ಪಡೆದಿದ್ದ ಹಣಕ್ಕೆ ಮೂರು ಪಟ್ಟು ಬಡ್ಡಿ ಸೇರಿಸಿ ಕೋಟಿ ಕೋಟಿ ವಾಪಸ್‌ ಮಾಡಿದ ರಾಕಿ ಬಾಯ್‌

Updated: Friday, September 17, 2021, 12:01 [IST]

ಪಡೆದಿದ್ದ ಹಣಕ್ಕೆ ಮೂರು ಪಟ್ಟು ಬಡ್ಡಿ ಸೇರಿಸಿ ಕೋಟಿ ಕೋಟಿ ವಾಪಸ್‌ ಮಾಡಿದ ರಾಕಿ ಬಾಯ್‌

ರಾಕಿಂಗ್‌ ಸ್ಟಾರ್‌ ಯಶ್‌ ಈಗ ನ್ಯಾಷನಲ್‌ ಹೀರೋ. ಕೆಜಿಎಫ್‌ ಚಿತ್ರದ ಮೂಲಕ ಬಿಗ್‌ ಬ್ರೇಕ್‌ ಪಡೆದ ಯಶ್‌, ಸದ್ಯಕ್ಕೆ ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ. ಕೆಜಿಎಫ್‌ 2 ಸಿನಿಮಾ 2022ರ ಏಪ್ರಿಲ್‌ 14 ರಂದು ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಕಳೆದ ಎರಡು ವರ್ಷದಿಂದ ಕೆಜಿಎಫ್‌ 2 ಚಿತ್ರ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. 

ಇನ್ನು ಯಶ್‌ ಕೌಟುಂಬಿಕ ಜೀವನಕ್ಕೆ ಬರೋದಾದ್ರೆ, 2016ರಲ್ಲಿ ಯಶ್‌ ಹಾಗೂ ರಾಧಿಕಾ ಪಂಡಿತ್‌ ಮದುವೆಯಾದರು. ರಾಧಿಕಾ ಪಂಡಿತ್‌ ಮನೆ, ಮಕ್ಕಳು ಅಂತ ತುಂಬಾ ಬ್ಯುಸಿಯಾಗಿಬಿಟ್ಟಿದ್ದಾರೆ. ಸಿನಿಮಾರಂಗದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್‌, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದಾ ಸಕ್ರಿಯರಾಗಿರುತ್ತಾರೆ. ಸಿನಿಮಾ ಕ್ಷೇತ್ರ ಬಿಟ್ಟು ಸರಿಸುಮಾರು ಐದು ವರ್ಷಗಳೇ ಕಳೆದ್ರೂ, ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಸದಾ ಪಾಸಿಟಿವ್‌ ವಿಚಾರಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿರುವ ರಾಧಿಕಾ ಪಂಡಿತ್‌ ಇದುವರೆಗೂ ಮತ್ತೆ ಸಿನಿರಂಗಕ್ಕೆ ಕಮ್‌ ಬ್ಯಾಕ್‌ ಮಾಡುವ ಬಗ್ಗೆ ಮಾತ್ರ ಎಲ್ಲೂ ಆಸೆ ವ್ಯಕ್ತಪಡಿಸಿಲ್ಲ. 

ತಮ್ಮ ಮಕ್ಕಳಾದ ಐರಾ ಹಾಗೂ ಯಥರ್ವ್‌ ಆಟ, ಪಾಠ, ತುಂಟಾಟಗಳ ಬಗ್ಗೆ ವೀಡಿಯೋ, ಫೋಟೋಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಅಪ್‌ ಲೋಡ್‌ ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ನಡೆದ ವರಮಹಾಲಕ್ಷ್ಮೀ ಹಬ್ಬಕ್ಕೆ ಕೂಡ ತಮ್ಮ ಮಕ್ಕಳ ಫೋಟೋಗಳನ್ನು ಹಾಕಿದ್ದರು. ಅಲ್ಲದೇ, ರಕ್ಷಾ ಬಂಧನ್‌ ದಿನ ಐರಾ, ಯಥರ್ವ್‌ ಗೆ ರಾಖಿ ಕಟ್ಟಿದ್ದಳು. ಜೊತೆಗೆ ಇಬ್ಬರು ಒಂದೇ ತೆರನಾದ ಬಟ್ಟೆಯನ್ನು ಧರಿಸಿ ಮಿಂಚಿದ್ದರು. ಇದರ ಫೋಟೋಗಳನ್ನು ಸಹ ಸೋಶಿಯಲ್‌ ಮೀಡಿಯಾದಲ್ಲಿ ರಾಧಿಕಾ ಪಂಡಿತ್‌ ಅಪ್‌ ಲೋಡ್‌ ಮಾಡಿ ಸಂಭ್ರಮಿಸಿದ್ದರು. ಈಗಾಗಲೇ ಐರಾ ಹಾಗೂ ಯಥರ್ವ್‌ ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವಿದೆ. 

ಇತ್ತೀಚೆಗಷ್ಟೇ ರಾಧಿಕಾ ಪಂಡಿತ್‌ ಹಾಗೂ ಯಶ್‌ ಅವರ ಕನಸಿನ ಮನೆಯ ಗೃಹಪ್ರವೇಶ ಸಮಾರಂಭವನ್ನು ಸಹ ನಡೆಸಲಾಯ್ತು. ಇದೀಗ ಯಶ್‌ ತಾವು ಪಡೆದ ಹಣಕ್ಕೆ ಮೂರು ಪಟ್ಟು ಬಡ್ಡಿಯನ್ನು ಸೇರಿಸಿ ವಾಪಸ್‌ ಮಾಡಿದ್ದಾರೆ. ಬರೋಬ್ಬರಿ 3 ಕೋಟಿ ಹಣವನ್ನುನಿರ್ಮಾಪಕರಾದ ಜಯಣ್ಣ ಅವರಿಗೆ ಹಣ ವಾಪಸ್‌ ಮಾಡಿದ್ದಾರೆ. ಮೈ ನೇಮ್‌ ಈಸ್‌ ಕಿರಾತಕ ಎಂಬ ಸಿನಿಮಾಗಾಗಿ ಯಶ್‌ ಅವರು ನಿರ್ಮಾಪಕರಾದ ಜಯಣ್ಣರಿಂದ ಅಡ್ವಾನ್ಸ್‌ ಪಡೆದಿದ್ದರು. ಇದಕ್ಕಾಗಿ ಕೆಜಿಎಫ್‌ ಚಿತ್ರಕ್ಕೆ ಬಿಟ್ಟಿದ್ದ ತಲೆ ಕೂದಲು ಹಾಗೂ ಗಡ್ಡವನ್ನು ತೆಗೆದಿದ್ದರು. ಆದರೆ ಕಾರಣಾಂತರಗಳಿಂದ ಆ ಚಿತ್ರದ ಶೂಟಿಂಗ್‌ ಕಂಪ್ಲೀಟ್‌ ಮಾಡಲು ಆಗಿರಲಿಲ್ಲ. ಹೀಗಾಗಿ ಅವರು ಇದೀಗ ಮೂರು ಕೋಟಿ ಹಣವನ್ನುಜಯಣ್ಣ  ಅವರಿಗೆ ಹಿಂದಿರುಗಿಸಿದ್ದಾರೆ.( ವಿಡಿಯೋ ಕೃಪೆ : ನ್ಯೂಸ್ ಫಸ್ಟ್ ಕನ್ನಡ )