಿ ಅವರ ಅಭಿಮಾನಿಗಳು ಸಕ್ಕತ್ ತಲೆಕೆಡಿಸಿಕೊಂಡಿದ್ದಾರೆ.
ಕೆಜಿಎಫ್ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲಾ ಕಲಾವಿದರು ಈಗಾಗಲೇ ಬೇರೆ ಬೇರೆ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಹ ಪ್ರಭಾಸ್ ಅವರ ಜೊತೆ ಸಲಾರ್ ಚಿತ್ರದಲ್ಲಿ ಬಿಜಿಯಾಗಿದ್ದು, ಇನ್ನೊಂದು ಕಡೆ ಎನ್ಟಿಆರ್ ಅವರ ಜೊತೆಗೂ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ನಟ ಯಶ್ ಇನ್ನೂ ಗಡ್ಡ ತೆಗೆದಿಲ್ಲ. ಏನಾದ್ರು ಕೆಜಿಎಫ್ ಭಾಗ 3 ಬರುತ್ತಾ, ಅಥವಾ ಬೇರೆ ಪ್ಲಾನ್ ಏನಾದರೂ ಇದೆಯಾ. ಹೌದು ಅದಕ್ಕೆಲ್ಲ ಉತ್ತರ ಎಂಬಂತೆ ಅವರ ಮುಂದಿನ ಹೆಜ್ಜೆ ಏನು ಎಂದು ಇದೀಗ ಬಲ್ಲ ಮೂಲಗಳಿಂದ ಕೆಲ ಮಾಹಿತಿ ಲಭ್ಯವಾಗಿದೆ. ಯಶ್ ಮುಂದಿನ ಸಿನಿಮಾ ಯಾವುದು..? ಯಾವಾಗ ಸೆಟ್ ಇರುತ್ತದೆ, ಯಾವಾಗ ಸಿನಿಮಾ ಅನೌನ್ಸ್ ಆಗುತ್ತದೆ ಎಂಬ ಮಾಹಿತಿಯ ಲಭ್ಯವಾಗಿದೆ.
ಹೌದು ಗನ್ ಚಿತ್ರದ ಫೋಟೋ ಒಂದರಲ್ಲಿ ಕಾಣಿಸಿದ ಯಶ್ ಅವರ ಮುಂದಿನ ಚಿತ್ರ ಇದೆ ಎನ್ನುವ ಮಾತುಗಳು ಇದೀಗ ಕೇಳಿ ಬರುತ್ತಿವೆ. ಇನ್ನೊಂದು ಕಡೆ ಮಫ್ತಿ ಖ್ಯಾತಿ ನಿರ್ದೇಶಕ ನರ್ಥನ್ ಅವರ ಜೊತೆ ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ಬರುತ್ತದೆಯಾ, ಈ ಚಿತ್ರಕ್ಕೆ ಮೂರು ವರ್ಷದಿಂದ ಕಥೆ ಬರೆಯಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಮಾಹಿತಿ ಬಂದ ಪ್ರಕಾರ ಯಶ್ ಇಲ್ಲಿಯವರೆಗೂ ಏನನ್ನು ಹೇಳಿಲ್ಲ. ಸುಮ್ಮನೆ ನಗೆ ಬೀರುತ್ತಿದ್ದಾರೆ. ಆದರೆ ಗನ್ ಚಿತ್ರದಲ್ಲಿ ಯಶ್ ಅವರು ಕಾಣಿಸಿಕೊಳ್ಳಬಹುದು ಇಷ್ಟರಲ್ಲೇ ಮುಹೂರ್ತ ಕೂಡಾ ಫಿಕ್ಸ್ ಆಗಲಿದೆ ಎನ್ನುವ ಮಾತು ಮತ್ತೆ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇದಕ್ಕೆಲ್ಲಾ ನಟ ಯಶ್ ಅವರೇ ಉತ್ತರಿಸಬೇಕು. ಹೌದು ನೀವು ಕೂಡ ನಟ ಯಶ್ ಅವರ ಮುಂದಿನ ಸಿನಿಮಾ ಅಪ್ಡೇಟ್ಸ್ ಗಾಗಿ ಕಾಯುತ್ತಿದ್ದರೆ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ. ಹಾಗೆ ನಿಮಗೂ ಆ ಬಗ್ಗೆ ಮಾಹಿತಿ ಗೊತ್ತಿದ್ದಲ್ಲಿ, ನಮಗೆ ಕಾಮೆಂಟ್ ಸೆಕ್ಷನಲ್ಲಿ ಕಾಮೆಂಟ್ ಮಾಡಿ ಧನ್ಯವಾದಗಳು...