Yash : ಮೂರನೇ ಮಗುವಿನ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಹೇಳಿದ್ದೇನು..?

By Infoflick Correspondent

Updated:Monday, September 19, 2022, 15:44[IST]

Yash : ಮೂರನೇ ಮಗುವಿನ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಹೇಳಿದ್ದೇನು..?


ರಾಕಿಂಗ್ ಸ್ಟಾರ್ ಯಶ್ ಈಗ ಇಂಟರ್ ನ್ಯಾಷನಲ್ ಸೆಲಬ್ರಿಟಿ. ತುಂಬಾ ಬ್ಯುಸಿಯಾಗಿರುವ ಯಶ್ ಅವರು ತಮ್ಮ ಫ್ಯಾಮಿಲಿಗೆ ಸಮಯ ಕೊಡುವುದನ್ನು ಮಾತ್ರ ಮರೆಯುವುದಿಲ್ಲ. ಎಷ್ಟೇ ಬ್ಯುಸಿ ಇದ್ದರೂ ಮನೆ ಮಕ್ಕಳು, ಪತ್ನಿ ಜೊತೆಗೆ ಕಾಲ ಕಳೆಯುತ್ತಾರೆ 

ಆದರೆ, ಕೋವಿಡ್ ನಿಂದಾಗಿ ಫ್ಯಾಮಿಲಿ ಜೊತೆಗೆ ಹೊರಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಮಕ್ಕಳು ಮತ್ತು ಮ,ತ್ನಿಯ ಜೊತೆಗೆ ಮನೆಯಿಂದ ಹೊರಗೂ ಕೂಡ ಬರುತ್ತಿರುತ್ತಾರೆ. ಇನ್ನು ಇದೀಗ ಇವರ ಮೂರನೇ ಮಗುವಿನ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಂದಿದೆ. 

ರಾಧಿಕಾ ಪಂಡಿತ್ ಹಾಗೂ ಯಶ್ ಇಬ್ಬರು ಒಟ್ಟಿಗೆ ಕಿರುತೆರೆಗೆ ಎಂಟ್ರಿಕೊಟ್ಟು ಹತ್ತು ವರ್ಷಗಳ ಕಾಲ ಗುಟ್ಟಾಗಿ ಪ್ರೀತಿಸಿ ಮದುವೆಯಾದರು. ಈಗ ಇವರಿಗೆ ಐರಾ ಹಾಗೂ ಯಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮದುವೆಯಅದ ಮೇಲೆ ರಾಧಿಕಾ ಪಂಡಿತ್ ಅವರು ಫುಲ್ ಟೈಮ್ ಮನೆಗೆ ಮೀಸಲಿಟ್ಟಿದ್ದಾರೆ. ಮನೆ, ಮಕ್ಕಳು ಎಂದು ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ಅವರು ಮತ್ತೆ ಸಿನಿಮಾ ಇಂಡಸ್ಟ್ರಿಗೆ ಬರುವ ಮನಸ್ಸು ಮಾಡಿಲ್ಲ. ಇನ್ನು ಫ್ಯಾಮಿಲಿ ಜೊತೆಗೆ ಬ್ಯುಸಿಯಾಗಿ ಬಿಟ್ಟಿದ್ದಾರೆ.   

ರಾಧಿಕಾ ಪಂಡಿತ್ ಅವರು ಬಣ್ಣದ ಲೋಕದಿಂದ ದೂರವಿದ್ದರೂ ಕೂಡ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ತಮ್ಮ ಮಕ್ಕಳಾದ ಐರಾ ಹಾಗೂ ಯಥರ್ವ್ ಆಡುವ ಆಟಗಳನ್ನು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ಇನ್ನು ಇದೀಗ ಯಶ್ ಅವರನ್ನು ಮೂರನೇ ಮಗುವಿನ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಆಗ ಯಶ್ ಅವರು ಮಂಡ್ಯ ಭಾಷೆಯಲ್ಲಿ ಹೋಗಲೇ, ನಿನ್ನ ಕೇಳಿ ಮಾಡಬೇಕಾ ಎಂದು ತಮಾಷೆಯಾಗಿ ಹೇಳಿದ್ದಾರೆ.