ರಾಧಿಕಾ ಪಂಡಿತ್ ತ್ಯಾಗವನ್ನು ಬಿಚ್ಚಿಟ್ಟು ಸಲಾಂ ಹೊಡೆದ ರಾಕಿ ಭಾಯ್..! ಯಶ್ ಹೇಳಿದ್ದೆ ಬೇರೆ ನೋಡಿ

By Infoflick Correspondent

Updated:Friday, April 22, 2022, 10:28[IST]

ರಾಧಿಕಾ ಪಂಡಿತ್ ತ್ಯಾಗವನ್ನು ಬಿಚ್ಚಿಟ್ಟು ಸಲಾಂ ಹೊಡೆದ ರಾಕಿ ಭಾಯ್..! ಯಶ್ ಹೇಳಿದ್ದೆ ಬೇರೆ ನೋಡಿ

ಕನ್ನಡ ಸಿನಿಮಾರಂಗದಿಂದ ಇಂದು ನ್ಯಾಷನಲ್ ವರೆಗೂ ಸ್ಟಾರ್ ಗಿಟ್ಟಿಸಿಕೊಂಡಿರುವ ನಟ ಯಶ್ ಅವರು ಇದೀಗ ಅವರ ಪತ್ನಿ ನಟಿ ರಾಧಿಕಾ ಪಂಡಿತ್ ಅವರ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೌದು ಕೆಜಿಎಫ್ 2 ಚಿತ್ರ ಯಶಸ್ವಿಯಾಗುತ್ತಿದ್ದಂತೆ ತಮ್ಮ ಕುಟುಂಬಕ್ಕೆ ಸಮಯ ನೀಡಿರುವ ಯಶ್, ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಮಾಲ್ಡಿವ್ಸ್ ತೆರಳಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಿಂತ ಮುಂಚೆ ರಾಧಿಕಾ ಪಂಡಿತ್ ಅವರ ತ್ಯಾಗ ಎಂತಹದ್ದು, ಯಶ್ ತಾಯಿ ತಂದೆ ಯಾವ ರೀತಿ ತ್ಯಾಗ ಮಾಡಿದರು ಎಂಬುದಾಗಿ ಚಿತ್ರ ಬಿಡುಗಡೆ ಮುನ್ನವೇ ಸಂದರ್ಶನದಲ್ಲಿ ಅವರು ಕೆಲ ವಿಚಾರಗಳನ್ನು ಹೇಳಿಕೊಂಡಿದ್ದರು. 

ಹೌದು ನಟ ಯಶ್ ( Yash ) ಅವರು ಹೇಳುವ ಹಾಗೆ, ನನ್ನ ತಂದೆ ಒಬ್ಬ ಬಸ್ ಡ್ರೈವರ್, ನಾನು ಕೆಲಸಕ್ಕೆ ಹೋಗಬೇಡಿ, ನಾನು ಚೆನ್ನಾಗಿಯೇ ಕೆಲಸ ಮಾಡುತ್ತಿದ್ದೇನೆ, ನಾನು ನೋಡಿಕೊಂಡು ಹೋಗುತ್ತೇನೆ ಎಂದರೂ, ನಿನ್ನ ಕೆಲಸ ನೀನು ಮಾಡು, ನನ್ನ ಕೆಲಸ ನಾನು ಮಾಡುತ್ತೇನೆ ಎಂದಿದ್ದರು. ಹಾಗೆ ನನ್ನ ತಾಯಿ ಬಗ್ಗೆ ನಾನು ಏನು ಹೇಳಲಾಗುವುದಿಲ್ಲ, ಕೆಜಿಎಫ್ ಮೂವಿಲಿ ಬರುವ ನನ್ನ ತಾಯಿ ಪಾತ್ರ, ಮತ್ತು ನನ್ನ ನಿಜಜೀವನದ ತಾಯಿ ಎರಡು ಸೇಮ್ ಅವರನ್ನ ಮೆಚ್ಚಿಸಲು ಆಗುವುದಿಲ್ಲ. ಹಾಗೆ ನನ್ನ ಪತ್ನಿ ರಾಧಿಕಾ ಪಂಡಿತ್ ಬಗ್ಗೆ ಹೇಳೋದಾದರೆ, ನಾನು ರಾಧಿಕಾ  (Radhika pandit ) ಇಬ್ಬರು ಒಟ್ಟಿಗೆ ಟಿವಿಯ ಮೂಲಕ ಕೆಲಸ ಆರಂಭಿಸಿದೆವು, ಪತಿ-ಪತ್ನಿ ಗಿಂತ ಒಳ್ಳೆ ಸ್ನೇಹಿತರು ಆಗಿದ್ದೇವೆ. ರಾಧಿಕಾ ಪಂಡಿತ್ ನಟಿಯಾಗಿ ಹೆಚ್ಚು ಗುರುತಿಸಿಕೊಂಡರು ಹೊರಗಡೆ ಏನಾಗುತ್ತಿದೆ ಎಂದು ನೋಡುತ್ತ ಮನೆಯಲ್ಲಿ ಕೂರುವುದು ಸುಲಭದ ಮಾತಲ್ಲ.   

ಮಕ್ಕಳಿಗೆ ಜನ್ಮ ನೀಡಿದ ಮೇಲೆ ಅವರನ್ನ ಬೆಳೆಸುವುದು, ಅವ್ರನ್ನ ನೋಡಿಕೊಳ್ಳುವುದು ತುಂಬಾನೇ ಕಷ್ಟ. ಪೂರ್ತಿ ದಿನ ಮಕ್ಕಳ ಜೊತೆಗೆ ರಾಧಿಕಾ ಇರುತ್ತಾಳೆ, ಹತ್ತು-ಹದಿನೈದು ನಿಮಿಷ ಮಕ್ಕಳನ್ನು ನೋಡಿಕೊಳ್ಳುವುದು ನನಗೆ ತುಂಬಾ ಕಷ್ಟ ಆಗಿತ್ತು. ಜೊತೆಗೆ ಸಿನಿಮಾರಂಗದಲ್ಲಿ ನಾನು ಪಕ್ಕಾ ಲೋಕಲ್, ಬೇರೆ ಭಾಷೆ ಅಷ್ಟಾಗಿ ಗೊತ್ತಿರಲಿಲ್ಲ. ಇಂಗ್ಲಿಷ್ ಭಾಷೆ ನಿಜಕ್ಕೂ ಬರುತ್ತಿರಲಿಲ್ಲ, ಭಾಷೆ ಕಲಿಸುವಲ್ಲಿ ರಾಧಿಕಾ ತುಂಬಾ ಪ್ರೋತ್ಸಾಹ ನೀಡಿದ್ದಾಳೆ. ಹಾಗೆ ನಾನು ಎಷ್ಟೇ ಕಾನ್ಫಿಡೆಂಟ್ ಇದ್ದರೂ ಕೂಡ ಕೆಲವೊಂದು ವಿಚಾರಗಳ ಸಮಸ್ಯೆ ಎದುರಾದಾಗ, ರಾಧಿಕಾ ನಾನು ಏನು ಎಂಬುದಾಗಿ ತೋರಿಸುತ್ತಾಳೆ. ಅವಳ ತ್ಯಾಗಕ್ಕೆ ನಾನು ನಿಜಕ್ಕೂ ಸಲಾಮ್ ಹೊಡೆಯಲೇಬೇಕು ಎಂದಿದ್ದರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...