ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವ ರಾಕಿಂಗ್ ಸ್ಟಾರ್ ಯಶ್: ಮೊದಲ ಬಾರಿಗೆ ಬೆಸ್ಟ್ ಫ್ರೆಂಡ್ ಬಗ್ಗೆ ಮಾತನಾಡಿದ ರಾಕಿ ಭಾಯ್

By Infoflick Correspondent

Updated:Saturday, April 9, 2022, 14:57[IST]

ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವ ರಾಕಿಂಗ್ ಸ್ಟಾರ್ ಯಶ್: ಮೊದಲ ಬಾರಿಗೆ ಬೆಸ್ಟ್  ಫ್ರೆಂಡ್ ಬಗ್ಗೆ ಮಾತನಾಡಿದ ರಾಕಿ ಭಾಯ್

   

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಟ್ರೈಲರ್ ರಿಲೀಸ್ ಕಾರ್ಯಕ್ರಮ ಕಳೆದ ತಿಂಗಳು ಜರುಗಿತು. ಈ ವೇಳೆ ಮೊದಲ ಬಾರಿಗೆ ಯಶ್ ಅವರು ತಮ್ಮ ಸ್ನೇಹಿತನ ಬಗ್ಗೆ ಮಾತನಾಡಿದ್ದಾರೆ. ಏಪ್ರಿಲ್ 14 ರಂದು 6000ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಕೆಜಿಎಫ್ 2 ಚಿತ್ರ ರಿಲೀಸ್ ಆಗಲಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶ-ವಿದೇಶಗಳಲ್ಲೂ ಮತ್ತು ಬೇರೆ ಬೇರೆ ಭಾಷೆಗಳಲ್ಲೂ ಕೆಜಿಎಫ್ 2 ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ.

ಈಗಾಗಲೇ ತೂಫಾನ್ ಹಾಡನ್ನು ರಿಲೀಸ್ ಮಾಡಿ ಕಮಾಲ್ ಮಾಡಿದೆ. ಇನ್ನು ಹೊಸ ರೀತಿಯಲ್ಲಿ ಚಿತ್ರವನ್ನು ಪ್ರಮೋಟ್ ಮಾಡಲು ಹೊಂಬಾಳೆ ಫಿಲಂಸ್ ಪ್ಲಾನ್ ಮಾಡಿಕೊಂಡಿದೆ. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್, ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರೈ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವಾರ ವಿಶ್ವಾದ್ಯಂತ ಕೆಜಿಎಫ್ 2 ಥಿಯೇಟರ್ ಗಳಲ್ಲಿ ಅಬ್ಬರಿಸಿ ಧೂಳ್ ಎಬ್ಬಿಸೋದ್ರಲ್ಲಿ ಡೌಟೇ ಇಲ್ಲ. 

ಇನ್ನು ಸದಾ ಸ್ನೇಃಕ್ಕೆ ಬೆಲೆ ಕೊಡುವ ಯಶ್ ಅವರು ಮೊದಲ ಬಾರಿಗೆ ವೇದಿಕೆ ಮೇಲೆ ತಮ್ಮ ಸ್ನೇಹಿತನ ಬಗ್ಗೆ ಮಾತನಾಡಿದ್ದಾರೆ. ಅದು ಬೇರೆ ಯಾರೂ ಅಲ್ಲ. ನಿರ್ದೇಶಕ್ ಡಾ. ಸೂರಿ. ಗೋಕುಲ ಚಿತ್ರದಿಂದ ಪ್ರತಿ ಹೆಜ್ಜೆಯಲ್ಲೂ ಜೊತೆ ಇರುವ ಆತ್ಮೀಯರಾದ ಡಾ ಸೂರಿ ಮತ್ತು ಯಶ್ ಅವರ ನನ್ನ ಸ್ನೇಹ ಬಲು ಅಪೂರ್ವವಾದದ್ದು. ಯಶ್ ಅವರ ಬೆಳವಣಿಗೆಗೆ ಸೂರಿ ಅವರು ತಮ್ಮ ಅದೆಷ್ಟೋ ತ್ಯಾಗ ಮಾಡಿದ್ದಾರೆ. ಲಕ್ಕಿ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದು, ಅಂದಿನಿಂದ ಇಂದಿನವರೆಗೂ ಯಶ್ ಅವರ ಪ್ರತೀ ಪ್ರಾಜೆಕ್ಟ್ ನಲ್ಲೂ ಸೂರಿ ಇದ್ದೇ ಇರುತ್ತಾರೆ. (video credit Lkannada pichhar)