ಕನ್ನಡ ಚಿತ್ರರಂಗವೇ ನನ್ನ ಉಸಿರು ಎಂದು ಹೇಳಿದ ಯಶ್ ಯಾಕೆ ಗೊತ್ತಾ ?
Updated:Monday, April 25, 2022, 16:57[IST]

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಇದೀಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹೌದು ಕನ್ನಡದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಂದ ಶಬ್ಭಾಷ್ ಅನಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಕೆಜಿಎಫ್ 2 ಇದೀಗ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಸಕ್ಕತ್ ಧೂಳೆಬ್ಬಿಸುತ್ತಿದೆ. ಎರಡು ವಾರದ ಅಂತ್ಯಕ್ಕೆ ಕಲೆಕ್ಷನ್ ವಿಚಾರ ನೋಡುವುದಾದರೆ ಒಟ್ಟು 900 ಕೋಟಿ ಕಲೆಕ್ಷನ್ ಮಾಡಿರುವುದಾಗಿ ತಿಳಿದು ಬರುತ್ತಿದೆ. ಹೌದು ಇತ್ತೀಚಿಗಷ್ಟೇ ನಟ ಯಶ್ ಅವರ ಅಭಿಮಾನಿಗಳು ಪ್ರೀತಿಯಿಂದ ತೋರಿದ ಪ್ರೀತಿಗೆ ಧನ್ಯವಾದ ತಿಳಿಸಲು ಒಂದು ಇಂಗ್ಲೀಷ್ ಕತೆಯ ಮೂಲಕ ಬಂದಿದ್ದರು.
ಅದನ್ನು ನೋಡಿ ಕೆಲವರು ಇಂಗ್ಲಿಷ್, ಯಶ್ ಬಾಯಿಯಲ್ಲಿ ಕನ್ನಡ ಮಾಯವಾಗಿದೆ ಎಂದು ಕಮೆಂಟ್ ಮಾಡಿದರೆ, ಇನ್ನು ಕೆಲವರು ಅವರು ಅಭಿನಯ ಮಾಡಿದ ಚಿತ್ರ ವಿಶ್ವದಾದ್ಯಂತ ಓಡುತ್ತಿರುವ ಚಿತ್ರ. ಯಶ್ ಅವರು ಇದೀಗ ಮೂಲೆಮೂಲೆಯಲ್ಲೂ ಬೇರೆಬೇರೆ ಚಿತ್ರರಂಗಗಳಲ್ಲಿ ಅಭಿಮಾನಿಗಳ ಹೊಂದಿದ್ದಾರೆ. ಹಾಗಾಗಿ ಎಲ್ಲರಿಗೂ ಅರ್ಥ ಆಗಲೆಂದು ಹಾಗೆ ಇಂಗ್ಲಿಷ್ನಲ್ಲಿ ಮಾತನಾಡಿದ್ದಾರೆ ಅಷ್ಟೇ, ಅದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡಿದ್ದಾರೆ ಇನ್ನೂ ಕೆಲ ಯಶ್ ಫ್ಯಾನ್ಸ್. ಇದಕ್ಕೆ ಉತ್ತರವಾಗಿ ಯಶ್ ಅವರು ಇದೀಗ ಕನ್ನಡದ ವಿಚಾರಕ್ಕೆ ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿಯ ವಿಚಾರಕ್ಕೆ ಒಂದು ನ್ಯಾಷನಲ್ ಚಾನೆಲ್ ನಲ್ಲಿ ವಿಷಯ ಹೇಳಿದ್ದಾರೆ. ನ್ಯಾಷನಲ್ ನ್ಯೂಸ್ ಚಾನೆಲ್ ನಲ್ಲಿ ನಾನು ಎಂದೆಂದಿಗೂ ಕನ್ನಡ, ನಟನೆ ಕನ್ನಡ ಸಿನಿಮಾದಲ್ಲೇ ನಟನೆ ಮಾಡುತ್ತೇನೆ. ಹಾಗೆ ಕನ್ನಡ ಸಿನಿಮಾರಂಗದಲ್ಲಿ ಇರುತ್ತೇನೆ ಎಂದಿದ್ದಾರೆ.
ಜೊತೆಗೆ ನಾನು ಒಂದೇ ಪ್ರಾಂತ್ಯಕ್ಕೆ ಸೀಮಿತ ಆಗಿರುವುದಿಲ್ಲ. ದೇಶದ ತುಂಬಾ ನನ್ನ ಪ್ರೀತಿಸುವ ಅಭಿಮಾನಿಗಳಿದ್ದಾರೆ. ನನ್ನ ಹೃದಯದಿಂದ ಮಾತ್ರ ನಾನು ಯಾವತ್ತಿಗೂ ಎಂದಿಗೂ ಕನ್ನಡಿಗನೇ ಎಂದು ಹೇಳಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಇದನ್ನ ಕೇಳಿ ಕನ್ನಡಿಗರು ಖುಷಿಯಾಗಿದ್ದು ಈ ಮಾಹಿತಿಯ ಹೆಚ್ಚಿನ ಮಟ್ಟದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು ...