Yash: ಯಶ್ ದೊಡ್ಡತನ ಅಂದ್ರೆ ಇದು..! ಅದಕ್ಕೆ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಅನ್ಸುತ್ತೆ ನೋಡಿ..!
Updated:Wednesday, April 27, 2022, 18:02[IST]

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2 ಪ್ಯಾನ್ ಇಂಡಿಯಾ ಸಿನಿಮಾ ಅದ್ದೂರಿಯಾಗಿ ಓಪನಿಂಗ್ ಪಡೆದುಕೊಂಡಿದ್ದು ಸುಮಾರು 60 ದೇಶಗಳಲ್ಲೂ ಸಕ್ಕತ್ತಾಗಿ ರಾರಾಜಿಸುತ್ತಿದೆ. ರಾಕಿ ಬಾಯ್ ಎಂಟ್ರಿಗೆ ಕೆಜಿಎಫ್-2 ಹವಾ ಎದ್ದಿದ್ದು 1000 ಕೋಟಿ ಕಲೆಕ್ಷನ್ ಗೆ ಹತ್ತಿರವಾಗಿದೆ. ಯಶ್ ಅವರು ಕೆಜಿಎಫ್ ಸಿನಿಮಾದಲ್ಲಿ ಅತ್ಯದ್ಭುತವಾಗಿ ಮಾಸ್ ಆಗಿ ಅಭಿನಯಿಸಿದ್ದು ಅಪಾರ ಅಭಿಮಾನಿ ಬಳಗವನ್ನು ಇಡೀ ದೇಶದಾದ್ಯಂತ ಹೊಂದಿದ್ದಾರೆ ಎಂದು ಹೇಳಬಹುದು. ಹೌದು ನಟ ಯಶ್ ಅವರಿಗೆ ಕನ್ನಡ ಇಂಡಸ್ಟ್ರಿಯ ಮೇಲೆ ಅಪಾರ ಗೌರವ.
ಹಾಗೆ ಕನ್ನಡ ಎಂದರೆ ಎಲ್ಲಿಲ್ಲದ ಪ್ರೀತಿ ಎಂದು ಹೇಳಬಹುದು ಆದ್ರೆ ಇವರಿಗೆ ಒಬ್ಬರಿಗೆನೆ ಹೆಚ್ಚು ಎಂದು ಹೇಳಲಿಕ್ಕಾಗದು. ಕನ್ನಡಿಗರ ಬಗ್ಗೆ ಕನ್ನಡ ಸಿನಿಮಾರಂಗ ಬಗ್ಗೆ ಎಲ್ಲೆ ಹೋದರೂ ಕನ್ನಡದ ನಟರಿಗೆ ಹೆಚ್ಚು ಕಾಳಜಿ. ಆದ್ರೆ ಹೊರಗಡೆ ಮೊದಲು ಬೆಲೆ ಕಡಿಮೆ ಎನ್ನುವಂತೆ ಬೇರೆಯವರು ಮಾಡುತ್ತಿದ್ದರು. ಆ ರೀತಿ ಬೇರೆಯವರು ನಮ್ಮನ್ನು ನೋಡುತ್ತಿದ್ದರು. ಅದನ್ನು ಹೋಗಲಾಡಿಸಬೇಕು, ಕನ್ನಡಿಗರಿಗೂ ಸಹ ಬೆಲೆ ಸಿಗಬೇಕು. ಕನ್ನಡ ಇಂಡಸ್ಟ್ರಿ ತಾಕತ್ತು ಎಷ್ಟು ಹಾಗೆ ಏನು ಎಂಬುದಾಗಿ ಎಲ್ಲರಿಗೆ ತೋರಿಸಬೇಕು, ಹಾಗೆ ಕನ್ನಡ ಇಂಡಸ್ಟ್ರಿ ಸಿನಿಮಾ ನೋಡುವಾಗ ಚಪ್ಪಾಳೆ ಹೊಡೆದು ತಿರುಗಿ ನೋಡುವಂತೆ ಮಾಡಬೇಕು ಎಂದು ಒಂದು ಕನಸು ಕಂಡಿದ್ದರು ಯಶ್.
ಹೌದು ಅದರಂತೆ ಇದೀಗ ಕೆಜಿಎಫ್ ಕನಸು ನನಸಾಗಿದೆ. ಯಶ್ ಅವರು ಒಂದು ಸಂದರ್ಭದಲ್ಲಿ ಹೇಳಿದ ಇಂತಹ ಮಾತುಗಳಿಂದಲೇ ಈ ದೊಡ್ಡತನಕ್ಕೆ ಇಷ್ಟು ಬೆಳೆದರೋ ಎಂದೆನಿಸುತ್ತದೆ. ಯಶ್ ಅವರು ಹೇಳುವ ಕೆಜಿಎಫ್ ಕೇವಲ ಯಶ್ ಅವರ ಸಿನಿಮಾ ಅಲ್ಲ. ಕೆಜಿಎಫ್ ಒಂದು ಕನಸು. ಒಂದು ಮುಂದಿನ ಹೆಜ್ಜೆ. ಯಾರು ಮಾಡದೆ ಇರುವುದನ್ನು ನಾವು ಮಾಡುತ್ತಿಲ್ಲ. ಆದರೆ ಭಾರತದಲ್ಲಿ ಕನ್ನಡ ಇಂಡಸ್ಟ್ರಿ ತಾಕತ್ತು ಏನು ಎಂಬುದಾಗಿ ತೋರಿಸಬೇಕಿತ್ತು. ಪ್ರಪಂಚಕ್ಕೆ ತೋರಿಸಬೇಕಿತ್ತು. ಅದನ್ನು ಮಾಡಲು ಮುಂದಾಗಿದ್ದೆವು. ನಮ್ಮ ಕನ್ನಡ ಸಿನಿರಂಗದ ಪೊಟೆನ್ಶಿಯಲ್ ಏನು, ಹಾಗೆ ನಮ್ಮ ಟೆಕ್ನಿಷಿಯನ್ಸ್ ಗಳ ತಾಕತ್ತು ಎಂಬುದಾಗಿ ಪ್ರಪಂಚಕ್ಕೆ ಪರಿಚಯಿಸಬೇಕಿತ್ತು. ಇದೀಗ ಅದು ಸಾಬೀತಾಗಿದೆ ಎಂದಿದ್ದಾರೆ. ಯಶ್ ಅವರ ಈ ಮಾತುಗಳನ್ನು ಕೇಳಿದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ವಿಡಿಯೋ ನೀವು ಒಮ್ಮೆ ನೋಡಿ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ...
<