Yash : ಇನ್ಮುಂದೆ ಸಿನಿಮಾ ಮಾಡಲ್ಲ..! ಯಶ್ ಅವರ ವಿಡೀಯೋ ಶೇರ್ ಮಾಡಿಕೊಂಡು ಉಗಿಸಿಕೊಂಡ ಯುವಕ..!

By Infoflick Correspondent

Updated:Saturday, August 27, 2022, 15:11[IST]

Yash : ಇನ್ಮುಂದೆ ಸಿನಿಮಾ ಮಾಡಲ್ಲ..! ಯಶ್ ಅವರ ವಿಡೀಯೋ ಶೇರ್ ಮಾಡಿಕೊಂಡು ಉಗಿಸಿಕೊಂಡ ಯುವಕ..!

ಕೆಜಿಎಫ್ ಭಾಗ ಒಂದು ಭಾಗ ಎರಡು ಸಿನಿಮಾ ಮೂಲಕ ಎಲ್ಲಾ ಸಿನಿರಂಗಕ್ಕೂ ಪರಿಚಯ ಆದ ನಟ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಹೌದು ಕೆಜಿಎಫ್ ಭಾಗ-1 ಯಶಸ್ವಿ ಆದ ಬಳಿಕ ಭಾಗ 2 ಇನ್ನಷ್ಟು ಚೆನ್ನಾಗಿ ಮಾಡಬೇಕು ಎಂದು ಕನ್ನಡ ಸಿನಿಮಾ ರಂಗವನ್ನು ಇನ್ನಷ್ಟು ಬೆಳೆಸಬೇಕೆಂದು ಕೆಲಸ ಮಾಡಿದರು. ಇಡೀ ವಿಶ್ವವೇ ಕನ್ನಡ ಸಿನಿರಂಗ ಕಡೆ ತಿರುಗಿ ನೋಡಬೇಕು ಎನ್ನುವಂತೆ ಕೆಲಸ ಮಾಡಿದ್ದಾರೆ. ಅದರಂತೆ ಈಗಾಗಲೇ ಅದರ ಪ್ರತಿಫಲ ಕೂಡ ಸಿಕ್ಕಿದೆ, ಯಶ್ ಅಭಿನಯದ ಪ್ರಶಾಂತ್ ನಿರ್ದೇಶನದ ಕೆ ಜಿ ಎಫ್ ಭಾಗ ಎರಡು ವಿಶ್ವದ ತುಂಬಾ ಭರ್ಜರಿ ಬಿಡುಗಡೆಯಾಗಿ 1200 ಕೋಟಿ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿತು.    

ಹೌದು ಇದು ಕನ್ನಡಿಗರ ಹೆಮ್ಮೆ,, ಹೀಗಿರುವಾಗ ಯಶ್ ಅವರ ಮುಂದಿನ ನಡೆ ಏನು, ಮುಂದಿನ ಅವರ ಸಿನಿಮಾ ಯಾವ ರೀತಿ ಇರುತ್ತದೆ ಎಂಬ ಮಾತು ಕೇಳಿ ಬರುತ್ತಿದ್ದಂತೆ, ಅವರ ಒಂದು ವಿಡಿಯೋ ಭಾರಿ ವೈರಲಾಗುತ್ತಿದೆ. ಹೌದು ಯಶ್ ಅವರು ಒಮ್ಮೆ ಸಂದರ್ಶನ ಕೊಟ್ಟ ವಿಡಿಯೋದಲ್ಲಿ ಯಶ್ ಹೇಳುತ್ತಾರೆ, ಅಭಿಮಾನಿಗಳು ಹಾಗೇನೇ ಜನರು ನನಗೆ ಒಂದು ಜವಾಬ್ದಾರಿ ನೀಡಿದ್ದಾರೆ. ಸಿನಿಮಾ ಹೇಗೆ ಮಾಡುತ್ತೀಯೋ ಅದು ನಿನಗೆ ಬಿಟ್ಟಿದ್ದು, ಒಳ್ಳೆ ಕಥೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವ ಎನ್ನುವ ನಿರ್ಧಾರ ಹೇಳಿದ್ದಾರೆ. ಹಾಗಾಗಿ ನಾನು ಸಿನಿಮಾ ಮಾಡುವ ಮುನ್ನ ಸಿನಿಮಾ ಕಥೆಯನ್ನು ಕೇಳಬೇಕು ಚೆನ್ನಾಗಿ ಇದ್ದರೆ ನಮ್ಮ ಕೈಗೆತ್ತಿಕೊಳ್ಳಬೇಕು. ಜನರಿಗೆ ಒಂದು ಒಳ್ಳೆಯ ಮನರಂಜನೆ ನೀಡಬೇಕು ಆ ನಿಟ್ಟಿನಲ್ಲಿ ಕೆಲಸ ಆಗಬೇಕು.

ಕೆಲ ನಿರ್ದೇಶಕರು ಸಿನಿಮಾ ಮಾಡ್ತಾರೆ, ಆದ್ರೂ ನಮ್ಮ ಒಪ್ಪಿಗೆ ಪಡೆದು ಮಾಡುತ್ತಾರೆ. ಕನ್ನಡ ಸಿನಿಮಾರಂಗವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು ಎಂದು ಹೇಳಿದ್ದರು.. ಅದೇ ವಿಡಿಯೋವನ್ನು ಒಬ್ಬ ಯುವಕ ಶೇರ್ ಮಾಡಿಕೊಂಡು ಯೂಟ್ಯೂಬ್ ನಲ್ಲಿ ಇನ್ನು ಮುಂದೆ ಯಶ್ ಇನ್ಮುಂದೆ ಯಾವ ಸಿನಿಮಾ ಮಾಡುವುದಿಲ್ಲ ಎನ್ನುವ ಹೇಳಿಕೆ ಕೊಟ್ಟುಕೊಂಡು ವಿಡಿಯೋ ಹರಿಬಿಟ್ಟಿದ್ದಾನೆ. ಅದನ್ನು ನೋಡಿದ ನೆಟ್ಟಿಗರು ಈತನಿಗೆ ಕ್ಯಾಕರ್ಸಿ ಉಗಿಯುತ್ತಿದ್ದಾರೆ. ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ. ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,,ನಟ ಯಶ್ ಅವರ ಈ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ಕೂಡ ನಮ್ಮ ಕಮೆಂಟ್ ಸೆಕ್ಷನ್ನಲ್ಲಿ ಹೇಳಿ ಧನ್ಯವಾದಗಳು..