Yash : ಭಾರತದ ಟಾಪ್ 10 ನಟರ ಪಟ್ಟಿ ಬಿಡುಗಡೆ! ರಾಕಿಭಾಯ್ ಗೆ ಎಷ್ಟನೇ ಸ್ಥಾನ ?

By Infoflick Correspondent

Updated:Monday, June 13, 2022, 20:19[IST]

Yash : ಭಾರತದ ಟಾಪ್ 10 ನಟರ ಪಟ್ಟಿ ಬಿಡುಗಡೆ! ರಾಕಿಭಾಯ್ ಗೆ ಎಷ್ಟನೇ ಸ್ಥಾನ ?

ಭಾರತದ ಟಾಪ್ 10 ನಟರ ಪಟ್ಟಿಯೊಂದು ಬಿಡುಗಡೆ ಆಗಿದೆ. ಒರ್ಮಾಕ್ಸ್ ಸಂಸ್ಥೆಯು ಭಾರತದ ಟಾಪ್ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇತ್ತೀಚಿಗಿನ ಸಿನಿಮಾಗಳ ಯಶಸ್ಸನ್ನು ಆಧರಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪಟ್ಟಿಯಲ್ಲಿ ಬಾಲಿವುಡ್‌ನ ಒಬ್ಬ ನಟನ ಹೊರತಾಗಿ ಇನ್ನೆಲ್ಲವೂ ದಕ್ಷಿಣ ಭಾರತದ ನಟರೇ ಇದ್ದಾರೆ. ಪಟ್ಟಿಯಲ್ಲಿ ವಿಜಯ್, ಜೂ ಎನ್‌ಟಿಆರ್,ಪ್ರಭಾಸ್, ಅಲ್ಲು ಅರ್ಜುನ್, ಅಜಿತ್ ಕುಮಾರ್, ಯಶ್, ರಾಮ್ ಚರಣ್, ಸೂರ್ಯಾ, ಮಹೇಶ್ ಬಾಬು ಅವರುಗಳಿದ್ದಾರೆ. ಪಟ್ಟಿಯಲ್ಲಿರುವ ಏಕೈಕ ಬಾಲಿವುಡ್ ನಟನೆಂದರೆ ಅದು ಅಕ್ಷಯ್ ಕುಮಾರ್ ಮಾತ್ರ. 

ಒರ್ಮ್ಯಾಕ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ತಮಿಳಿನ ಸ್ಟಾರ್ ನಟ ವಿಜಯ್. ಎರಡನೇ ಸ್ಥಾನದಲ್ಲಿ ಜೂ ಎನ್‌ಟಿಆರ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಪ್ರಭಾಸ್ ಇದ್ದರೆ. ನಾಲ್ಕನೇ ಸ್ಥಾನದಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಐದನೇ ಸ್ಥಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದ್ದಾರೆ. ಆರನೇ ಸ್ಥಾನದಲ್ಲಿ ನಟ ಅಜಿತ್ ಕುಮಾರ್ ಇದ್ದಾರೆ. ಏಳನೇ ಸ್ಥಾನದಲ್ಲಿ ಯಶ್ ಇದ್ದಾರೆ. ಎಂಟನೇ ಸ್ಥಾನದಲ್ಲಿ RRR ಸ್ಟಾರ್ ರಾಮ್ ಚರಣ್, ಒಂಬತ್ತನೇ ಸ್ಥಾನದಲ್ಲಿ ತಮಿಳಿನ ಸೂರ್ಯ ಇದ್ದಾರೆ. ಕೊನೆಯ ಸ್ಥಾನದಲ್ಲಿ ಮಹೇಶ್ ಬಾಬು ಇದ್ದಾರೆ.   

ಸದ್ಯ ದಕ್ಷಿಣದ ನಟರು ದೊಡ್ಡ ಮಟ್ಟದ ಹವಾ ಎಬ್ಬಿಸಿದ್ದಾರೆ. ಈ ಪಟ್ಟಿ ಏಪ್ರಿಲ್ ತಿಂಗಳಿನ ಪಟ್ಟಿಯಾಗಿದ್ದು ತಿಂಗಳಿಗೊಮ್ಮೆ ಹೊಸ ಪಟ್ಟಿಯನ್ನು ಒರ್‌ಮ್ಯಾಕ್ಸ್ ಬಿಡುಗಡೆ ಮಾಡುತ್ತದೆ. ಪ್ರತಿ ತಿಂಗಳು ಈ ಪಟ್ಟಿ ಬದಲಾಗುತ್ತಿರುತ್ತದೆ.