Yash Playing Cricket : ಕೆಜಿಎಫ್ 2 ಸೆಟ್ಟಿನಲಿ ಕ್ರಿಕೆಟ್ ಆಡಿದ್ದ ನಟ ಯಶ್..! ರಾಕಿ ಭಾಯ್ ಆಟ ಹೇಗಿದೆ ಗೊತ್ತಾ..?
Updated:Thursday, May 5, 2022, 15:55[IST]

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ. ಈ ಮೂಲಕ ಕನ್ನಡ ಚಿತ್ರರಂಗದ ಕಡೆ ಇಡಿ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳಕ, ಜೊತೆಗೆ ರಾಕಿ ಬಾಯ್ ನಟನೆ, ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಅವರು ಹಾಗೆ ಡಿಓಪಿ ಭುವನ್ ಗೌಡ ಎಂದು ಹೇಳಬಹುದು. ಕೇವಲ ಈ ನಾಲ್ಕು ಜನರು ಮಾತ್ರ ಕೆಜಿಎಫ್ ಸಕ್ಸಸ್ ಗೆ ಕಾರಣ ಎಂದು ಹೇಳಲಿಕ್ಕಾಗದು. ಕನ್ನಡದ ಜನತೆ ಕೂಡ ಕಾರಣ. ಕನ್ನಡಿಗರ ಪ್ರೊತ್ಸಾಹ ದೊಡ್ಡದು. ಜೊತೆಗೆ ಇಡೀ ಕೆಜಿಎಫ್ ಚಿತ್ರತಂಡ ಸಹ ತುಂಬಾ ಕಷ್ಟ ಪಟ್ಟಿದೆ. ಎಡಿಟರ್, ಆರ್ಟ್ ಡೈರೆಕ್ಟರ್ ಶಿವು ಅವರು ಕೂಡ ತುಂಬಾನೇ ಕಷ್ಟಪಟ್ಟು ಸಿನಿಮಾ ಅತ್ಯದ್ಭುತವಾಗಿ ಮೂಡಿಬರುವಂತೆ ಮಾಡಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಸಾಕಷ್ಟು ದಾಖಲೆಗಳನ್ನು ಮಾಡುತ್ತ ಮುನ್ನುಗ್ಗುತ್ತಿದ್ದು, ಈಗಲೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಈಗಾಗಲೇ ಸಾವಿರ ಕೋಟಿ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದ್ದು 1100 ಕೋಟಿ ಕಲೆಕ್ಷನ್ ಗಡಿ ದಾಟಿ ಮುನ್ನುಗ್ಗುತ್ತಿದೆ ಎಂದು ವರದಿಯಾಗಿದೆ. ಹೌದು ಕೆಜಿಎಫ್ ಚಿತ್ರದ ನಟ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದ ಸೆಟ್ಟಿನಲ್ಲಿ ಬಿಡುವಿನ ವೇಳೆ ಇಡೀ ಕೆಜಿಎಫ್ ಚಿತ್ರತಂಡದ ಜೊತೆ ಕ್ರಿಕೆಟ್ ಆಡಿದ್ದರು. ನಿರ್ದೇಶಕ ನೀಲ್ ಅವರು ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಇನ್ನೂ ಕೆಲವರು ಕೂಡ ಕ್ರಿಕೆಟ್ ಆಡಿದ್ದರು.
ಅದರ ವಿಡಿಯೋ ತುಣುಕು ಈಗ ಮತ್ತೆ ಇದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೀವು ಕೂಡ ಈ ವಿಡಿಯೋ ನೋಡಿ. ಕೆಜಿಎಫ್ ಸಿನಿಮಾ ನಿಮಗೆ ಎಷ್ಟು ಖುಷಿ ನೀಡಿದೆ ಎಂದು ಕಮೆಂಟ್ ಮಾಡಿ ತಿಳಿಸಿ. ಜೊತೆಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...