ಅಮೀರ್ ಖಾನ್ ಕ್ಷಮೆ ಕೇಳುತ್ತಿದ್ದ ಹಾಗೆ ಪ್ರತಿಕ್ರಿಯೆ ಕೊಟ್ಟ ಯಶ್..! ಇದು ಕನ್ನಡಿಗರ ಪವರ್ ಅಂದ್ರೆ..!!

Updated: Thursday, November 25, 2021, 14:25 [IST]

ಅಮೀರ್ ಖಾನ್ ಕ್ಷಮೆ ಕೇಳುತ್ತಿದ್ದ ಹಾಗೆ ಪ್ರತಿಕ್ರಿಯೆ ಕೊಟ್ಟ ಯಶ್..! ಇದು ಕನ್ನಡಿಗರ ಪವರ್ ಅಂದ್ರೆ..!!

ಹೌದು ಸ್ನೇಹಿತರೆ ಕೆಜಿಎಫ್ 2 ಚಿತ್ರ ಏಪ್ರಿಲ್ 14, 2022 ರಂದು ಬಿಡುಗಡೆ ಆಗುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಕನ್ನಡ ಸಿನಿಮಾರಂಗಕ್ಕೆ ಮಾತ್ರ ಅಲ್ಲದೆ, ಅದಕ್ಕೆ ಮಾತ್ರ ಸೀಮಿತವಾಗಿರದೆ, ಕೆಜಿಎಫ್ 2 ಸಿನಿಮಾ ಇಡೀ ಪ್ರಪಂಚಕ್ಕೆ ಅದರ ತನವನ್ನು ತೋರಿಸಲು ರೆಡಿಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ 2 ಚಿತ್ರದ ಮೇಲೆ ಎಲ್ಲರಿಗೂ ಹೆಚ್ಚು ನಿರೀಕ್ಷೆ ಇದೆ. ಕೆಜಿಎಫ್ ಮೊದಲ ಭಾಗವನ್ನು ವೀಕ್ಷಿಸಿದ ಇಡೀ ಭಾರತ ದೇಶದ ಜನತೆ ಕೆಜಿಎಫ್ 2 ಯಾವಾಗ ಬಿಡುಗಡೆಯಾಗುತ್ತದೆ ಎಂದು ಈ ಮುಂಚೆಯೇ ಎದುರು ನೋಡುತ್ತಿದ್ದಾರೆ.

ಅದರ ಪ್ರಕಾರ ಏಪ್ರಿಲ್ 14ಕ್ಕೆ ಕೆಜಿಎಫ್ ಚಿತ್ರ ತೆರೆ ಮೇಲೆ ಬರಲಿದೆ. ಹೌದು ಏಪ್ರಿಲ್ 14ಕ್ಕೆ ಬಾಲಿವುಡ್ ಸಿನಿಮಾ ಅಮೀರ್ ಖಾನ್ ನಟನೆಯ ಸಿನಿಮಾ ಕೂಡ ತೆರೆಮೇಲೆ ಬರುತ್ತದೆ ಎಂದು ಮೊನ್ನೆ ಸುದ್ದಿ ಹೊರಬಿದ್ದಿತ್ತು. ನಂತರ ಇತ್ತೀಚಿಗೆ ಮತ್ತೆ ಅಮೀರ್ ಖಾನ್ ಅವರು ಯಶ್ ಅವರ ಬಳಿ ಕ್ಷಮೆ ಕೇಳಿರುವುದಾಗಿ ಕೇಳಿಬಂದಿತ್ತು. ಅಮೀರ್ ಖಾನ್ ಕ್ಷಮೆ ಕೇಳುತ್ತಿದ್ದ ಹಾಗೆ ಯಶ್ ಅವರು ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಏಪ್ರಿಲ್ 14ರಂದು ನೀವು ಕೂಡ ಸಿನಿಮಾ ರಿಲೀಸ್ ಮಾಡಿ, ಆದರೆ ನಾವು ಥಿಯೇಟರ್ ವಿಷಯಗಳಲ್ಲಿ ಸಂಧಾನ ಮಾಡಿಕೊಳ್ಳುವುದಿಲ್ಲ, ರಾಜಿ ಆಗುವುದಿಲ್ಲ, ನಿರ್ಮಾಪಕರ ಕಷ್ಟ ಅರ್ಥ ಆಗುತ್ತದೆ ಎಂದು ಭಾವಿಸಿದ್ದೇನೆ. ಜೊತೆಗೆ ವಿತರಕರ ಬಳಿಯೂ ಕೂಡ ಮಾತನಾಡುತ್ತೇನೆ. ನಿಮ್ಮ ಬೆಂಬಲಕ್ಕೆ ನಾವು ಜೊತೆ ಇರುತ್ತೇವೆ ಎನ್ನಲಾಗಿ ಉತ್ತರಿಸಿದ್ದಾರೆ ಎಂದು ಇದೀಗ ತಿಳಿದುಬಂದಿದೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ. ಒಂದು ವೇಳೆ ಕೆಜಿಎಫ್ ಬಿಡುಗಡೆ ಆದ ದಿನ ಏನಾದರೂ ಬಾಲಿವುಡ್ ಚಿತ್ರ ಮತ್ತೊಂದು ಯಾವುದಾದ್ರು ಬಂದರೆ ಅದಕ್ಕೆ ಹೆಚ್ಚು ನಷ್ಟ ಆಗುವುದು ಖಂಡಿತ. ಕಾರಣ ಇಷ್ಟೇ ವಿಶ್ಲೇಷಣೆ ಮಾಡಿದ ಹಾಗೆ, ಇಡೀ ಭಾರತ ಸಿನಿಪ್ರಿಯರು ಭರವಸೆ ನಿರೀಕ್ಷೆ ಇಟ್ಟುಕೊಂಡಿರುವುದು ಹೆಚ್ಚಾಗಿ ನಮ್ಮ ಕೆಜಿಎಫ್-2 ಚಿತ್ರದ ಮೇಲೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ವಿಡಿಯೋ ನೋಡಿ ಶೇರ್ ಮಾಡಿ.