Yash : ಯಶ್ ಹಾಗೂ ರಾಧಿಕಾ ಅಂದು ಈ ಸೀರಿಯಲ್ ನಲ್ಲಿ ಹೇಗಿದ್ದರು..? ಹಳೆಯ ಕ್ಯೂಟ್ ವಿಡಿಯೋ ನೋಡಿ
Updated:Saturday, May 7, 2022, 21:50[IST]

ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಹೆಚ್ಚು ಜನಪ್ರಿಯತೆ ಹೊಂದಿರುವ ನಟ. ಕೇವಲ ಕೆಜಿಎಫ್ ಮೂಲಕವೇ ಅಲ್ಲದೇ ಕನ್ನಡ ಸಿನಿಮಾರಂಗದಲ್ಲಿ ಆರಂಭದಲ್ಲಿಯೇ ಕೆಲ ಹಿಟ್ ಸಿನಿಮಾಗಳ ನೀಡಿ ಕರ್ನಾಟಕದಾದ್ಯಂತ ಅಪರ ಅಭಿಮಾನಿ ಬಳಗವನ್ನು ಹೊಂದಿದ್ದರು. ಒಬ್ಬ ಉದಯೋನ್ಮುಖ ನಟ ಆಗಿ ಅತ್ಯದ್ಭುತ ಅಭಿನಯ ಮಾಡುತ್ತಾ ಜನರಿಂದ ಹೆಚ್ಚು ಗುರುತಿಸಿಕೊಳ್ಳುತ್ತ ಬಂದವರು. ನಟ ರಾಕಿಂಗ್ ಸ್ಟಾರ್ ಯಶ್ ಅವರು ಮಾಡಿದ ಎಲ್ಲಾ ಸಿನಿಮಾಗಳು ತುಂಬಾನೇ ಹಿಟ್ ಆಗಿದ್ದವು ಎಂದು ಹೇಳಬಹುದು. ಹೌದು ಕೆಜಿಎಫ್ ಮೂಲಕ ಇಡೀ ಪ್ರಪಂಚವೇ ಕನ್ನಡ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಅಭಿನಯ ಮಾಡಿ ಗೆದ್ದಿದ್ದಾರೆ ಯಶ್.
ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ಸಹ ಅತ್ಯದ್ಭುತ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆ ಆಗಿ 14 ದಿನಕ್ಕೆ ಸಾವಿರ ಕೋಟಿ ಕಲೆಕ್ಷನ್ ಮಾಡಿ ಯಶಸ್ಸಿನ ಉತ್ತುಂಗದಲ್ಲಿದೆ. ಇನ್ನೂ ಕೂಡ ಕಲೆಕ್ಷನ್ ವಿಚಾರದಲ್ಲಿ ಎಲ್ಲ ದಾಖಲೆಗಳನ್ನು ಉಡಿಸ್ ಮಾಡಿ ಮುನ್ನುಗ್ಗುತ್ತಿದೆ. ಹೌದು ಯಶ್ ಅವರು ಇದೀಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ ಎನ್ನಬಹುದು. ಕೇವಲ ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ಯಶ್ ಯಾರೆಂದು ಈಗ ಗೊತ್ತಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನಕ್ಕೆ ನೀವೂ ಶಭಾಷ್ ಎನ್ನಲೇಬೇಕು ರಾಧಿಕಾ ಪಂಡಿತ್ ಹಾಗೂ ಯಶ್ ಪ್ರೀತಿಸಿ ಮದುವೆ ಆಗಿದ್ದಾರೆ. ಹಾಗೆ ಇದೀಗ ಜೋಡಿ ಎರಡು ಮುದ್ದಾದ ಮಕ್ಕಳನ್ನು ಹೊಂದಿದ್ದು, ಆರಂಭದಲ್ಲಿ ಈ ಜೋಡಿ ಕೆಲ ಸೀರಿಯಲಲ್ಲಿ ಕಾಣಿಸಿಕೊಂಡಿತ್ತು.
ಹೌದು ಅದೇ ಕ್ಯೂಟ್ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಅಂದು ನಟ ಯಶ್ ಹೇಗೆ ಸೀರಿಯಲ್ ನಲ್ಲಿ ಅಭಿನಯ ಮಾಡಿದ್ದರು, ಜೊತೆಗೆ ಹೇಗೆ ಕಿರುತೆರೆಯ ಮೇಲೆ ಕಾಣಿಸಿದ್ದರು ಎಂದು ನೀವೇ ಈ ವಿಡಿಯೋದಲ್ಲಿ ನೋಡಿ. ಹಾಗೆ ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಈ ಕ್ಯೂಟ್ ವಿಡಿಯೋ ಇಷ್ಟ ಆದ್ರೆ ತಪ್ಪದೇನೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು... (video credit : v rocks )