Yash : ಹತ್ತು ಕೋಟಿ ಕೊಡುವ ಪಾನ್ ಮಸಾಲ ಜಾಹಿರಾತು ತಿರಸ್ಕರಿಸಿದ ಯಶ್ :ಸಲಾಂ ರಾಕಿ ಭಾಯಿ ಎಂದ ಅಭಿಮಾನಿಗಳು

By Infoflick Correspondent

Updated:Saturday, April 30, 2022, 18:05[IST]

Yash :  ಹತ್ತು ಕೋಟಿ ಕೊಡುವ  ಪಾನ್ ಮಸಾಲ ಜಾಹಿರಾತು ತಿರಸ್ಕರಿಸಿದ ಯಶ್ :ಸಲಾಂ ರಾಕಿ ಭಾಯಿ ಎಂದ ಅಭಿಮಾನಿಗಳು

ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ನಟ ಯಶ್ ಈಗ ಬಹುಮುಖ್ಯ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಅಭಿಮಾನಿಗಳ ಹಿತದೃಷ್ಟಿಯಿಂದ ಕೋಟಿಗಟ್ಟಲೆ ಹಣ ಬರುವ ಜಾಹಿರಾತನ್ನು ತಿರಸ್ಕರಿಸಿದ್ದಾರೆ. ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ಸ್ಟಾರ್ ಕಲಾವಿದರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಜಯ್ ದೇವಗನ್ ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಮೂವರು ಸ್ಟಾರ್ ಕಲಾವಿದರು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಸಿಕ್ಕಾಪಟ್ಟೆ ವಿರೋದ ವ್ಯಕ್ತವಾದ ಬೆನ್ನಲ್ಲೇ ಅಕ್ಷಯ್ ಕುಮಾರ್ ಜಾಹೀರಾತಿನಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದರು. ಅಭಿಮಾನಿಗಳಲ್ಲಿ ಕ್ಷಮೆ ಕೇಳುವ ಜೊತೆಗೆ ಇನ್ಮುಂದೆ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಕೆಜಿಎಫ್-2 ಸಿನಿಮಾ ಮೂಲಕ ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿರುವ ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರು ಕೋಟಿ ಕೋಟಿ ರೂಪಾಯಿಯ ಅತೀ ದೊಡ್ಡ ಮೊತ್ತದ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಯಶ್ ನಿರಾಕರಿಸಿದ್ದಾರೆ. ಪಾನ್ ಮಸಾಲ ಜಾಹೀರಾತಿನ ದೊಡ್ಡ ಆಫರ್ ರಾಕಿಂಗ್ ಸ್ಟಾರ್ ಯಶ್ ಅವರಿಗೂ ಬಂದಿತ್ತು ಎನ್ನುವ ಸುದ್ದಿ ಬಹಿರಂಗವಾಗಿದೆ. ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸಬಾರದು ಎನ್ನುವ ಕಾರಣಕ್ಕೆ ಕೋಟಿ ಕೊಟ್ಟರು ಇಂಥ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಯಶ್ ನಿರ್ಧಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.  

ಪಾನ್ ಮಸಾಲಾ ಮತ್ತು ಏಲಕ್ಕಿ ಬ್ರ್ಯಾಂಡ್‌ನ ಬಹುಕೋಟಿ ಎಂಡಾರ್ಸ್‌ಮೆಂಟ್ ಒಪ್ಪಂದವನ್ನು ರಾಕಿಂಗ್ ಸ್ಟಾರ್ ಯಶ್ ತಿರಸ್ಕರಿಸಿದ್ದಾರೆ. ಈ ಸುದ್ದಿಯನ್ನು ಯಶ್ ಅವರ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನಿರ್ವಹಿಸುವ ಸಂಸ್ಥೆ ಎಕ್ಸೀಡ್ ಎಂಟರ್‌ಟೇನ್‌ಮೆಂಟ್ ಖಚಿತ ಪಡಿಸಿದೆ. 

ಪಾನ್ ಮಸಾಲಾಗಳು ಮತ್ತು ಅಂತಹ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇದರಿಂದ ಜೀವಕ್ಕೆ ಅಪಾಯ ಉಂಟಾಗುತ್ತದೆ. ತಮ್ಮ ಅಭಿಮಾನಿಗಳ ಹಿತದೃಷ್ಟಿಯಿಂದ ವೈಯಕ್ತಿಕವಾಗಿ ಲಾಭದಾಯಕವಾದ ಒಪ್ಪಂದವನ್ನು ಯಶ್ ನಿರಾಕರಿಸಿದ್ದಾರೆ’’  

ಇತ್ತೀಚಿಗಷ್ಟೆ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಸಹ ಕೋಟಿ ವ್ಯಚ್ಚದ ತಂಬಾಕು ಜಾಹೀರಾತು ತಿರಸ್ಕರಿಸಿದ್ದರು. ಅಲ್ಲು ಅರ್ಜುನ್ ಅವರಿಗೂ ತಂಬಾಕು ಜಾಹೀರಾತು ಕಂಪನಿ ದೊಡ್ಡ ಆಫರ್ ನೀಡಿತ್ತು. ಆದರೆ ಅಲ್ಲು ಅರ್ಜುನ್ ಒಂದು ಕ್ಷಣವೂ ಯೋಚಿಸದೆ ಆ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು.  

ವೈಯಕ್ತಿಕವಾಗಿ ನಾನು ತಂಬಾಕು ಸಹಿತ ಉತ್ಪನ್ನ ಸೇವಿಸುವುದಿಲ್ಲ. ಅಭಿಮಾನಿಗಳು ಕೂಡ ಅದನ್ನು ಸೇವಿಸಬಾರದು. ಅದು ವ್ಯಸನವಾಗುತ್ತದೆ’’ ಎಂದು ಅಭಿಪ್ರಾಯ ಪಟ್ಟಿದ್ದ ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಪಾನ್ ಮಸಾಲಾ ಮತ್ತು ತಂಬಾಕು ಜಾಹೀರಾತಿಗೆ ‘ನೋ’ ಎಂದಿದ್ದರು.