Yash: ಪ್ರಶಾಂತ್ ನೀಲ್ ನಮ್ಮ ಕನ್ನಡದ ಆಸ್ತಿ ಎಂದ ಯಶ್..! ಐದು ಪಿಲ್ಲರ್ ಬಗ್ಗೆ ಯಶ್ ಹೇಳಿಕೆ ಹೀಗಿತ್ತು..
Updated:Tuesday, May 3, 2022, 14:45[IST]

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಭಾಗ-2 ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೊರ ದೇಶಗಳಲ್ಲಿ ಸುಮಾರು 60 ದೇಶಗಳಲ್ಲಿ ಕೆಜಿಎಫ್ ಆರ್ಭಟ ಜೋರಾಗಿ ನಡೆಯುತ್ತಿದೆ. ಹೌದು ಕೆಜಿಎಫ್ ಭಾಗ-1 ಸಿನಿಮಾ ದೊಡ್ಡ ಹಿಟ್ ನೀಡಿತ್ತು. ಆಗ ಕೆಜಿಎಫ್ ಭಾಗ-1 ನೋಡಿದ ಸಿನಿ ಪ್ರಿಯರು ಕೆಜಿಎಫ್ ಭಾಗ-2 ಯಾವ ರೀತಿ ಬರಬಹುದು, ಇದರ ಸೀಕ್ವೆನ್ಸ್ ಹೇಗಿರುತ್ತೆ, ನಿರ್ದೇಶಕ ಪ್ರಶಾಂತ್ ನೀಲ್ ಅವರು ಯಾವ ರೀತಿಯಾಗಿ ಕೆಜಿಎಫ್ ಭಾಗ-2 ಸಿನಿಮಾ ತೆಗೆಯಬಹುದು ಎಂದು ತುಂಬಾ ಕಾತುರರಾಗಿದ್ದರು. ಅದಕ್ಕೆ ತಕ್ಕಂತೆ ಇದೀಗ ಕೆಜಿಎಫ್ ಭಾಗ-2 ದೊಡ್ಡ ಮಟ್ಟದಲ್ಲಿಯೇ ಯಶಸ್ಸು ಕಾಣುತ್ತಿದೆ. ಸಿನಿಮಾ ಬಿಡುಗಡೆಯಾಗಿ 15 ದಿನಕ್ಕೆ ಸಾವಿರ ಕೋಟಿ ಕಲೆಕ್ಷನ್ ಮಾಡಿ ಇನ್ನೂ ರಾಕಿ ಬಾಯ್ ಆರ್ಭಟ ಹಾಗೆ ಜೋರಾಗಿ ಮುನ್ನುಗ್ಗುತ್ತಿದೆ ಎಂದು ನಾವು ಹೇಳಬಹುದು.
ಹೌದು ಇದೀಗ ಸಂದರ್ಶನದಲ್ಲಿ ಮಾತನಾಡಿದ ಯಶ್ ಅವರು ಕೆಜಿಎಫ್ ಸಿನಿಮಾ ಬಗ್ಗೆ ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನದಲ್ಲಿ ಕೆಜಿಎಫ್ ಸಿನಿಮಾದ ಐದು ಫಿಲ್ಲರ್ ಗಳ ಬಗ್ಗೆ ನೀವೇನು ಹೇಳುತ್ತೀರಾ ಎಂಬ ಒಬ್ಬ ನಿರೂಪಕರ ಮಾತಿಗೆ ಯಶ್ ಅವರು ಮೊದಲಿಗೆ ಪ್ರಶಾಂತ್ ನೀಲ್ ಅವರ ಬಗ್ಗೆ ಹೇಳುತ್ತಾರೆ. ಪ್ರಶಾಂತ್ ಅವರು ಕನ್ನಡದ ಆಸ್ತಿ, ಅವರು ತುಂಬಾ ದೊಡ್ಡ ಪ್ರತಿಭೆ, ಅವರಿಗೆ ಗೊತ್ತಿಲ್ಲದೆ ಅವರಲ್ಲಿ ತುಂಬಾ ಶಕ್ತಿ ಅಡಗಿದೆ. ಇನ್ನು ವಿಶ್ವ ಮಟ್ಟದಲ್ಲಿ ಸದ್ದು ಮಾಡುವ ಸಿನಿಮಾಗಳು ಅವರಿಂದ ಬರುತ್ತವೆ. ಹಾಗೆ ವಿಜಯ್ ಕಿರಗಂದೂರು ಅವರ ಒಂದು ಹಳ್ಳಿ ಪ್ರತಿಭೆ ಎಂದು ಹೇಳುತ್ತೇನೆ, ಹಳ್ಳಿಯಿಂದ ಬಂದು ಒಂದು ನಿರ್ಮಾಣ ಸಂಸ್ಥೆ ತೆಗೆದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ, ಅವರ ಪ್ಲಾನ್ ಅಷ್ಟೇ ಕರೆಕ್ಟಾಗಿದೆ ಇನ್ನೂ ಕೂಡ ಬೆಳೆಯುತ್ತಾರೆ ಎಂದರು.
ಹಾಗೆ ಭುವನ್ ಗೌಡ ಅವರು ಶ್ರಮಜೀವಿ ಎಂದ ಯಶ್, ರವಿ ಬಸ್ರೂರು ಅವರಿಗೆ, ಒಂದು ಹಳ್ಳಿಯಲ್ಲಿ ಸ್ಟುಡಿಯೋ ತೆರೆಯುವ ಮೂಲಕ ಕನಸು ಕಂಡು, ಮ್ಯೂಸಿಕ್ ನೀಡಿ ತುಂಬಾ ಹಾರ್ಡ್ ವರ್ಕ್ ಮಾಡಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಇನ್ನು ಕೂಡ ಅವರು ಎತ್ತರಕ್ಕೆ ಬೆಳೆಯಲಿ ಎಂದರು ಯಶ್. ಹಾಗೆ ಕೊನೆಯಲ್ಲಿ ಆರ್ಟ್ ಡೈರೆಕ್ಟರ್ ಶಿವು ಅವರು ಕೂಡ ಸಣ್ಣ ವಿಷಯಗಳ ದೊಡ್ಡ ಮಟ್ಟದಲ್ಲಿ ಯಶಸ್ಸು ಆಗಬೇಕೆಂದು ಕೆಲಸ ಮಾಡುತ್ತಾರೆ ಎಂದರು. ಹಾಗೆ ಕೆಜಿಎಫ್ 2 ಎಡಿಟರ್ ಬಗ್ಗೆಯೂ ಯಶ್ ಮಾತನಾಡಿ ಅವರು ಕೂಡ ಎತ್ತರಕ್ಕೆ ಬೆಳೆಯಲಿ ಎಂದರು. ಕೊನೆಗೆ ಯಶ್, ನಾನು ಕೆಜಿಎಫ್ ನಲ್ಲಿ ಏನು ಮಾಡಿದ್ದೇನೆ ಅದನ್ನೆಲ್ಲ ಬಿಟ್ಟು ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದರು. ಈ ಮಾಹಿತಿ ಬಗ್ಗೆ ನಿಮ್ಮ ವಿವರ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...